ಕೆಸಿಆರ್ ಪುತ್ರಿ ಕವಿತಾ ಪರಿಚಯಸ್ಥನ ಬಂಧನ

Social Share

ನವದೆಹಲಿ,ಫೆ.8- ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‍ರಾವ್ ಅವರ ಪುತ್ರಿ ಕವಿತಾ ಅವರ ಮಾಜಿ ಉದ್ಯೋಗಿ ಬುಚ್ಚಿಬಾಬು ಅವರನ್ನು ದೆಹಲಿ ಮದ್ಯ ನೀತಿ ಪ್ರಕರಣದ ಆರೋಪದ ಹಿನ್ನೆಯಲ್ಲಿ ಸಿಬಿಐ ಬಂಧಿಸಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬುಚ್ಚಿಬಾಬು ಕೈವಾಡವಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅವರನ್ನು ವಿಚಾರಣೆಗೆಂದು ತೆಲಂಗಾಣದಿಂದ ಕರೆಸಿಕೊಂಡು ನಿನ್ನೆ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಈಗ ರದ್ದದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಬಾಬು ಅವರ ಪಾತ್ರವಿದೆ ಎಂದು ಸಿಬಿಐ ಗಂಭೀರ ಆರೋಪ ಮಾಡಿದೆ. ಕಳೆದ ಡಿಸಂಬರ್ 12 ರಂದು ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದ್ರಾಬಾದ್‍ನಲ್ಲಿ ಸಿಬಿಐ ತಂಡವು ಕೆಸಿಆರ್ ಅವರ ಪುತ್ರಿ ಕವಿತಾ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ರಾಹುಲ್‍ಗಾಂಧಿ ವಿರುದ್ಧ ಕ್ರಮಕ್ಕೆ ಬಿಜೆಪಿ ಸಂಸದ ಆಗ್ರಹ

ಆರ್ಥಿಕ ಅಪರಾಧಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಕೆ ಕವಿತಾ ಅವರು ಮದ್ಯ ನೀತಿ ಪ್ರಕರಣದಲ್ಲಿ ಕಿಕ್‍ಬ್ಯಾಕ್‍ನಿಂದ ಲಾಭ ಪಡೆದ ಸೌತ್ ಕಾರ್ಟೆಲï ನ ಭಾಗವಾಗಿದ್ದರು ಎಂದು ಆರೋಪಿಸಿತ್ತು.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿರುವ ರಾಜಧಾನಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಆದೇಶಿಸಿದ ನಂತರ ಎಎಪಿ ಸರ್ಕಾರವು ಕಳೆದ ವರ್ಷ ಹೊಸ ಮದ್ಯ ನೀತಿಯನ್ನು ಹಿಂತೆಗೆದುಕೊಂಡಿತು.

ಸೌತ್ ಗ್ರೂಫ್ ಎಂದು ಕರೆಯಲ್ಪಡುವ ಲಾಬಿಯಿಂದ ಸಹಕಾರ ಮತ್ತು ಕಿಕ್‍ಬ್ಯಾಕ್‍ಗಳೊಂದಿಗೆ ದೆಹಲಿಯ ಅಬಕಾರಿ ನೀತಿಯನ್ನು ಮಾರ್ಪಡಿಸುವಾಗ ಅಕ್ರಮಗಳು ನಡೆದಿವೆ ಎಂದು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಹೇಳಿಕೊಂಡಿವೆ.

ಭೂಕಂಪನ ಪೀಡಿತ ಟರ್ಕಿಯಲ್ಲಿ ನರಕಯಾತನೆ: ಸಾವಿನ ಸಂಖ್ಯೆ 8000ಕ್ಕೇರಿಕೆ

ಈ ಹಗರಣದಲ್ಲಿ ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯ ಕವಿತಾ, ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್‍ನ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಮತ್ತು ಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಹೆಸರುಗಳು ತಳಕು ಹಾಕಿಕೊಂಡಿವೆ.

KCR,daughter, K Kavitha, ex-CA, arrested, CBI, Delhi, liquor policy, scam,

Articles You Might Like

Share This Article