ಇಡಿ ಅಧಿಕಾರಿಗಳಿಂದ ಮಾ.10ಕ್ಕೆ ಕೆಸಿಆರ್ ಪುತ್ರಿ ವಿಚಾರಣೆ

Social Share

ನವದೆಹಲಿ,ಮಾ.8- ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರ ಪುತ್ರಿ ಕವಿತಾ ಅವರನ್ನು ಮಾ.10ರಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ಅವರನ್ನು ಕಳೆದ ಡಿಸೆಂಬರ್ 12 ರಂದು ಸಿಬಿಐ ಅಧಿಕಾರಿಗಳು ಹೈದರಾಬಾದ್‍ನಲ್ಲಿ ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ಜಾರಿ ನಿರ್ದೇಶನಾಲಯವು ಮದ್ಯದ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿದೆ. ದೆಹಲಿ ನ್ಯಾಯಾಲಯವು ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಮಾರ್ಚ್ 13 ರವರೆಗೆ ಇಡಿ ಕಸ್ಟಡಿಗೆ ಮತ್ತು ಮದ್ಯದ ಉದ್ಯಮಿ ಅಮನದೀಪ್ ಧಲ್ ಅವರನ್ನು ಮಾರ್ಚ್ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಕವಿತಾ ಅವರಿಗೆ ಸಮನ್ಸ್ ನೀಡಲಾಗಿದೆ.

ಜಗತ್ತನ್ನು ಆರೋಗ್ಯಕರ ತಾಣವನ್ನಾಗಿಸುವ ಭಾರತೀಯ ಸಿರಿಧಾನ್ಯಗಳು

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕಿಕ್‍ಬ್ಯಾಕ್‍ನಿಂದ ಲಾಭ ಪಡೆದ ಸೌತ್ ಕಾರ್ಟೆಲïನಲ್ಲಿ ಕವಿತಾ ಇದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ನವೆಂಬರ್ 2021 ರಲ್ಲಿ ಪ್ರಾರಂಭವಾದ ದೆಹಲಿ ಮದ್ಯ ನೀತಿಯನ್ನು ಕಳೆದ ವರ್ಷ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾದ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು.

ಸೌತ್ ಕಾರ್ಟೆಲ ಲಾಬಿಯಿಂದ ಕಿಕ್‍ಬ್ಯಾಕ್‍ನೊಂದಿಗೆ ಮದ್ಯದ ನೀತಿಯನ್ನು ಮಾರ್ಪಡಿಸುವಾಗ ಹಲವಾರು ಅಕ್ರಮಗಳನ್ನು ಎಸಗಲಾಗಿದೆ ಎಂದು ಇಡಿ ಮತ್ತು ಸಿಬಿಐ ಸಂಸ್ಥೆಗಳು ಆರೋಪಿಸಿವೆ.

ಈ ಹಗರಣದಲ್ಲಿ ಕವಿತಾ, ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್‍ನ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಮತ್ತು ಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಇದ್ದರು ಎನ್ನಲಾಗಿದೆ.

ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಬಿಸಿಗಾಳಿಯಿಂದ ತಪ್ಪಿಸಿಕೊಳ್ಳೋದು ಹೇಗೆ..?

ನನ್ನ ಮೇಲಿನ ಆರೋಪಗಳು ಸಂಪೂರ್ಣವಾಗಿ ಹುಸಿ ಮತ್ತು ಸುಳ್ಳು. ಸಮಯ ಮಾತ್ರ ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸುತ್ತದೆ. ಇದು ಬಿಜೆಪಿಯ ರಾಜಕೀಯ ಸೇಡು ಎಂದು ಕವಿತಾ ಆರೋಪಿಸಿದ್ದಾರೆ.

KCR, daughter, Kavitha, questioned, ED, Delhi,

Articles You Might Like

Share This Article