ಬೆಂಗಳೂರು, ಜ.13- ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಮಾಡುವ ಪ್ರತಿಯೊಬ್ಬ ಪದವಿ ವಿದ್ಯಾರ್ಥಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವ ನಿಯಮವನ್ನು ಕಡ್ಡಾಯ ಗೊಳಿಸುವುದು ಅನಿವಾರ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್ .ನಾಗಾಭರಣ ಹೇಳಿದ್ದಾರೆ.
ಹೊಸ ರಾಷ್ಟ್ರಿಯ ಶಿಕ್ಷಣ ನೀತಿ ಅನ್ವಯ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯವಾಗಿ ಬೋಧಿಸುವ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇತೀಚಿನ ವರ್ಷಗಳಲ್ಲಿ ಶಿಕ್ಷಣ ಕಲಿಯುವ ಮತ್ತು ಕಲಿಸುವ ವ್ಯವಸ್ಥೆಯಲ್ಲಿ ಸಾಕಷ್ಟು ಸ್ಥಿತ್ಯಂತವಾಗಿದೆ.
ಆಧುನಿಕತೆ ಮತ್ತು ಕಾಪೆರ್ರೇಟ್ ಶಿಕ್ಷಣ ವ್ಯವಸ್ಥೆಯಲ್ಲಿ ಜನ ಭಾಷೆಯಾದ ಕನ್ನಡದ ಸ್ಥಾನಮಾನ ಏರುಪೇರುಗುತ್ತಿರುವುದು ವಿಷಾದನೀಯ.
ಕರ್ನಾಟಕದಲ್ಲಿ ಶಿಕ್ಷಣ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಜ್ಞಾನವನ್ನು ಪಡೆಯುವುದು ಅವಶ್ಯ ಎಂಬ ತಿಳುವಳಿಕೆ ಶಿಕ್ಷಣ ವ್ಯವಸ್ಥೆ ಮಹತ್ವವನ್ನು ಅರಿಯದೆ ಉದಾರನೀತಿಯಿಂದಾಗಿ ಪರೋಕ್ಷವಾಗಿ ಕನ್ನಡವನ್ನು ನಿರಾಕಸಲು ಕಾಪೆರ್ರೇಟ್ ವ್ಯವಸ್ಥೆ ಇಂಬು ನೀಡುವಂತಿದೆ.
ಇಂಗ್ಲಿಷ್‍ನಂತೆ ಕನ್ನಡವನ್ನು ಕಡ್ಡಾಯಗೊಳಿಸದ ಹೊರೆತು ಈ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ನಮ್ಮ ನೆಲದಲ್ಲಿ ಶಿಕ್ಷಣ ಪಡೆದ ಅನ್ಯಭಾಷಿಕ ಇಲ್ಲೇ ಉದ್ಯೋಗ ಮಾಡಬೇಕಾದ ಸಂದರ್ಭದಲ್ಲಿ ಇಲ್ಲಿನ ಜನರೊಂದಿಗೆ ಸಂವಹನ ನಡೆಸಲು ಕನ್ನಡ ಅಗತ್ಯವೇ ಹೊರತು ಸಂಸ್ಕøತವಲ್ಲ ಎಂಬುದನ್ನು ಹೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಪ್ರಶ್ನಿಸಿ ಸಂಸ್ಕøತ ಭಾರತಿ ಟ್ರಸ್ಟï ಮತ್ತು ಇತರ ಉಳಿದವರು ಆಲೋಚಿಸಬೇಕು ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಡಳಿತದಲ್ಲಿ ಕನ್ನಡ, ಶಿಕ್ಷಣದಲ್ಲಿ ಕನ್ನಡ, ಉದ್ಯೋಗದಲ್ಲಿ ಕನ್ನಡಗರಿಗೆ ಪ್ರಾತಿನಿಧ್ಯತೆ, ಎಂಬ ಶೀಷಿಕೆಯಡಿ ಕಾರ್ಯೋನ್ಮುಕವಾಗಿ ಕೆಲಸ ಮಾಡುತ್ತೇವೆ.
