ಸೂರತ್, ಜು.21 – ಇದೇ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೋಪಿಸಲು ಗುಜರಾತ್ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಹು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಸೂರತ್‍ನ ಟೌನ್ ಹಾಲ್‍ಪಕ್ಷದ ಮುಂಖಂಡರ ಜೊತೆ ನಡೆಸಿದ ಸಭೆ ಭಾರಿ ಕುತೂಹಲ ಕೆರಳಿಸಿತು.
ತಡರಾತ್ರಿ ಸೂರತ್‍ಗೆ ಆಗಮಿಸಿ ಗುಜರಾತ್‍ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಯಾವ ಯೋಜನೆ ರೋಪಿಸುತ್ತೇವೆ ತನ್ನ ಕಾರ್ಯಸೂಚಿಗಳೇನು ಎಂದು ಜನರೊಂದಿಗೆ ಹಂಚಿಕೊಳ್ಳಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ರಾಜ್ಯಕ್ಕೆ ಇದು ಅವರ ಎರಡನೇ ಭೇಟಿಯಾಗಿದೆ.
ಇತ್ತೀಚೆಗೆ ನಾನು ಗುಜರಾತ್‍ಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ ಮತ್ತು ರಾಜ್ಯದ ಜನರು ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ. ಗುಜರಾತ್ ಜನರು 27 ವರ್ಷಗಳ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ ಮತ್ತು ಬದಲಾವಣೆಯನ್ನು ಬಯಸಿದ್ದಾರೆ ಎಂದು ಹೇಳಿದರು.
ನಾವು ಸಾರ್ವಜನಿಕರೊಂದಿಗೆ ಅವರಿಗೆ ಏನು ಬೇಕು ಎಂಬುದರ ಕುರಿತು ನಾವು ಮಾತನಾಡಿದ್ದೇವೆ ಮತ್ತು ನಾವು ಅಧಿಕಾರಕ್ಕೆ ಬಂದ ನಂತರ ನಮ್ಮ ಅಜೆಂಡಾ ಏನೆಂಬುದನ್ನು ಅವರ ಮುಂದೆ ಇಡುತ್ತೇವೆ ಎಂದು ಅವರು ಹೇಳಿದರು.
ಗುಜರಾತ್ ಘಟಕದ ಬಿಜೆಪಿ ಮುಖ್ಯಸ್ಥ ಸಿ ಆರ್ ಪಾಟೀಲ್ ಅವರ ಹೆಸರಿಸದಿದ್ದರೂ, ಇತ್ತೀಚಿನ ಅವರ ಟೀಕೆಗೆ ತಿರುಗೇಟು ನೀಡಿದರು.
ಡಿಸೆಂಬರ್‍ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು ಎಎಪಿ ಉಚಿತ ವಿದ್ಯುತ್ ಅನ್ನು ಪ್ರಮುಖ ಚುನಾವಣಾ ಯೋಜನೆಯನ್ನಾಗಿ ಮಾಡಿದೆ. ಹಿಂದಿನ ಸಾಂಪ್ರದಾಯದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆಯುವುದಿಲ್ಲ ಆಮ್ ಆದ್ಮಿ ಪಕ್ಷ ಪ್ರಮುಖ ಭೂಮಿ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.