ಪಠ್ಯ ಪುಸ್ತಕಗಳಲ್ಲಿ ಕೆಳದಿ ರಾಣಿ ಚೆನ್ನಮ್ಮ ವಿಚಾರಧಾರೆ ಅಳವಡಿಕೆ : ಸಿಎಂ

Social Share

ಬೆಂಗಳೂರು, ಫೆ.27- ಕೆಳದಿ ರಾಣಿ ಚೆನ್ನಮ್ಮ ಅವರ ವಿಚಾರಧಾರೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೆಳದಿ ರಾಣಿ ಚೆನ್ನಮ್ಮ ಅವರ 350ನೆ ಪುಣ್ಯತಿಥಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಅವರು ಮಾತನಾಡಿದರು.
ಮುಂದಿನ ವರ್ಷ ಕೆಳದಿಯಲ್ಲೇ ಚೆನ್ನಮ್ಮನ ದಿನಾಚರಣೆ ಮಾಡಲಾಗುವುದು. ಕೆಳದಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. ರಾಜ್ಯವೆಂದರೆ ರಸ್ತೆ, ಕಟ್ಟಡಕ್ಕೆ ಸೀಮಿತವಲ್ಲ. ಭವ್ಯ ಪರಂಪರೆ, ಸಂಸ್ಕøತಿ, ಭಾಷೆ, ಜೀವನಶೈಲಿ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಒಳಗೊಂಡಿರಬೇಕು. ಅಂತಹ ಪರಂಪರೆ ನಮ್ಮದು.
ಪ್ರಗತಿಪರ ಚಿಂತನೆ ಮೂಲಕ ಗಟ್ಟಿತನವನ್ನು ತೋರಿಸಿದ ಕೆಳದಿ ಚೆನ್ನಮ್ಮ ದೂರದೃಷ್ಟಿ ಹೊಂದಿದ್ದರು. ಶತ್ರುವನ್ನು ಕೂಡ ಕ್ಷಮಿಸುವ ದೊಡ್ಡಗುಣ ಅವರಲ್ಲಿತ್ತು. ಮೂರು ಬಾರಿ ದಾಳಿ ಮಾಡಿದ ಶತ್ರುವನ್ನೂ ಕ್ಷಮಿಸಿ ಆಶ್ರಯ ನೀಡುವ ಮೂಲಕ ದೊಡ್ಡಗುಣವನ್ನು ಅವರು ತೋರಿದ್ದಾರೆ. ಅಂತಹವರ ವಿಚಾರಧಾರೆಗಳು ಮಕ್ಕಳ ಅರಿವಿಗೆ ಬರಬೇಕು ಎಂದರು.
ಸ್ವಾಸ್ಥ್ಯ ಕರ್ನಾಟಕ ಹಾಗೂ ಐತಿಹಾಸಿಕ ಕರ್ನಾಟಕದ ಸಂಗಮವಾಗಿದೆ ಎಂದ ಅವರು, ರಾಜ್ಯದಲ್ಲಿ ಆರೋಗ್ಯ ಸೇವೆಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗಿದೆ. ಅದೇ ರೀತಿ ಕೋವಿಡ್ ಸಂದರ್ಭದಲ್ಲೂ ನೀಡಿದ್ದು, ಇನ್ನು ಮುಂದೆಯೂ ಮುಂದುವರಿಯಲಿದೆ ಎಂದು ಹೇಳಿದರು.ಕಳೆದ 20 ರಿಂದ 25 ವರ್ಷಗಳ ಹಿಂದೆ ಪೋಲಿಯೊ ರೋಗದಿಂದ ಉಂಟಾದ ದುಷ್ಪರಿಣಾಮವನ್ನು ನಾವು ಕಣ್ಣಾರೆ ನೋಡಿದ್ದೇವೆ.
ಅಂಗವಿಕಲತೆಗೆ ಮುಖ್ಯ ಕಾರಣ ಪೋಲಿಯೊ. ದೊಡ್ಡ ಪ್ರಮಾಣದಲ್ಲಿ ಜೀವಹಾನಿಯೂ ಆಗಿತ್ತು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ರೋಗ ದೇಹವನ್ನು ನಿಷ್ಕ್ರಿಯಗೊಳಿಸುತ್ತದೆ. ಸಮಾಜದಲ್ಲಿ ಒಂದು ರೀತಿಯ ಕ್ಷೋಭೆಯನ್ನೇ ಉಂಟುಮಾಡಿತ್ತು ಎಂದು ಹೇಳಿದರು. ಬಾಯಿಯ ಮೂಲಕ ಲಸಿಕೆ ನೀಡುವವರೆಗೂ ಅದರ ಉಪಟಳವಿತ್ತು.
ಪ್ರಗತಿಪರ ರಾಷ್ಟ್ರಗಳಿಗಿಂತ ನಮ್ಮ ರಾಷ್ಟ್ರದಲ್ಲಿ ಆರೋಗ್ಯ ಅಭಿಯಾನದಲ್ಲಿ ಹೆಚ್ಚು ಆದ್ಯತೆ ಮೇಲೆ ಅನುಷ್ಠಾನ ಮಾಡಲಾಗುತ್ತಿದೆ. ಜನರ ಸ್ಪಂದನೆಯೂ ಕೂಡ ಉತ್ತಮವಾಗಿದೆ. ಬಡತನ, ಅಪೌಷ್ಠಿಕತೆ ಇರುವ ಕಡೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕ್ಷಯರೋಗವು ಒಂದು ಕಾಲದಲ್ಲಿ ಸಮುದಾಯಕ್ಕೆ ಹರಡಿ ತೊಂದರೆಯನ್ನುಂಟುಮಾಡಿತ್ತು.
ಸಂಪೂರ್ಣವಾಗಿ ನಿರ್ಮೂಲನೆಯಾಗದಿದ್ದರೂ ಕ್ಷಯರೋಗದ ಮೇಲೆ ನಿಯಂತ್ರಣ ಸಾಸಲಾಗಿದೆ. ಅದಕ್ಕೆ ಚಿಕಿತ್ಸೆಯೂ ಇದೆ. ಅದೇ ರೀತಿ ಕಾಲರಾ, ಮಲೇರಿಯಾ ರೋಗಗಳ ಮೇಲೆಯೂ ನಿಯಂತ್ರಣ ಸಾಸಲಾಗಿದೆ. ಪ್ಲೇಗ್ ಮಹಾಮಾರಿಗೆ ದೀರ್ಘಕಾಲದವರೆಗೆ ಔಷ ಲಭ್ಯವಿರಲಿಲ್ಲ. ಈಗ ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಣೆಯಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಪಲ್ಸ್ ಪೋಲಿಯೊ ಹನಿ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದರು. ಸ್ವಚ್ಛತೆ ಇರುವ ಕಡೆಗಳಲ್ಲಿ ಹಲವು ರೋಗಗಳನ್ನು ದೂರವಿಡಬಹುದಾಗಿದೆ. ಪ್ರತಿಯೊಬ್ಬರ ಸ್ವಾಸ್ಥ್ಯಕ್ಕೆ ಯೋಗ ಮುಖ್ಯ. ಪ್ರಧಾನಮಂತ್ರಿಯವರ ಸಕಾಲಿಕ ನಿರ್ಧಾರದಿಂದಾಗಿ 130 ಕೋಟಿ ಜನರಿಗೂ ಉಚಿತ ಕೋವಿಡ್ ಲಸಿಕೆ ನೀಡಿ ಮೂರನೆ ಅಲೆಯಲ್ಲಿ ನಿಯಂತ್ರಣ ಸಾಸಲು ಸಾಧ್ಯವಾಯಿತು.
ದೇಶೀಯವಾಗಿ ಉತ್ಪಾದಿಸಿದ ಲಸಿಕೆಗಳಿಗೆ ವಿದೇಶದಲ್ಲೂ ಮನ್ನಣೆ ಇದೆ ಎಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಡಾ.ಕೆ.ಸುಧಾಕರ್, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Articles You Might Like

Share This Article