ಮಾ.24ಕ್ಕೆ ಬಸವಣ್ಣ-ಕೆಂಪೇಗೌಡರ ಪ್ರತಿಮೆ ಅನಾವರಣ

Social Share

ಬೆಂಗಳೂರು,ಮಾ.9- ವಿಧಾನ ಸೌಧದ ಮುಂದೆ ನೂತನವಾಗಿ ನಿರ್ಮಾಣಗೊಂಡಿರುವ ಕಾಯಕಯೋಗಿ ಜಗಜ್ಯೋತಿ ಶ್ರೀ ಬಸವೇಶ್ವರ ಹಾಗೂ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳು ಇದೇ 24ರಂದು ಅನಾವರಣಗೊಳ್ಳಲಿದೆ.

ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಅಂದು ಎರಡು ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಉದ್ಘಾಟನೆ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ.

ಕೇಂದ್ರ ಚುನಾವಣಾ ಆಯೋಗ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿದರೆ ನಂತರ ಆಯೋಗದ ಅನುಮತಿ ಪಡೆದು ಉದ್ಘಾಟಿಸಬೇಕಾಗುತ್ತದೆ. ಅದಕ್ಕೂ ಮೊದಲೇ ಸಿದ್ದಗೊಂಡಿರುವ ಎರಡೂ ಪ್ರತಿಮೆಗಳನ್ನು ಅನಾವರಣ ಮಾಡಲು ತೀರ್ಮಾನಿಸಲಾಗಿದೆ.

ದೇವೇಗೌಡರು ಅಡಿಗಲ್ಲಿಟ್ಟ ಕಾಮಗಾರಿಗೆ ಮರು ನಾಮಕರಣ : ರೇವಣ್ಣ ಆಕ್ಷೇಪ

ಜಗಜ್ಯೋತಿ ಬಸವೇಶ್ವರರು ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣದಿಂದ ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಲಿಂಗಾಯಿತ ಮತ್ತು ಒಕ್ಕಲಿಗರಿಗೆ ಸಂದೇಶ ರವಾನಿಸಿ ಮತಗಿಟ್ಟಿಸಿಕೊಳ್ಳುವ ಲೆಕ್ಕಾಚಾರವು ಇದರಲ್ಲಿ ಅಡಗಿದೆ.

ಈಗಾಗಲೇ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ನಿರ್ಮಿಸಲಾಗಿದೆ. 24ರಂದು ಉದ್ಘಾಟನೆಗೊಂಡ ಬಳಿಕ 25ರಂದು ಮಧ್ಯಕರ್ನಾಟಕದ ರಾಜಧಾನಿ ಎಂದೇ ಹೆಸರಾಗಿರುವ ದಾವಣಗೆರೆಯಲ್ಲಿ ಬಿಜೆಪಿಯ ಮಹಾಸಂಗಮ ಸಮಾವೇಶ ನಡೆಯಲಿದೆ.

ಪ್ರಭಾವಿಗಳ ಪಾಲಾಗುತ್ತಿದೆ ಬಿಡಿಎಗೆ ಸೇರಿದ 1ಸಾವಿರ ಕೋಟಿ ಬೆಲೆಯ ಅಸ್ತಿ : ಉಮಾಪತಿ ಶ್ರೀನಿವಾಸಗೌಡ

ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರಮೋದಿ ಆಗಮಿಸಲಿದ್ದಾರೆ. ಇದು ಬಿಜೆಪಿಯ ಶಕ್ತಿ ಪ್ರದರ್ಶನ ಸಹ ಆಗಲಿದೆ.

Kempegowda, Basavanna, statues, unveiling, March,

Articles You Might Like

Share This Article