ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!

Social Share

ತಿರುವನಂತಪುರ.ಸೆ.19- ಅದೃಷ್ಠ ಒಲಿದರೆ ಕುಚೇಲನು ಕ್ಷಣ ಮಾತ್ರದಲ್ಲೇ ಕುಬೇರನಾಗುತ್ತಾನೆ ಎಂಬ ಮಾತಿನಂತೆ ಎಲ್ಲರೂ ನಿಬ್ಬೆರಗಾಗುವಂತೆ ಇಲ್ಲಿನ ಆಟೋ ಚಾಲಕನೊಬ್ಬನಿಗೆ 25 ಕೋಟಿ ರೂ ಲಾಟರಿ ಹೊಡೆದಿದೆ. ಶ್ರೀವರಾಹಂ ಮೂಲದ ವೃತ್ತಿಯಲ್ಲಿ ಬಾಣಸಿಗನಾದ ಅನೂಪ್‍ಗೆ ಅದೃಷ್ಠ ಒಲಿದು ಬಂದಿದ್ದು ಈಗ ಆತನ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಕೆಲ ದಿನದ ಹಿಂದೆ ಮಲೇಷಿಯಾಕ್ಕೆ ಹೋಗಿ ಬಾಣಸಿಗನಾಗಿ ಕೆಲಸ ಮಾಡಲು ಬ್ಯಾಂಕ್‍ಯೊಂದರಲ್ಲಿ 3 ಲಕ್ಷ ಸಾಲಕ್ಕೆ ಅರ್ಜಿ ಹಾಕಿದ್ದ ಅನೂಪ್‍ಗೆ ಭಾನುವಾರ ಡ್ರಾ ಆದ ಕೇರಳದ ಓಣಂ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ಬಹುಮಾನ ಬಂದಿದೆ.

ಗುರುವಾರ ಆತನಿಗೆ 3 ಲಕ್ಷ ಸಾಲ ನೀಡಲು ಹಣಕಾಸು ಸಂಸ್ಥೆ ಒಪ್ಪಿಕೊಂಡಿತ್ತು. ಆ ಖಿಷಿಯಲ್ಲೇ ಶನಿವಾರವಷ್ಟೇ ಇಲ್ಲಿನ ಶ್ರೀವರಾಹಂನಲ್ಲಿ ಲಾಟರಿ ಟಿಕೆಟ್ ಖರೀದಿಸಿದರು ಆದರೆ ಅದೇನನ್ನಿಸಿತೋ ಏನೋ ,ಇದು ಬೇಡ, ಮತ್ತೊಂದು ಟಿಕೆಟ್ ಕೊಡಿ ಎಂದು ಪಡೆದುಕೊಂಡರು ಆ ನಂಬರ್‍ಗೆ ಬಂಪರ್ ಲಾಟರಿ ಹೊಡೆದಿದೆ.

ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-09-2022)

ಈ ಬಗ್ಗೆ ಮಾತನಾಡಿರುವ ಅನುಪ್ ಬ್ಯಾಂಕ್‍ಗೆ ಇಂದು ಕರೆ ಮಾಡಿ ಸಾಲ ಬೇಡ ಎಂದು ಹೇಳಿದ್ದೇನೆ ,ಮಲೇಷ್ಯಾಕ್ಕೂ ಹೋಗುವುದಿಲ್ಲ ಎಂದರು. ನಾನು ಕಳೆದ 22 ವರ್ಷಗಳಿಂದ ಲಾಟರಿ ಟಿಕೆಟïಗಳನ್ನು ಖರೀದಿಸುತ್ತಿದ್ದೆ, ಈ ಹಿಂದೆಯೂ ಹಲವು ಬಾರಿ ಸ್ವಲ್ಪ ಹಣ ಗೆದ್ದಿದೆ, ಒಮ್ಮೆ ಮಾತ್ರ ಗರಿಷ್ಠ 5,000 ವರೆಗಿನ ಬಹುಮಾನ ಬಂದಿತ್ತು ಎಂದು ಅನೂಪ್ ಹೇಳಿದರು.

ನಾನು ಗೆಲ್ಲುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ನನ್ನ ಮೊಬೈಲ್‍ಗೆ ಬಂದಿದ್ದ ಎಸ್‍ಎಂಎಸ್ ಪರಿಶೀಲಿಸಿದಾಗ ನನಗೆ ಲಾಟರಿ ಹೊಡೆದಿರುವುದು ತಿಳಿಯಿತು ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ, ನನ್ನ ಹೆಂಡತಿಗೆ ತೋರಿಸಿದೆ. ಇದು ಗೆಲುವಿನ ಸಂಖ್ಯೆ ಎಂದು ಅವರು ದೃಢಪಡಿಸಿದರು ಎಂದು ಖುಷಿಯ ಕ್ಷಣವನ್ನು ವಿವರಿಸಿದರು.

ತೆರಿಗೆ ಕಡಿತಗೊಳಿಸಿದ ನಂತರ, ಅನೂಪ್ ಬಹುಶಃ ಸುಮಾರು 15 ಕೋಟಿ ಹಣ ಸಿಗಬಹುದು. ಇಷ್ಟೊಂದು ಹಣ ಏನು ಮಾಡ್ತೀರಿ ಎಂದು ಕೇಳಿದಾಗ, ಒಂದು ಮನೆ ಕಟ್ಟಿಕೊಳ್ಳಬೇಕು, ಹಳೆಯ ಸಾಲ ತೀರಿಸಿಕೊಳ್ಳಬೇಕು. ಅದು ನನ್ನ ಆದ್ಯತೆಎಂದು ತಿಳಿಸಿದರು.

ಇದಲ್ಲದೆ, ಅನೂಪ್ ತನ್ನ ಸಂಬಂಕರಿಗೆ ಸಹಾಯ ಮಾಡುತ್ತೇನೆ, ಕೆಲವು ಸೇವಾ ಕಾರ್ಯ ಮಾಡಿ ಮುಂದಿನ ಜೀವನಕ್ಕೆ ಕೇರಳದಲ್ಲಿ ಹೊಟೆಲ್ ಆರಂಭಿಸುತ್ತೇನೆ ಎಂದರು.

Articles You Might Like

Share This Article