ಬೆಂಗಳೂರು, ಜ.12- ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಹಾಗೂ ಕೇರಳ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಸ್ಯಾಂಟ್ರೊ ರವಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸ್ಯಾಂಟ್ರೊ ರವಿ ಕಾರು ಚಾಲಕರು, ಸ್ನೇಹಿತರು, ಪರಿಚಯಸ್ಥರು ಹಾಗೂ ಆತನ ಬಳಗವನ್ನು ಪೊಲೀಸರು ಸಂಪರ್ಕಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಈತ ತಲೆಮರೆಸಿಕೊಂಡಿದ್ದು, ಆಗಾಗ್ಗೆ ಜಾಗ ಬದಲಿಸುತ್ತಿರುವುದರಿಂದ ಪೊಲೀಸರಿಗೆ ಈತನ ಬಂಧನ ಸವಾಲಾಗಿದೆ. ಏಳೆಂಟು ಜಿಲ್ಲೆಗಳಲ್ಲಿ ಆತನ ಶೋಧ ಕಾರ್ಯ ನಡೆಸುತ್ತಿರುವ ಪೊಲೀಸರು ಕೇರಳ ಹಾಗೂ ಕರ್ನಾಟಕ ಗಡಿ ಭಾಗಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.
ರಾಮನಗರ ಹಾಗೂ ಬೆಂಗಳೂರು ಸುತ್ತ-ಮುತ್ತಲಿನಲ್ಲಿರುವ ರೆಸಾರ್ಟ್ಗಳಲ್ಲೂ ಸ್ಯಾಂಟ್ರೊ ರವಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಮನೀಶ್ಪಾಂಡೆ ಭರ್ಜರಿ ಶತಕ, ಕರ್ನಾಟಕ 445ಕ್ಕೆ ಸರ್ವಪತನ..
ದಂಧೆಯಿಂದಲೇ ಕೋಟ್ಯಾಂತರ ಹಣ ಗಳಿಕೆ:
ವೇಶ್ಯಾವಾಟಿಕೆ ಹಾಗೂ ವರ್ಗಾವಣೆ ದಂಧೆಯಿಂದ ಸ್ಯಾಂಟ್ರೊ ರವಿ ಕೋಟ್ಯಾಂತರ ರೂ. ಹಣ ಆಸ್ತಿ ಮಾಡಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ರವಿ ಈ ದಂಧೆ ನಡೆಸುತ್ತಿದ್ದ ವೇಳೆ ನಟಿಯರು, ಮಾಡೆಲ್ಗಳು, ಸರ್ಕಾರಿ ಅಧಿಕಾರಿಗಳು ಆತನ ಮನೆಗೆ ಬಂದು ಹೋಗುತ್ತಿದ್ದರು.
ಹೀಗಾಗಿ ಅನೇಕ ಗಣ್ಯರ ಪರಿಚಯವಿದೆ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ರವಿ ಪ್ರಮುಖವಾಗಿ ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲೂ ವರ್ಗಾವಣೆ ಮಾಡಿಸಲು ಕೈ ಹಾಕಿದ್ದನು ಎಂಬುದು ಗೊತ್ತಾಗಿದೆ.
ಇದರಿಂದಾಗಿ ಸ್ಯಾಂಟ್ರೊ ರವಿ ಕೋಟ್ಯಾಂತರ ರೂ. ಹಣ, ಆಸ್ತಿ ಸಂಪಾದಿಸಿರುವುದು ಅಲ್ಲದೆ, ಬೆಂಗಳೂರು ಮತ್ತು ಮೈಸೂರಿನಲ್ಲೂ ಮನೆ ನಿರ್ಮಾಣ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸ್ ಇಲಾಖೆಯಲ್ಲಿ ಸಬ್ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಎಸಿಪಿ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಅವರು ಕೇಳಿದ ಸ್ಥಳಕ್ಕೆ ಸ್ಯಾಂಟ್ರೊ ರವಿ ವರ್ಗಾವಣೆ ಮಾಡಿಸಿ ಕೋಟ್ಯಾಂತರ ರೂ. ಹಣ ಗಳಿಸಿದ್ದಾನೆ ಎಂಬುದು ತಿಳಿದು ಬಂದಿದೆ.
ನಾವು ಒಟ್ಟಾದರೆ ಜಾಗತಿಕ ಅಭಿವೃದ್ಧಿಯ ಚಾಲಕರಾಗಲು ಸಾಧ್ಯ: ಪ್ರಧಾನಿ ಮೋದಿ
ಗಣ್ಯ ವ್ಯಕ್ತಿಗಳಿಗೆ ಯುವತಿಯರನ್ನು ಐಷಾರಾಮಿ ಕಾರುಗಳ ಹೆಸರಿನಲ್ಲಿ ಕಳುಹಿಸಿ ಅವರ ಸ್ನೇಹ ಗಳಿಸುತ್ತಿದ್ದನ್ನಲ್ಲದೇ ಗಣ್ಯರ ಪರಿಚಯವಿಟ್ಟುಕೊಂಡು ಸಂಪರ್ಕದಲ್ಲಿದ್ದನು.
ಉದ್ಯೋಗ ಅರಸಿ ಬರುವ ಯುವತಿಯರೇ ಈತನ ವೇಶ್ಯಾವಾಟಿಕೆ ದಂಧೆಗೆ ಟಾರ್ಗೇಟ್ ಆಗಿದ್ದು, ಅವರನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡು ಗಣ್ಯರಿಂದ ಹಣ ಪಡೆಯುತ್ತಿದ್ದನು ಎಂಬುದು ಗೊತ್ತಾಗಿದೆ.
ಜ. 2ರಂದು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸ್ಯಾಂಟ್ರೊ ರವಿ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕಾಗಿ ಮೈಸೂರು ನಗರದ 11 ವಿಶೇಷ ತಂಡಗಳು ಶೋಧ ನಡೆಸುತ್ತಿವೆ. ಆತ ಇನ್ನೂ ಸಿಕ್ಕಿಲ್ಲ.
Kerala, border, Police, searching, Santro Ravi,