ಬಾಂಗ್ಲಾದೇಶಿ ಪ್ರಜೆಗೆ ಮರಣದಂಡನೆ ಶಿಕ್ಷೆ ನೀಡಿದ ಕೇರಳ ಕೋರ್ಟ್

Social Share

ಮಾವೆಲಿಕ್ಕಾರ (ಕೇರಳ), ಮಾ.9- ಅಲಪ್ಪುಳ ಜಿಲ್ಲೆಯ ಚೆಂಗನ್ನೂರ್ ತಾಲೂಕಿನ ವೆನ್ಮೋನಿ ಗ್ರಾಮದಲ್ಲಿ ವೃದ್ಧ ದಂಪತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗೆ ಕೇರಳದ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾೀಧಿಶರಾದ ಕೆನ್ನೆತ್ ಜಾರ್ಜ್ ಅವರು ಮಂಗಳವಾರ ಮೊದಲ ಆರೋಪಿ ಲ್ಯಾಬ್ಲೂ ಹಸನ್ಗೆ ವಯೋವೃದ್ಧ ದಂಪತಿಗಳ ಹತ್ಯೆ, ದರೋಡೆ ಮತ್ತು ಅತಿಕ್ರಮಣದ ಸಮಯದಲ್ಲಿ ಮಾರಕ ಆಯುಧವನ್ನು ಬಳಸಿ ಗಾಯಗೊಳಿಸಿದಕ್ಕೆ ಮರಣದಂಡನೆ ವಿಧಿಸಿದ್ದು ಮತ್ತೊಬ್ಬ ಆರೋಪಿ ಬಾಂಗ್ಲಾದೇಶದ ಪ್ರಜೆಯೂ ಆಗಿರುವ ಜುವಲ್ ಹಸನ್ ನನ್ನು ಮರಣದಂಡನೆುಂದ ವಿನಾಯಿತಿ  ನೀಡಿ ಕೊಲೆಯ ಪ್ರಕರಣದ ಅಪರಾಧಕ್ಕಾಗಿ ಜೀವಾವ ಶಿಕ್ಷೆಯನ್ನು ವಿಧಿಸಿದೆ, ದರೋಡೆಯ ಸಮಯದಲ್ಲಿ ಮಾರಣಾಂತಿಕ ಆಯುಧವನ್ನು ಬಳಸಿ ಗಾಯಗೊಳಿಸಿ ಮತ್ತು ಮನೆಯೊಳಗೆ ಅತಿಕ್ರಮಣ ಮಾಡಿದ ಕಾರಣ ಮರಣದಂಡನೆ ಶಿಕ್ಷೆ ನೀಡಲಾಗಿದೆ.
ಅಲ್ಲದೆ, ನ್ಯಾಯಾಲಯವು ತಲಾ 4 ಲಕ್ಷ ರೂಪಾು ದಂಡವನ್ನೂ ವಿಧಿಸಿದ್ದಾರೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಸೊಲೊಮನ್ ಪಿಟಿಐಗೆ ತಿಳಿಸಿದ್ದಾರೆ.
ಆರೋಪಿಗಳು ಮನೆ ಹುಡುಕುವ ನೆಪದಲ್ಲಿ ಹೋಗಿ ಕಬ್ಬಿಣದ ರಾಡ್ ನಿಂದ ಪತಿಯನ್ನು ಕೊಂದು ನಂತರ ಮನೆಯೊಳಗೆ ಹೋಗಿ ಅಡುಗೆ ಮನೆಯಲ್ಲಿದ್ದ ಪತ್ನಿಯನ್ನು ಕೊಲೆ ಮಾಡಿದ್ದಾರೆ. ಎಪಿ ಚೆರಿಯನ್ (76) ಮತ್ತು ಅವರ ಪತ್ನಿ ಎಲಿಕುಟ್ಟಿ ಚೆರಿಯನ್ (68) ರವರು ಕೊಲೆಯಾದ ದುರ್ದೈಗಳು.

Articles You Might Like

Share This Article