ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಕೇರಳದಲ್ಲಿ ರೈಲು ತಡೆದು ಪ್ರತಿಭಟನೆ

Social Share

ಕೊಚ್ಚಿ, ಮಾ.2 -ಅಡುಗೆ ಅನಿಲ(ಎಲ್‍ಪಿಜಿ )ದರ ಬೆಲೆ ಏರಿಕೆ ವಿರೋಧಿಸಿ ಕೇರಳದ ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‍ಐ) ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ,ರೈಲು ತಡೆದು ಹಳಿಗಳ ಮೇಲೆ ಸಿಲೆಂಡರ್ ಜೊತೆ ಪ್ರತಿಭಟನೆ ನಡೆಸಿದರು.

ಎಂಟು ತಿಂಗಳ ನಂತತ ಅಚ್ಚರಿಯ ರೀತಿಯಲ್ಲಿ ಅಡುಗೆ ಅನಿಲ ಎಲ್‍ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‍ಗೆ 50 ರೂ.ಗಳಷ್ಟು ಹೆಚ್ಚಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಬಿಗ್ ಬಿ ಹಾಗೂ ಧರ್ಮೇಂದ್ರ ಬಂಗಲೆಗಳಿಗೆ ಹುಸಿ ಬಾಂಬ್ ಕರೆ

ದೇಶದಲ್ಲಿ ಎಲ್ಲವನ್ನೂ ಕಾಪೆರ್ರೇ ಟ್‍ಗಳಿಗೆ ಹಸ್ತಾಂತರಿಸಲಾಗಿದೆ, ಈಗ ಕೇರಳದಲ್ಲಿ ಅಡುಗೆ ಅನಿಲ ಹಾಗು ವಾಣಿಜ್ಯ ಬಳಕೆ ಸಿಲಿಂಡರ್‍ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆಯಲಾಗಿದೆ ಎಂದು ಕಾರ್ಯಕರ್ತರು ಕೇಂದ್ರ ಸರ್ಕಾರದ ದೋರಣೆ ಖಂಡಿಸಿದರು. ಪ್ರತಿಭಟನೆಯಲ್ಲಿ ವಿವಿಧ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳು ಕೂಡ ಪಾಲ್ಗೊಂಡಿದ್ದರು.

Kerala, DYFI, stages ,protest, against, gas price, hike, Kochi,

Articles You Might Like

Share This Article