ಕೋಝಿಕ್ಕೋಡ್ (ಕೇರಳ), ಫೆ.27 – ಆಧುನಿಕ ಕೃಷಿ ತಂತ್ರಜ್ಞಾನಗಳ ಅಧ್ಯಯನಕ್ಕಾಗಿ ಇಸ್ರೇಲ್‍ಗೆ ಸರ್ಕಾರಿ ಪ್ರಾಯೋಜಿತ ಪ್ರವಾಸದ ಭಾಗವಾಗಿ ಹೋಗಿ ನಾಪತ್ತೆಯಾಗಿದ್ದ ಕೇರಳದ ರೈತರೊಬ್ಬರು ಇಂದು ಭಾರತಕ್ಕೆ ಮರಳಿದ್ದಾರೆ.
ಮುಂಜಾನೆ 5 ಗಂಟೆಗೆ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರೈತ ಬಿಜು ಕುರಿಯನ್ (48) ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳ ಸರ್ಕಾರ, ರಾಜ್ಯ ಕೃಷಿ ಸಚಿವ ಪಿ ಪ್ರಸಾದ್ ಹಾಗು 27 ಸದಸ್ಯರ ನಿಯೋಗ, ಅಧಿಕಾರಿಗಳಿಗೆ ಕ್ಷಮೆಯಾಚಿಸುತ್ತಿದ್ದೇನೆ ಎಂದು ಬಾವುಕರಾದರು.
ಇಸ್ರೇಲ್‍ನಿಂದ ಹೊಸ ಕೃಷಿ ತಂತ್ರಗಳನ್ನು ಕುರಿತು ಅಧ್ಯಯನ ಪ್ರವಾಸಪೂರ್ಣಗೊಳಿಸಿ ಕಳೆದ ಫೆ. 17 ರಂದು ಭಾರತಕ್ಕೆ ಹಿಂತಿರುಗಬಬೇಕಿತ್ತು ಆದರೆ ಅವರು ಜೆರುಸಲೆಮ್ ಮತ್ತು ಬೆತ್ಲೆಹೆಮ್‍ನ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಹೋಗಿರುವುದಾಗಿ ತಿಳಿಸಿದರು.
ಆದರೆ ನಿಯೋಗದಲ್ಲಿದ್ದ ರೈತರು ಬಿಜು ಕುರಿಯನ್ ನಾಪತ್ತೆಯಾಗಿರುವುದಕ್ಕೆ ಮುಂದೇನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದರು, ರಾಜ್ಯ ಕೃಷಿ ಸಚಿವರು ಘಟನೆಯ ಬಗ್ಗೆ ಸರ್ಕಾರ ಪರಿಶೀಲಿಸುತ್ತದೆ ಎಂದು ಹೇಳಿದ್ದರು ಆದರೆ ಈಗ ಆತಂಕ ದೂರವಾಗಿದೆ.
ತನ್ನ ಮೊಬೈಲ್ ಫೋನ್‍ನಲ್ಲಿ ಇಂಟರ್‍ನೆಟ್ ಅಥವಾ ಅಂತರಾಷ್ಟ್ರೀಯ ಕರೆ ಸೌಲಭ್ಯ ಇಲ್ಲದ ಕಾರಣ ಸ್ವಲ್ಪ ಸಮಸ್ಯಯಾಗಿತ್ತು ಆದರೆ ಅಲ್ಲಿ ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿದ್ದೇನೆ ಎಂದು ಕುಟುಂಬಕ್ಕೆ ತಿಳಿಸಿದೆ ತರುವಾಯ, ತನ್ನ ಸಹೋದರನ ಸಹಾಯದಿಂದ ನಾನು ಭಾರತಕ್ಕೆ ಮರಳಿದ್ದೇನೆ ಎಂದು ಬಿಜು ಕುರಿಯನ್ ಅವರು ಹೇಳಿದರು. ವೀಸಾ ಅವಧಿ ಮೇ 8 ರವರೆಗೆ ಮಾನ್ಯವಾಗಿದೆ ಆದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ.
ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶೀಘ್ರವೇ ಬಗೆಹರಿಯಲಿದೆ : ಹೆಚ್ಡಿಕೆ
Kerala, Farmer, Reportedly, Missing, Israel, Returns, India,