ಬೆಂಗಳೂರು, ಡಿ.24- ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿ ಶಬೀರ್ (26) ಎಂಬಾತನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ ಸುಮಾರು 2 ಲಕ್ಷ ರೂ. ಬೆಲೆಯ 50 ಗ್ರಾಂ. ತೂಕದ ಎಂಡಿಎಂಎ ಮಾದಕ ವಸ್ತು ಮತ್ತು ಒಂದು ಕಪ್ಪು ಬಣ್ಣದ ಐ-ಫೋನ್ ವಶಪಡಿಸಿಕೊಂಡಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಬಾಣಸವಾಡಿಯ ಅಂಕಣರೆಡ್ಡಿ ಲೇಔಟ್ನ ಬಸ್ ನಿಲ್ದಾಣ ರಸ್ತೆಯಲಿ ್ಲ ವ್ಯಕ್ತಿಯೊಬ್ಬ ಯಾವುದೋ ಮಾದಕ ವಸ್ತುವನ್ನು ತನ್ನ ಬಳಿ ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕೇರಳ ಮೂಲದ ಆರೋಪಿಯನ್ನು ಬಂಧಿಸಿ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಮೂಲತಃ ಕೇರಳ ರಾಜ್ಯದವನಾಗಿದ್ದು, ನಾಲ್ಕು ತಿಂಗಳ ಹಿಂದೆ ಟ್ಯಾಕ್ಸಿ ಚಾಲಕ ವೃತ್ತಿಗೆಂದು ನಗರಕ್ಕೆ ಬಂದಿದ್ದು,
ಕೋವಿಡ್ ಗಾಬರಿಬೇಡ, ಎಚ್ಚರಿಕೆ ಇರಲಿ : ಸಿಎಂ ಬೊಮ್ಮಾಯಿ
ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದುದ್ದರಿಂದ ತಾನು ದುಡಿಯುವ ಹಣ ಸಾಕಾಗದ ಕಾರಣ, ಯಾರೊ ಒಬ್ಬರು ಇವನಿಗೆ ಮಾದಕ ವಸ್ತುವನ್ನು ಕಡಿಮೆ ಬೆಲೆಗೆ ತೆಗೆದುಕೊಂಡು ಬಂದು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಿದರೆ ಹೆಚ್ಚಿನ ಹಣ ಮಾಡಬಹುದೆಂದು ತಿಳಿಸಿದ್ದರಿಂದ ಈ ಕೃತ್ಯದಲ್ಲಿ ತೊಡಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
Kerala man, arrested, 2 lakh, drugs, seized,