ತಿರುವನಂತಪುರಂ, ಜು.18- ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇ.5ರಷ್ಟು ಜಿಎಸ್‍ಟಿ ವಿಧಿಸಿರುವುದನ್ನು ಕೇರಳ ಸರ್ಕಾರ ತೀವ್ರವಾಗಿ ವಿರೋಧಿಸಿದೆ. ಗೋದಿ ಹಿಟ್ಟು, ಪನ್ನೀರು, ಮೊಸರಿನಂತಹ ಬ್ರಾಂಡೆಡ್ ಆಹಾರ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಶೇ.5ರಷ್ಟು ಜಿಎಸ್‍ಟಿ ದರ ವಿಧಿಸಿರುವುದು ಸರಿಯಲ್ಲ ಎಂದು ರಾಜ್ಯದ ಆರ್ಥಿಕ ಸಚಿವ ಕೆ.ಎನ್.ಬಾಲಗೋಪಾಲ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಜನ ಸಾಮಾನ್ಯರಿಗೆ ಹೊರೆಯಾಗುವ ಯಾವುದೇ ತೆರಿಗೆಯನ್ನು ಜಾರಿಗೊಳಿಸಲಾರದು ಎಂದು ಇತ್ತೀಚೆಗೆ ನಡೆದ ಜಿಎಸ್‍ಟಿ ಪರಿಷತ್ ಸಭೆಯಲ್ಲಿ ಕೇರಳ ರಾಜ್ಯ ವಿರೋಧ ಮಾಡಿದೆ ಮತ್ತು ಐಶರಾಮಿ ವಸ್ತುಗಳ ಮೇಲೆ ವಿಸಲಾಗಿರುವ ದುಬಾರಿ ತೆರಿಗೆಯನ್ನು ಹಿಂಪಡೆಯ ಬೇಕು ಎಂದು ಒತ್ತಾಯಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಆದರೆ ನಮ್ಮ ಒತ್ತಾಯಕ್ಕೆ ಪೂರಕವಾಗಿ ಯಾವುದೇ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಈಗ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಜಿಎಸ್‍ಟಿ ವಿಸಿರುವುದನ್ನು ಕೇರಳ ಸರ್ಕಾರ ಬಲವಾಗಿ ವಿರೋಸಲಿದೆ. ಕೇಂದ್ರ ಸರ್ಕಾರದ ತೆರಿಗೆ ಪದ್ಧತಿಯ ಬಗ್ಗೆ ನಾವು ಮತ್ತಷ್ಟು ಸ್ಪಷ್ಟನೆಗಳನ್ನು ಕೇಳಿದ್ದೇವೆ. ಜೊತೆಗೆ ಜನ ಸಾಮಾನ್ಯರಿಗೆ ಹೊರೆಯಾಗುವ ತೆರಿಗೆಗಳನ್ನು ಹಿಂಪಡೆಯುವಂತೆ ಪತ್ರ ಬರೆದಿದ್ದೇವೆ. ನಮ್ಮ ಅಭಿಪ್ರಾಯಗಳನ್ನು ಬಲವಾಗಿ ಪ್ರತಿಪಾದಿಸಲಾಗಿದೆ ಎಂದಿದ್ದಾರೆ.