ಕೊಚ್ಚಿ,ನ.16-ಪ್ರತಿಭಟನೆ ವೇಳೆ ಹಿಂಸಾಚಾರ ತಪ್ಪಿಸಲು ಮತ್ತು ಗುಂಪು ಚದುರಿಸಲು ಬೇಕಾಗುವ ವಸ್ತು ಸೇರಿ ಹೆಚ್ಚುವರಿಯಾಗಿ ಅಶ್ರುವಾಯು ಮದ್ದುಗುಂಡುಗಳನ್ನು ಕೇರಳ ಪೊಲೀಸರು ಖರೀದಿಸಲಿದ್ದಾರೆ.
ಪೊಲೀಸರ ಕೋರಿಕೆಯ ಮೇರೆಗೆ ರಾಜ್ಯ ಸರ್ಕಾರವು 7,500 ಅಶ್ರುವಾಯು ಮದ್ದುಗುಂಡುಗಳನ್ನು ಖರೀದಿಸಲು ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೃಹ ಇಲಾಖೆಯ ಆದೇಶದ ಪ್ರಕಾರ, ಮಧ್ಯಪ್ರದೇಶದ ಗ್ವಾಲಿಯರ್‌ನ ತೇಕನ್‌ಪುರದಲ್ಲಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಘಟಕದಿಂದ 77.13 ಲಕ್ಷ ರೂ. ಮೌಲ್ಯದ ಮದ್ದುಗುಂಡುಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ.
ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು, ಜಿಲ್ಲೆಯ ಸಶಸ್ತ್ರ್ರ ಮೀಸಲು ಶಿಬಿರಗಳು ಟಿಯರ್ ಸೋಕ್ ಮದ್ದುಗುಂಡುಗಳನ್ನು ನಿರ್ವಹಿಸುತ್ತವೆ ಎಂದು ಹೇಳಿದರು. ಖಾಲಿಯಾಗಿರುವ ಕಾರಣ ನಾವು ಹೆಚ್ಚಿನ ಮದ್ದುಗುಂಡುಗಳ ಬೇಡಿಕೆ ಇಟ್ಟಿದ್ದು ನಿಯಮಿತವಾಗಿ, ನಾವು ಅದನ್ನು ಬಿಎಸ್‌ಎಫ್‌ನಿಂದ ಖರೀದಿಸುತ್ತೇವೆ ಎಂದು ಅವರು ಹೇಳಿದರು.
ಕಳೆದ ತಿಂಗಳು, ಕೋಝಿಕ್ಕೋಡ್ ಪೊಲೀಸರು ಪೆರಂಬ್ರಾದಲ್ಲಿ ಸಂಸದ ಶಫಿ ಪರಂಬಿಲ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರ ಗುಂಪನ್ನು ಚದುರಿಸಲು ಅಶ್ರುವಾಯು ಮತ್ತು ರಬ್ಬರ್ ಗುಂಡು ಬಳಸಲಾಗಿತ್ತು.ಇದರಿಂದಾಗಿ ಹಲವರಿಗೆ ಗಾಯಗಳಾಗಿವೆ.
ಕೇರಳ ಪೊಲೀಸ್‌ರ ಪ್ರಕಾರ, ಗುಂಪುಗಳನ್ನು ಚದುರಿಸಲು ಅಶ್ರುವಾಯು ಬಳಸಬಹುದು. ಅಶ್ರುವಾಯು ಯಾವುದೇ ದೈಹಿಕ ಗಾಯವನ್ನು ಉಂಟುಮಾಡುವುದಿಲ್ಲ ಮತ್ತು ಪೀಡಿತ ವ್ಯಕ್ತಿಗಳು ತಾಜಾ ಗಾಳಿಯಲ್ಲಿ ಸುಮಾರು ಅರ್ಧ ಗಂಟೆ ಚೇತರಿಸಿಕೊಳ್ಳುತ್ತಾರೆ ಎಂದು ಹೇಳುತ್ತದೆ. ಕೆಲವೊಮೆ ಅಶ್ರುವಾಯು, ಲಾಠಿ ಚಾರ್ಜ್ ಅಥವಾ ಎರಡನ್ನೂ ಬಳಸುವುದು ಅನುಚಿತವಾಗಿದ್ದರೆ ಅಥವಾ ಅವರ ಉದ್ದೇಶದಲ್ಲಿ ವಿಫಲವಾದರೆ, ಪೊಲೀಸರು ಬಂದೂಕುಗಳ ಬಳಕೆಯನ್ನು ಆಶ್ರಯಿಸಬಹುದು.
ಪೊಲೀಸ್ ತರಬೇತಿ ಕಾಲೇಜಿನಲ್ಲಿ ಒಂದು ತಿಂಗಳ ಅವಧಿಯ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅಶ್ರುವಾಯು ಮತ್ತು ಲಾಠಿಗಳನ್ನು ಬಳಸುವುದು ಸೇರಿದಂತೆ ಗುಂಪು ಚದುರುವಿಕೆಯಲ್ಲಿ ತರಬೇತಿ ನೀಡಲಾಗುತ್ತದೆ.
