ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ

Social Share

ತಿರುವನಂತಪುರಂ,ಆ.2-ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಂಕಿಪಾಕ್ಸ್ ಪ್ರಕರಣವನ್ನು ಖಚಿತಪಡಿಸಿದ್ದು, ಎಮಿರೇಟ್ಸ್‍ನಿಂದ ಜು.22ರಂದು ಆಗಮಿಸಿರುವ 30 ವರ್ಷದ ಮಲಪುರಂ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದೆ.

ಈ ವ್ಯಕ್ತಿ ಕಾಚಿಕೋಡ ವಿಮಾನ ನಿಲ್ದಾಣದಿಂದ ಆಗಮಿಸಿದ್ದು, ಅವರ ಜೊತೆ ನಿಟಕ ಸಂಪರ್ಕ ಹೊಂದಿರುವವರ ಮೇಲೆ ನಿಗಾ ಇಡಲಾಗಿದೆ. ಮಲ್ಲಾಪುರಂ ಮಂಜರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಕೇರಳದಲ್ಲಿ ಒಟ್ಟು 5 ಮಂದಿ ಮಂಕಿಪಾಕ್ಸ್‍ಗೆ ಸಿಲುಕಿದಂತಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.

Articles You Might Like

Share This Article