ಕಾಸರಗೋಡು,ಜ.7- ವಿಷಕಾರಿ ಆಹಾರ ಸೇವನೆಯಿಂದ ಮತ್ತೊಬ್ಬ ಯುವತಿ ಮೃತಪಟ್ಟಿದ್ದು, ಕೇರಳದಲ್ಲಿ ಹೋಟೆಲ್ಗಳಲ್ಲಿ ತಿಂಡಿ ತಿನಿಸುಗಳ ಗುಣಮಟ್ಟದ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.
ಕಾಸರಗೋಡಿನ ಅಂಜುಶ್ರೀ ಪಾರ್ವತಿ (19) ಮೃತಪಟ್ಟಿದ್ದು, ಆಕೆಯ ಪೋಷಕರು ರೋಮಂಶಿಯಾ ರೆಸ್ಟೋರೆಂಟ್ ವಿರುದ್ಧ ದೂರು ನೀಡಿದ್ದಾರೆ. ಡಿಸೆಂಬರ್ 31ರಂದು ಆನ್ಲೈನ್ನಲ್ಲಿ ಕುಂಜಿಮಂತಿಯನ್ನು ತರಿಸಿಕೊಂಡು (ಬಿರಿಯಾನಿ ಮಾದರಿಯ ಅರಬ್ ಶೈಲಿ ಊಟ) ತಿಂದಿದ್ದರು. ಬಳಿಕ ಆಕೆ ಅಸ್ವಸ್ಥಳಾಗಿದ್ದು, ಕಾಸರಗೋಡಿನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು.
ಬಳಿಕ ಆಕೆಯನ್ನು ಕರ್ನಾಟಕದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಡುತ್ತಾ ಬಂದಿದ್ದು ಇಂದು ಬೆಳಗ್ಗೆ ಮಂಗಳೂರಿನಲ್ಲಿ ಆಕೆ ಮೃತಪಟ್ಟಿದ್ದಾರೆ.
ಪೋಷಕರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಹಾರ ಸುರಕ್ಷತಾ ಆಯುಕ್ತಾಲಯ ಹೋಟೆಲ್ನ ಪರವಾನಗಿಯನ್ನು ರದ್ದುಗೊಳಿಸಿದೆ ಮತ್ತು ವಾರದ ಒಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಆರೋಗ್ಯ ಸಚಿವ ವೀಣಾ ಜಾರ್ಜ್, ಘಟನೆಯ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಬಿಬಿಎಂಪಿ ಐಡಿಯಾ ಅಟ್ಟರ್ ಪ್ಲಾಪ್, ಬಿರುಕು ಬಿಟ್ಟ ದೇಶದ ಪ್ರಪ್ರಥಮ ರ್ಯಾಪಿಡ್ ರಸ್ತೆ
ಮೃತಪಟ್ಟ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ವರದಿಯ ಬಳಿಕ ಸೂಕ್ತ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಶಾಸಕ ಸಿ.ಎಚ್.ಕುಂಹಂಬು, ಅಂಜುಶ್ರೀಗೆ ಈ ಮೊದಲು ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಹೋಟೆಲ್ನ ಊಟ ಮಾಡಿದ ಬಳಿಕ ಸಮಸ್ಯೆಗಳು ಶುರುವಾಗಿವೆ ಎಂದು ಆರೋಪಿಸಿದ್ದಾರೆ.
ಕಳೆದ ಜನವರಿ 3ರಂದು ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ವಿಷಾಹಾರ ಸೇವನೆಯಿಂದ ಮೃತಪಟ್ಟಿದ್ದರು. ವರ್ಷದ ಹಿಂದೆ ಕಾಸರಗೋಡಿನಲ್ಲಿ ಶಾಲಾ ಬಾಲಕಿಯೊಬ್ಬರು ಶರ್ವೋಮಾ ಸೇವನೆ ಬಳಿಕ ಮೃತಪಟ್ಟ ಘಟನೆಯೂ ವರದಿಯಾಗಿತ್ತು.
Kerala, student, dies, suspected, food poisoning,