ತಿರುವನಂತಪುರಂ,ಫೆ.9- ಕೇರಳದಲ್ಲಿ ತೃತಿಯಲಿಂಗಿ ದಂಪತಿ ಮಗುವಿಗೆ ಜನ್ಮ ನೀಡಿದ್ದಾರೆ. ತೃತಿಯಲಿಂಗಿಗಳಿಗೆ ಮಗು ಜನಿಸಿರುವುದು ಭಾರತದಲ್ಲಿ ಇದೆ ಮೊದಲು ಎನ್ನಲಾಗಿದೆ. ತಿರುವಂತನಪುರಂನ ಸರ್ಕಾರಿ ಆಸ್ಪತ್ರೆಯಲ್ಲಿ ತೃತಿಯ ಲಿಂಗಿ ದಂಪತಿಗೆ ಮಗು ಜನಿಸಿದ್ದು, ಹುಟ್ಟಿರುವ ಮಗುವಿನ ಲಿಂಗದ ಗುರುತು ಬಹಿರಂಗಪಡಿಸಲು ದಂಪತಿ ನಿರಾಕರಿಸಿದ್ದಾರೆ.
ಮಗುವಾಗಿರುವ ವಿಷಯವನ್ನು ಬಹಿರಂಗಪಡಿಸಿರುವ ಜಹಾದ್ ಮತ್ತು ಜಿಯಾ ದಂಪತಿ ಇದು ನಮ್ಮ ಜೀವನದ ಅತ್ಯಂತ ಸಂತೋಷದ ದಿನ. ನನಗೆ ನೋವುಂಟು ಮಾಡುವ ಹಲವಾರು ಸಂದೇಶಗಳು ನನಗೆ ಬಂದಿವೆ. ನಮ್ಮ ಮಗುವಿನ ಜನನವು ಅವರಿಗೆ ನಮ್ಮ ಉತ್ತರವಾಗಿದೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಸಂತಸ ಹಂಚಿಕೊಂಡಿದ್ದಾರೆ.
ಪ್ರತ್ಯೇಕ ಅಪಘಾತ : ಐವರು ಪ್ರಾಣಾಪಯದಿಂದ ಪಾರು
ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಸಿಸೇರಿಯನ್ ವಿಭಾಗದಲ್ಲಿ ನಿನ್ನೆ ಬೆಳಿಗ್ಗೆ 9.30 ರ ಸುಮಾರಿಗೆ ಮಗು ಜನಿಸಿತು, ಏಕೆಂದರೆ ಹೆರಿಗೆಯ ಸಮಯದಲ್ಲಿ, ಜಹಾದ್ ಅವರ ದೇಹದಲ್ಲಿನ ಸಕ್ಕರೆಯ ಮಟ್ಟವು ಅಧಿಕವಾಗಿತ್ತು ಎಂದು ಟ್ರಾನ್ಸ್ ಪಾಲುದಾರರಲ್ಲಿ ಒಬ್ಬರಾದ ಜಿಯಾ ಪಾವಲ್ ಹೇಳಿಕೊಂಡಿದ್ದಾರೆ.
ತೃತಿಯಲಿಂಗಿ ದಂಪತಿಗೆ ಮಗು ಜನಿಸಿರುವ ವಿಚಾರ ತಿಳಿದ ಆರೋಗ್ಯ ಸಚಿವ ವೀಣಾ ಜಾರ್ಜ್ ಅವರು ಅಭಿನಂದನೆ ಸಲ್ಲಿಸಿರುವುದಲ್ಲದೆ, ಅವರಿಗೆ ಅಗತ್ಯವಿರುವ ಎಲ್ಲ ಚಿಕಿತ್ಸೆಯನ್ನು ಉಚಿತವಾಗಿ ನೀಡುವಂತೆ ಸಂಬಂಧಪಟ್ಟ ವೈದ್ಯರಿಗೆ ಸೂಚಿಸಿದ್ದಾರೆ.
ಖಾಸಗಿ ಬ್ಯಾಂಕ್‍ನಲ್ಲಿ ಬೆಂಕಿ ಅವಗಡ
ಶೀಘ್ರದಲ್ಲೇ ಮಗು ಹಡೆದ ತೃತಿಯಲಿಂಗಿ ದಂಪತಿಯನ್ನು ಖುದ್ದು ಭೇಟಿಯಾಗುವುದಾಗಿಯೂ ವೀಣಾ ಜಾರ್ಜ್ ತಿಳಿಸಿದ್ದಾರೆ. ಮಗುವಿನ ಜನ್ಮ ನೀಡಿದ ತೃತಿಯಲಿಂಗಿ ದಂಪತಿಯನ್ನು ಭೇಟಿಯಾಗಿ ಶುಭ ಕೋರಲು ಕೇರಳದ ನಾನಾ ಮೂಲೆಗಳಿಂದ ನೂರಾರು ತೃತಿಯಲಿಂಗಿಗಳು ತಿರುವಂತನಪುರಂಗೆ ದೌಡಾಯಿಸುತ್ತಿದ್ದಾರೆ.
Kerala, transgender, couple, blessed, baby,