ಕಾಜಿಕೋಡ್,ಫೆ.4- ದೇಶದಲ್ಲೇ ಮೊದಲ ಬಾರಿಗೆ ಲಿಂಗ ಪರಿವರ್ತನೆಗೊಂಡ ಜೋಡಿ ನೈಸರ್ಗಿಕ ಕ್ರಮದ ಮೂಲಕ ಮಗು ಪಡೆಯುವ ಸನ್ನಾಹದಲ್ಲಿದ್ದು, ಮುಂದಿನ ತಿಂಗಳು ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ.
ಕೇರಳದ ತೃತೀಯಲಿಂಗಿ ದಂಪತಿಗಳು ತಾವು ಮುಂದಿನ ತಿಂಗಳು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಘೋಷಿಸಿದ್ದಾರೆ. ಇದನ್ನು ದೇಶದಲ್ಲಿ ತೃತೀಯ ಲಿಂಗಿಗಳ ಮೊದಲ ಗರ್ಭಧಾರಣೆ ಎಂದು ಭಾವಿಸಲಾಗಿದೆ.
ನೃತ್ಯಗಾರ್ತಿಯಾಗಿರುವ ಜಿಯಾ ಪಾವಲ್, ಇನ್ಸಟಾಗ್ರಾಮ್ ಪೋಸ್ಟ್ನಲ್ಲಿ ತಮ್ಮ ಪಾಲುದಾರರಾಗಿರುವ ಜಹಾದ್ ಈಗ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದ್ದಾರೆ. ಅವಳಿಗೆ ತಾಯಿಯಾಗುವ ಕನಸಿತ್ತು, ನನಗೆ ತಂದೆಯಾಗುವ ಆಸೆ ಇತ್ತು. ಕನಸನ್ನು ನನಸಾಗಿಸಲು ಹೊರಟಿದ್ದೇವೆ. ಎಂಟು ತಿಂಗಳ ಭ್ರೂಣವು ಈಗ ಜಹಾದ್ ಹೊಟ್ಟೆಯಲ್ಲಿದೆ. ನಮಗೆ ತಿಳಿದುಬಂದ ಪ್ರಕಾರ ಭಾರತದಲ್ಲಿ ಇದು ತೃತೀಯ ಲಿಂಗಿಗಳ ಮೊದಲ ಗರ್ಭಧಾರಣೆ ಪಾವಲ್ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ಲಂಚ ನೀಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ
ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದ ಈ ಜೋಡಿ ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದೆ. ಜಹದ್ ಪುರುಷನಾಗಲು ಲಿಂಗ ಪರಿವರ್ತನೆ ಚಿಕಿತ್ಸೆ ಪಡೆದಿದ್ದ. ಆದರೆ ಮಗುವನ್ನು ಪಡೆಯುವ ಸಲುವಾಗಿ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಜಹಾದ್ ಈಗಾಗಲೇ ಸ್ತನ ತೆರವು ಮಾಡುವ ಶಸ್ತ್ರಚಿಕಿತ್ಸೆ ಪ್ರಗತಿಯಲ್ಲಿತ್ತು. ಗರ್ಭಧಾರಣೆಗಾಗಿ ಅದನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಲಿಂಗಪರಿವರ್ತನೆ ಬಳಿಕ ಕುಟುಂಬ ಮತ್ತು ವೈದ್ಯರ ಬೆಂಬಲಕ್ಕಾಗಿ ಪವಲ್ ಧನ್ಯವಾದ ಹೇಳಿದ್ದಾರೆ.
Kerala, transgender, couple, welcome, baby, March,