ಬೆಂಗಳೂರು,ಫೆ.18- ಕಾಂಗ್ರೆಸ್‍ನವರಿಗೆ ಕೇಸರಿ ಶಾಲನ್ನು ಒಪ್ಪಿಕೊಳ್ಳಲು ಆಗದೆ, ಹಿಜಾಬ್ ಸಮರ್ಥಿಸಿಕೊಳ್ಳಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿ ಶಾಲು ಬಗ್ಗೆ ಮಾತನಾಡಿದರೆ ಹಿಂದೂಗಳ ಮತ ಕೈ ತಪ್ಪಬಹುದೆಂಬ ಭೀತಿಯಲ್ಲಿದ್ದಾರೆ. ಮತ್ತೊಂದು ಕಡೆ ಹಿಜಾಬ್ ಸಮರ್ಥಿಸಿಕೊಳ್ಳದಿದ್ದರೆ ಅದೇ ಸಮುದಾಯದ ಮತಗಳು ಕೂಡ ನಮಗೆ ಬರುವುದಿಲ್ಲ ಎಂಬದೂ ಗೊತ್ತಾಗಿದೆ. ಹೀಗಾಗಿಯೇ ಸಚಿವ ಈಶ್ವರಪ್ಪನವರ ರಾಜೀನಾಮೆ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದವರಿಗೆ ಕೇಸರಿ ಪಕ್ಷದವರನ್ನು ಕಂಡರೆ ಆಗುವುದಿಲ್ಲ. ಯಾವಾಗಲೂ ಹಿಜಾಬ್ ಮೇಲೆ ಅತೀವ ಪ್ರೀತಿ. ಕೇಸರಿ ವಿರುದ್ಧ ಮಾತನಾಡಿದರೆ ಹಿಂದು ಸಮುದಾಯ ಚುನಾವಣೆಯಲ್ಲಿ ಕೈ ಕೊಡಬಹದೆಂಬ ಆತಂಕದಿಂದಲೇ ಅಹೋರಾತಿಅ್ರ ಧರಣಿ ನಾಟಕ ಪ್ರಾರಂಭಿಸಿದ್ದಾರೆ ಎಂದು ಕುಹುಕವಾಡಿದರು.
ಕಾಂಗ್ರೆಸ್‍ನವರು ಯಾವ ಪುರಾಷರ್ಥಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನಿಮಗೆ ನೈತಿಕತೆ ಇದ್ದರೆ ಅಧಿವೇಶನದಲ್ಲಿ ಪಾಲ್ಗೊಂಡು ಜನರ ಸಮಸ್ಯೆಗಳಿಗೆ ದನಿಯಾಗಿ ಎಂದು ಹೇಳಿದರು.
ಕಾಂಗ್ರೆಸ್‍ನವರಿಗೆ ಅಧಿವೇಶನದಲ್ಲಿ ಪಾಲ್ಗೊಂಡು ಚರ್ಚೆ ಮಾಡಲು ಮುಖವಿಲ್ಲ. ಹೀಗಾಗಿ ವಿಷಯಾಂತರ ಮಾಡಲು ಸಚಿವ ಈಶ್ವರಪ್ಪನವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಇದು ಅರ್ಥವಿಲ್ಲದ ಬೇಡಿಕೆ. ಅವರು ಏನೂ ತಪ್ಪೇ ಮಾಡದಿದ್ದಾಗ ಏಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.
