ಚಂಡೀಗಢ, ಡಿ .17 – ಆಹಾರ ಧಾನ್ಯ ಸಾಗಣೆ ಟೆಂಡರ್ ಹಗರಣದಲ್ಲಿ ಬಂಧಿತರಾಗಿದ್ದ ಪಂಜಾಬ್ ಮಾಜಿ ಸಚಿವ ಭರತ್ ಭೂಷಣ್ ಆಶು ಅವರ ಆಪ್ತ ಸಹಾಯಕ ಲುಯಾನದಲ್ಲಿ ಜಾಗೃತ ದಳದ ಮುಂದೆ ಶರಣಾಗಿದ್ದಾರೆ.
ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದ ಪಂಕಜ್ ಮಲ್ಹೋತ್ರಾ ಕಳೆದ ರಾತ್ರಿ ಶರಣಾಗಿದ್ದು ವಿಚಾರಣೆ ನಂತರ ಲುಯಾನದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಆಶು ಅವರ ಪಿಎ ಆಗಿ ಕೆಲಸ ಮಾಡುತ್ತಿದ್ದ ಮಲ್ಹೋತ್ರಾ,ಸಾರಿಗೆ ಕಾಮಗಾರಿಗೆ ಟೆಂಡರ್ ಕೊಡಿಸಲು ಸಭೆ ಏರ್ಪಡಿಸಲು ಆರೋಪಿ ಗುತ್ತಿಗೆದಾರರಲ್ಲಿ ಒಬ್ಬರಾದ ತೇಲು ರಾಮ್ ಅವರಿಂದ 6 ಲಕ್ಷ ರೂಪಾಯಿ ಲಂಚ ಪಡೆದಿದ್ದರು.
ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ವಾಹನಗಳ ನಕಲಿ ನೋಂದಣಿ ಸಂಖ್ಯೆಗಳ ಮೇಲೆ ಸಾಗಣೆ ಟೆಂಡರ್ಗಳನ್ನು ಹಂಚಿಕೆಗೆ ಸಂಬಂಸಿದ ಹಗರಣದಲ್ಲಿ ಜಾಗೃತ ದಳ ಕಳೆದ ಆಗಸ್ಟ್- 22 ರಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆಶು ಅವರನ್ನು ಲುಯಾನದಲ್ಲಿ ಬಂಸಿತ್ತು.
ಈ ಪ್ರಕರಣದಲ್ಲಿ ಗುತ್ತಿಗೆದಾರ ತೇಲು ರಾಮ್ , ಕಮಿಷನ್ ಏಜೆಂಟ್ ಕ್ರಿಶನ್ ಲಾಲ್ ಸೇರಿದಂತೆ ಕೆಲವರ ಮೇಲೂ ಪ್ರಕರಣ ದಾಖಲಿಸಲಾಗಿದೆ.
#KeyAide #BharatBhushanAshu #surrenders #Vigilanceoffice #Ludhiana