ಆತ್ಮನಿರ್ಭರ ಯೋಜನೆಯಡಿ ರಕ್ಷಣಾ ಸಾಧನ ಉತ್ಪಾದನೆ

Social Share

ನವದೆಹಲಿ,ಫೆ.1-ದೇಶದ ರಕ್ಷಣೆಗೆ ಅವಶ್ಯಕತೆ ಇರುವ ರಕ್ಷಣಾ ಉತ್ಪನ್ನಗಳನ್ನು ವಿದೇಶಗಳಿಂದ ಅಮುದು ಮಾಡಿಸಿಕೊಳ್ಳುವುದನ್ನು ಕಡಿಮೆ ಮಾಡಿ ಆತ್ಮನಿರ್ಭರ ಭಾರತ ಯೋಜನೆಯಡಿ ಸೇನಾ ಸಾಮಗ್ರಿಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಲಾಗಿದೆ.
2021-22ನೇ ಸಾಲಿನಲ್ಲಿ ಶೇ.58ರಷ್ಟು ರಕ್ಷಣಾ ಸಾಮಾಗ್ರಿಗಳನ್ನು ಆತ್ಮನಿರ್ಭರ ಯೋಜನೆಯಡಿ ಉತ್ಪಾದಿಸಲಾಗಿತ್ತು. ಈ ಸಾಮಥ್ರ್ಯವನ್ನು ಪ್ರಸಕ್ತ ಸಾಲಿನಲ್ಲಿ ಶೇ.68ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‍ನಲ್ಲಿ ಘೋಷಿಸಿದ್ದಾರೆ.
ರಕ್ಷಣೆ ಮತ್ತು ಸಂಶೋಧನಾ ಸಾಮಾಗ್ರಿಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುವುದರ ಜತೆಗೆ ಖಾಸಗಿ ಸಂಸ್ಥೆಗಳು ರಕ್ಷಣಾ ಸಾಮಾಗ್ರಿಗಳನ್ನು ಉತ್ಪಾದಿಸುವಂತೆ ಪ್ರೋತ್ಸಾಹ ನೀಡಲಾಗುವುದು.
ಖಾಸಗಿ ಸಂಸ್ಥೆಗಳು ಡಿಆರ್‍ಡಿಒ ಸಹಕಾರದೊಂದಿಗೆ ತಯಾರಿಸುವ ರಕ್ಷಣಾ ಸಾಧನಗಳ ಸಾಮಥ್ರ್ಯ ಪತ್ತೆಗೆ ಪ್ರತ್ಯೇಕ ನೋಡಲ್ ಸಂಸ್ಥೆ ಸ್ಥಾಪಿಸುವುದಾಗಿ ಅವರು ತಿಳಿಸಿದ್ದಾರೆ.

Articles You Might Like

Share This Article