ಬೆಂಗಳೂರು, ಜೂ.11- ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆವಿಐಸಿ) ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆತ್ಮನಿರ್ಭರ್ ಭಾರತ್ ಅಭಿಯಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮೂಲಕ ವಿಶ್ವದ ಮುಂದೆ ದೃಢವಾದ ಭಾರತದ ಚಿತ್ರಣವನ್ನು ಪ್ರಸ್ತುತಪಡಿಸಿದೆ.ಇತಿಹಾಸದಲ್ಲಿ ಮೊದಲ ಬಾರಿಗೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉತ್ಪನ್ನಗಳ ವಹಿವಾಟು 1.34 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಕಳೆದ 9 ಹಣಕಾಸು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಶಲಕರ್ಮಿಗಳು ತಯಾರಿಸಿದ ಸ್ವದೇಶಿ ಖಾದಿ ಉತ್ಪನ್ನಗಳ ಮಾರಾಟದಲ್ಲಿ ಶೇ.332ರಷ್ಟು ಅಭೂತಪೂರ್ವ ಬೆಳವಣಿಗೆಯಾಗಿದೆ.
2013-14ನೇ ಹಣಕಾಸು ವರ್ಷದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ವಹಿವಾಟು ರೂ.31,154 ಕೋಟಿಗಳಾಗಿದ್ದರೆ, 2022-23ರ ಆರ್ಥಿಕ ವರ್ಷದಲ್ಲಿ ರೂ.1,34,630 ಕೋಟಿಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ.ಅದೇ ರೀತಿ ಕೆವಿಐಸಿ ಗ್ರಾಮೀಣ ಪ್ರದೇಶದಲ್ಲಿ 9,54,899 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಕೆವಿಐಸಿಯ ಅಧ್ಯಕ್ಷರಾದ ಮನೋಜ್ ಕುಮಾರ್ ಅವರು ಈ ಸಾಧನೆಯ ಶ್ರೇಯಸ್ಸನ್ನು ಮಹಾತ್ಮ ಗಾಂಯವರ ನಿಜವಾದ ಸೂರ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬ್ರಾಂಡ್ ಶಕ್ತಿ ಜೊತೆಗೆ ಕೆಲಸ ಮಾಡುವ ಕುಶಲಕರ್ಮಿಗಳ ಅವಿರತ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕೇಂದ್ರದ ಮೋದಿ ಸರ್ಕಾರದ 9 ವರ್ಷಗಳ ಅಕಾರಾವಯಲ್ಲಿ ಖಾದಿಗೆ ಹೊಸ ಜೀವ ತುಂಬಿದ ಕೆವಿಐಸಿಯ ಪ್ರಯತ್ನದಿಂದ ಸ್ವಾವಲಂಬನೆಯಿಂದ ಸಮೃದ್ಧಿಯ ಇಂತಹ 9 ದಾಖಲೆಗಳು ಸ್ಥಾಪನೆಯಾಗಿವೆ.ಅಸಾಧಾರಣ ಬೆಳವಣಿಗೆ- 2022-23ರ ಆರ್ಥಿಕ ವರ್ಷದಲ್ಲಿ 268ರ ಗಮನಾರ್ಹ ಏರಿಕೆಯೊಂದಿಗೆ ರೂ.95957 ಕೋಟಿಗಳನ್ನು ತಲುಪಿದೆ.
ಉತ್ಪನ್ನಗಳ ಮಾರಾಟದಲ್ಲಿ ದೊಡ್ಡ ಉತ್ಕರ್ಷ – ಕಳೆದ 9 ಹಣಕಾಸು ವರ್ಷಗಳಲ್ಲಿ, ಮಾರಾಟದ ವಿಷಯದಲ್ಲಿ ಉತ್ಪನ್ನಗಳು ಪ್ರತಿ ವರ್ಷ ಹೊಸ ದಾಖಲೆಗಳನ್ನು ಸೃಷ್ಟಿಸಿವೆ. 2022-23 ರಲ್ಲಿ ರೂ.1,34,630 ಕೋಟಿಗಳನ್ನು ತಲುಪಿತು, ಇದು ಇದುವರೆಗಿನ ಅತ್ಯಕವಾಗಿದೆ.ಹೊಸ ದಾಖಲೆ – ಕಳೆದ 9 ವರ್ಷಗಳಲ್ಲಿ ಖಾದಿ ಬಟ್ಟೆಗಳ ಉತ್ಪಾದನೆಯಲ್ಲಿ ಸಾಟಿಯಿಲ್ಲದ ಬೆಳವಣಿಗೆಯಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ ರೂ.2916 ಕೋಟಿಗಳನ್ನು ಮುಟ್ಟಿದೆ, ಇದು ಅತ್ಯುತ್ತಮ ಸಾಧನೆಯಾಗಿದೆ.
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ : ಡಿಸಿಎಂ ಡಿಕೆಶಿ
ಹೊಸ ಇತಿಹಾಸ ಸೃಷ್ಟಿ – ಕಳೆದ 9 ಹಣಕಾಸು ವರ್ಷಗಳಲ್ಲಿ ಖಾದಿ ಬಟ್ಟೆಗಳ ಬೇಡಿಕೆಯಲ್ಲಿ ತ್ವರಿತ ಬೆಳವಣಿಗೆ ಕಂಡುಬಂದಿದೆ. 2013-14 ರ ಆರ್ಥಿಕ ವರ್ಷದಲ್ಲಿ, ಅದರ ಮಾರಾಟವು ಕೇವಲ ರೂ.1081 ಕೋಟಿಗಳಷ್ಟಿತ್ತು, 2022-23 ರ ಆರ್ಥಿಕ ವರ್ಷದಲ್ಲಿ, ಇದು ರೂ.5943 ಕೋಟಿಗಳನ್ನು ಮುಟ್ಟಲು 450% ರಷ್ಟು ಏರಿಕೆಯಾಗಿದೆ. ಕೋವಿಡï-19 ರ ನಂತರ ಪ್ರಪಂಚದಾದ್ಯಂತ ಸಾವಯವ ಬಟ್ಟೆಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಖಾದಿ ಉಡುಪುಗಳ ಬೇಡಿಕೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ಉದ್ಯೋಗ ಸೃಷ್ಟಿ – ಗ್ರಾಮೀಣ ಪ್ರದೇಶಗಳಲ್ಲಿ ಗರಿಷ್ಠ ಉದ್ಯೋಗಾವಕಾಶಗಳನ್ನು ಒದಗಿಸುವುದು ಕೆವಿಐಸಿಯ ಮುಖ್ಯ ಉದ್ದೇಶವಾಗಿದೆ. ಈ ಕ್ಷೇತ್ರಗಳಲ್ಲೂ ಕಳೆದ 9 ವರ್ಷಗಳಲ್ಲಿ ಕೆವಿಐಸಿ ದಾಖಲೆ ಸೃಷ್ಟಿಸಿದೆ. 2022-23ನೇ ಹಣಕಾಸು ವರ್ಷದಲ್ಲಿ 70% ಹೆಚ್ಚಳದೊಂದಿಗೆ ಒಟ್ಟು 9,54,899 ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ವೇತನದಲ್ಲಿ ದಾಖಲೆಯ ಹೆಚ್ಚಳ – ಖಾದಿ ವಲಯಕ್ಕೆ ಸಂಬಂಧಿಸಿದ ಖಾದಿ ಕುಶಲಕರ್ಮಿಗಳು ಖಾದಿ ಬಟ್ಟೆಗಳ ಉತ್ಪಾದನೆ ಮತ್ತು ಮಾರಾಟದ ಹೆಚ್ಚಳದ ಲಾಭವನ್ನು ಪಡೆಯುತ್ತಿದ್ದಾರೆ. ಏಪ್ರಿಲ್ 1, 2023 ರಿಂದ, ಖಾದಿ ಕುಶಲಕರ್ಮಿಗಳ ವೇತನವನ್ನು 33% ಕ್ಕಿಂತ ಹೆಚ್ಚು ಹೆಚ್ಚಿಸಲಾಗಿದೆ.
ಖಾದಿ ಭವನದ ದಾಖಲೆ – ನವದೆಹಲಿಯ ಕನ್ನಾಟ್ ಎಂಬಲ್ಲಿನ ಕೆವಿಐಸಿಯ ಪ್ರಮುಖ ಖಾದಿ ಭವನ ಮಾರಾಟವು ಸಾರ್ವಕಾಲಿಕ ದಾಖಲೆಗಳನ್ನು ಮುರಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯ ಮೇರೆಗೆ ಖಾದಿ ಪ್ರೇಮಿಗಳು ಮೊದಲ ಬಾರಿಗೆ ಹೊಸ ದಾಖಲೆಯನ್ನು ನಿರ್ಮಿಸಿದರು.
#KhadiGramodyoga,