ಚಂಡೀಗಢ,ಮಾ.19- ತೀವ್ರಗಾಮಿ ಸಿಖ್ ನಾಯಕ ಹಾಗೂ ಖಲಿಸ್ತಾನ್ ಬೆಂಬಲಿತ ಪ್ರತ್ಯೇಕತವಾದಿ ಅಮೃತಪಾಲ್ ಸಿಂಗ್‍ರ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಅದರ ಬೆನ್ನಲ್ಲೆ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಮಧ್ಯಾಹ್ನದವರೆಗೆ ರಾಜ್ಯಾದ್ಯಂ ಮೊಬೈಲ್ ಇಂಟರ್ನೆಟ್, ಎಸ್‍ಎಂಎಸ್ ಸೇವೆಗಳ ಅಮಾನತ್ತನ್ನು ವಿಸ್ತರಿಸಲಾಗಿದೆ.
ನಿನ್ನೆ ದಿಡೀರ್ ಬೆಳವಣಿಗೆಯ ಬಳಿಕ ಶನಿವಾರದಿಂದ ಭಾನುವಾರ ಮಧ್ಯಾಹ್ನದವರೆಗೂ ಇಂಟರ್ನೆಟ್ ಮತ್ತು ಎಸ್‍ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇಂಡಿಯಾ ಟೆಲಿಗ್ರಾಫ್ ಆಕ್ಟ್ 1885 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಹೊರತುಪಡಿಸಿ ಎಲ್ಲಾ ಮೊಬೈಲ್ ಇಂಟರ್ನೆಟ್ ಸೇವೆಗಳು ಮತ್ತು ಎಸ್‍ಎಂಎಸ್ ಸೇವೆಗಳನ್ನು ತಡೆ ಹಿಡಿಯಲಾಗಿದೆ.
ಹಿಂಸಾಚಾರಕ್ಕೆ ಪ್ರಚೋದನೆ, ಸಾರ್ವಜನಿಕ ಸುವ್ಯವಸ್ಥೆಗೆ ಮತ್ತು ಶಾಂತಿ ಭಂಗಕ್ಕೆ ಅವಕಾಶವಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಧ್ವನಿ ಕರೆಗಳಿಗೆ ಯಾವುದೇ ಅಡೆತಡೆಯಾಗಿಲ್ಲ. ಮಾರ್ಚ್ 20ರ 12.00 ಗಂಟೆವರೆಗೂ ಈ ನಿರ್ಬಂಧ ಮುಂದುವರೆಯಲಿದೆ ಎಂದು ಅಕೃತ ಆದೇಶದಲ್ಲಿ ತಿಳಿಸಲಾಗಿದೆ.
ಅಖಾಡಕ್ಕಿಳಿದ ಚುನಾವಣಾ ಆಯೋಗ, ಆಮಿಷವೊಡ್ಡುವವರ ತೀವ್ರ ನಿಗಾ
ಬ್ಯಾಂಕಿಂಗ್ ಸೌಲಭ್ಯಗಳು, ಆಸ್ಪತ್ರೆ ಸೇವೆಗಳು ಮತ್ತು ಇತರ ಅಗತ್ಯ ಸೇವೆಗಳಿಗೆ ಅಡ್ಡಿಯಾಗದಂತೆ ಬ್ರಾಡ್‍ಬ್ಯಾಂಡ್ ಸೇವೆಗಳನ್ನು ಮುಂದುವರೆಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಶನಿವಾರ ತಡರಾತ್ರಿ ಜಲಂಧರ್‍ನ ನಾಕೋದರ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಜಲಂಧರ್ ಪೊಲೀಸ್ ಆಯುಕ್ತ ಕುಲದೀಪ್ ಸಿನ್ಹ್ ಚಾಹಲ್, ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಪರಾರಿಯಾಗಿದ್ದು, ನಾವು ಅವನನ್ನು ಹುಡುಕುತ್ತಿದ್ದೇವೆ. ಶೀಘ್ರದಲ್ಲೇ ಬಂಧಿಸುತ್ತೇವೆ. ಅಮೃತ್‍ಪಾಲ್‍ಗೆ ಸೇರಿದ ಎರಡು ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪ್ರತೇಕತಧ್ವನಿಯನ್ನು ಹತ್ತಿಕ್ಕಲು ಪಂಜಾಬ್ ಸರ್ಕಾರ ಶನಿವಾರ ಕಾರ್ಯಾಚರಣೆ ಆರಂಭಿಸಿದೆ. ಅಮೃತಪಾಲ್ ವಿರುದ್ಧ ಕಾರ್ಯಾಚರಣೆಯ ಭಾಗವಾಗಿ ಅವರ ಸಂಘಟನೆಯ 78 ಸದಸ್ಯರನ್ನು ಬಂಧಿಸಲಾಗಿದೆ. ಅಮೃತ್‍ಪಾಲ್ ಬಂಧನಕ್ಕೆ ಜಲಂಧರ್ ಜಿಲ್ಲೆಯಲ್ಲಿ ಪೊಲೀಸರು ಬಿಗಿ ಭದ್ರತೆಯೊಂದಿಗೆ ಬಲೆ ಬೀಸಿದ್ದರು. ಆದರೆ ಅವರು ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.
ಅಮೃತಪಾಲ್ ನೇತೃತ್ವದ ವಾರಿಸ್ ಪಂಜಾಬ್ ದೇ (ಡಬ್ಲ್ಯುಪಿಡಿ) ಯ ವಿರುದ್ಧ ರಾಜ್ಯಾದ್ಯಂತ ಕಾರ್ಯಾಚರಣೆ ಆರಂಭವಾಗಿದೆ. ಈ ಸಂಘಟನೆಯ ಕಾರ್ಯಕರ್ತರು ಸಮುದಾಯಗಳ ನಡುವೆ ವೈಮನಸ್ಸು ಹರಡುವುದು, ಕೊಲೆ ಯತ್ನ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಸಾರ್ವಜನಿಕ ಸೇವಕರ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ನಾಲ್ಕು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ್ದಾರೆ.
ರಾಜ್ಯಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಈವರೆಗೂ ಒಂದು .315 ಬೋರ್ ರೈಫಲ್, 12 ಬೋರ್‍ನ ಏಳು ರೈಫಲ್‍ಗಳು, ಒಂದು ರಿವಾಲ್ವರ್ ಮತ್ತು ವಿವಿಧ ಕ್ಯಾಲಿಬರ್‍ನ 373 ಜೀವಂತ ಕಾಟ್ರಿಡ್ಜ್‍ಗಳು ಸೇರಿದಂತೆ ಒಂಬತ್ತು ಶಸ್ತ್ರಾಸ್ತ್ರಗಳನ್ನು ಇದುವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್‍ನ ಹಲವೆಡೆ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಭದ್ರತಾ ಪಡೆಗಳು ವಾಹನಗಳನ್ನು ತಪಾಸಣೆ ನಡೆಸುತ್ತಿವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಕಳೆದ ಫೆಬ್ರವರಿ 24ರಂದು ಅಮೃತಪಾಲ್ ಮತ್ತು ಅವರ ಬೆಂಬಲಿಗರು ಕತ್ತಿ ಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್‍ಗಳನ್ನು ಭೇದಿಸಿ ಅಮೃತಸರ ನಗರದ ಹೊರವಲಯದಲ್ಲಿರುವ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ, ಅಮೃತ್‍ಪಾಲ್ ಸಹಾಯಕರೊಬ್ಬರ ಬಿಡುಗಡೆಗಾಗಿ ಪೆÇಲೀಸರೊಂದಿಗೆ ಘರ್ಷಣೆ ನಡೆಸಿದ್ದರು.
ಈ ಘಟನೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿ ಸೇರಿದಂತೆ ಆರು ಪೊಲೀಸರು ಗಾಯಗೊಂಡಿದ್ದರು. ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯ ನಂತರ ರಾಜ್ಯದ ಎಎಪಿ ಸರ್ಕಾರ ಟೀಕೆಗೆ ಒಳಗಾಗಿತ್ತು, ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
#Khalistani, #Leader, #AmritpalSingh, #Arrest #Punjab, #HighAlert,