ನವದೆಹಲಿ,ಜ.15- ಅಚಲ ಧೈರ್ಯ, ಅತ್ಯಂತ ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರಿಗೆ ಜನ ಋಣಿಯಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸೇನಾ ದಿನದ ಸಂದರ್ಭದಲ್ಲಿ ಸೈನಿಕರು ಮತ್ತು ಯೋಧರನ್ನು ಅವರು ಶ್ಲಾಘಿಸಿದ್ದಾರೆ. ನಮ್ಮ ವೀರ ಯೋಧರಿಗೆ, ಮಾಜಿ ಸೈನಿಕರಿಗೆ ನಮನಗಳು ಮತ್ತು ಅವರ ಕುಟುಂಬಕ್ಕೆ ಕೃತಜ್ಞತೆಗಳು ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂ ಕೂಡ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್, ಶೌರ್ಯ, ದೇಶಭಕ್ತಿ ಮತ್ತು ತ್ಯಾಗ ನಮ್ಮ ಸೇನೆಯ ಪ್ರತಿಯೊಬ್ಬ ಸೈನಿಕನಲ್ಲೂ ತುಂಬಿದೆ. ಎಲ್ಲಾ ಯೋಧರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ತ್ಯಾಗ ಮತ್ತು ಸಮರ್ಪಣೆಯ ಸೇನಾ ದಿನದ ಶುಭಾಶಯಗಳನ್ನು ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಭಾರತೀಯ ಸೇನಾ ದಿನದಂದು ನಾವು ಯೋಧರ ನಿಸ್ವಾರ್ಥ ಸೇವೆಗಾಗಿ ವಂದಿಸುತ್ತೇವೆ. ಭಾರತೀಯ ಸೇನೆಯು ತನ್ನ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆಗಿರುವ ಹೆಮ್ಮೆಯ ದಿನವನ್ನು ನೆನಪಿಸಿಕೊಳ್ಳುತ್ತೇವೆ.
1949 ಜನವರಿ 15ರಂದು ಬ್ರಿಟಿಷ್ ಕೊನೆಯ ಸೇನಾಕಾರಿಯಿಂದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಸೇನೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಆ ದಿನವನ್ನು ಭಾರತೀಯ ಸೇನಾ ದಿನವೆಂದು ಆಚರಿಸಲಾಗುತ್ತಿದೆ.
#ForeverIndebted #soldiers #unflinchingcourage, #selflesssacrifice, #MallikarjunKharge, #ArmyDay,