ಖಾಸಗಿ ಪುಠಗಳನ್ನ ನೋಡಿ ಕೊಂಡಾಡಿದ ಪ್ರೇಕ್ಷಕ

Social Share

ಕಲ್ಯಾಣ ಪುರದಲ್ಲಿ ನಡೆಯುವ ಸೂರ್ಯ ಮತ್ತು ಭೂಮಿ ಎರಡು ಹೃದಯಗಳ ಪ್ರೇಮ ಕಥೆ, ಇಬ್ಬರೂ ಪ್ರೀತಿಯ ಉತ್ತುಂಗದ ತುತ್ತ ತುದಿಯಲ್ಲಿ ಇಹ ಲೋಕವನ್ನು ಮರೆತು ಕನಸುಗಳ ಕುದುರೆಯನ್ನೇರಿ ವಿಹರಿಸುವಾಗ ಕಾಣದ ವಿಧಿ ನಾಯಕಿಯ ಅಪಘಾತದ ಮೂಲಕ ಯುವ ಪ್ರೇಮಿಗಳ ಪ್ರೀತಿಯನ್ನ ಆಪೋಷನ ಪಡೆಯುವುದು ಪ್ರೇಕ್ಷರ ಹೃದಯಗಳನ್ನ ಭಾರವಾಗಿಸುತ್ತದೆ.ಇದು ಈ ವಾರ ತೆರೆಕಂಡು ಚಿತ್ರ ಪ್ರೇಮಿಗಳನ್ನ ಬಹಳವಾಗಿ ಆಕರ್ಷಿಸಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಖಾಸಗಿ ಪುಟಗಳ ಚತ್ರದ ಒಂದು ನೋಟ.

ಕಂಟೆಂಟ್ ಚಿತ್ರಗಳ ನಡುವೆ ಲವ್ ಸ್ಟೋರಿಗಳು ಇತ್ತೀಚೆಗೆ ಸದ್ದು ಮಾಡುತ್ತಿವೆ.ಅದರಲ್ಲಿ ಈ ಚಿತ್ರವೂ ಒಂದು. ನಿರ್ದೇಶಕ ಸಂತೋಷ್ ಶ್ರೀಕಂಠಪ್ಪ ಯವ ಮನಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಒಂದು ಅದ್ಭುತ ಪ್ರೇಮ ಕಾವ್ಯವನ್ನು ತೆರೆಯ ಮೇಲೆ ತಂದು ಯಶಸ್ವಿಯಾಗಿದ್ದಾರೆ.ಗಾಡವಾಗಿ ಸಾಗುತ್ತಿರುವ ಪ್ರೀತಿಗೆ ಅಡಚಣೆ ತಂದು ವಿಕ್ಷಕರನ್ನ ಭಾವನೆಗ ಬಂಡಿಯಲ್ಲಿ ಸಾಗುವ ಪರಿ ನಿರ್ದೇಶಕರ ಜಾಣ್ಮೆ.

ಅಪಪ್ರಚಾರಗಳಿಂದ ನೊಂದಿರುವೆ : ನೋವು ತೋಡಿಕೊಂಡ ರಶ್ಮಿಕ ಮಂದಣ್ಣ

ವಿಶ್ವ ಮತ್ತು ಶ್ವೇತ ನಾಯಕ ನಯಕಿಯರಾಗಿ ಮಿಂಚಿದ್ದಾರೆ,ಬಹಳ ಸಹಜ ಅಭಿನಯದ ಮೂಲಕ,ಎಲ್ಲರಿಗೂ ಜೀವನದಲ್ಲೂ ಈ ರೀತ ನಡೆದಿದೆ ಎನ್ನುವಷ್ಟು ಹತ್ತರವೆಂಬಂತೆ ಅಭಿನಯಿಸಿದ್ದಾರೆ.ನಾಯಕಿ ಅಪಘಾತದಲ್ಲ ತೀರಿಕೊಂಡಿದ್ದಾಳೆ ಎಂಬ ಭಾವನೆಯಲ್ಲಿ ಚಿತ್ರ ವಿಕ್ಷಿಸುವಾಗ ಅವಳ ನೆನಪಲ್ಲಿ ಆಗುವ ತಿರುವುಗಳಿಗೆ ನಾಯಕ ಜೀವ ತುಂಬಿದ್ದಾರೆ.

ಕೆ.ಕಲ್ಯಾಣ್,ಪ್ರಮೋದ್ ಮರುವಂತೆ,ವಿಶ್ವಜಿತ್ ರಾವ್ ಸಾಹಿತ್ಯ ಕಥೆಗೆ ತುಂಬಾ ಪೂರಕವಾಗೆದೆ,ಇದರ ಹಿನ್ನೆಲಯಲ್ಲಿ ವಾಸುಕಿ ವೈಭವ್ ಸಂಗೀತ ಇಡೀ ಕಥೆಯಲ್ಲಿ ಗುನುಗುತ್ತದೆ.ಛಾಯಾಗ್ರಾಹಕ ವಿಶ್ವಜಿತ್ ರಾವ್,ಕಡಲತೀರದಲ್ಲಿ ಅರಳುವ ಲವ್ ಸ್ಡೋರಿಯನ್ನ ಕ್ಯಾಮರಾ ಕಣ್ಣಲ್ಲಿ ಸೊಗಸಾಗೆ ಸೆರೆಹಿಡಿದಿದ್ದಾರೆ.ಫ್ಯಾಮಿಲಿ ಜೊತೆ ಕೂತು ನೋಡುವ ಸಿನಿಮಾಗಳು ಈಗ ಬರುತ್ತಿಲ್ಲ ಎನ್ನುವವರಿಗೆ ಇದು ಉತ್ತರ.

KhasagiPutagalu, #Vishwa, #VasukiVaibhav, #Movie, #PublicReview,

Articles You Might Like

Share This Article