ಬೆಂಗಳೂರು,ಫೆ.24- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಲ್ಲಿರುವ ಎಲ್ಲಾ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಹಾಗೂ ಈ ಸಂಬಂಧ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಫೆ.27 ರಿಂದ ಖಾತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಎಂದು ವಿಶೇಷ ಆಯುಕ್ತ(ಕಂದಾಯ)ರಾದ ಡಾ. ಆರ್.ಎಲ್ ದೀಪಕ್ ತಿಳಿಸಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಬಿಎಂಪಿ ಎಲ್ಲಾ ವಲಯಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗುತ್ತಿದ್ದು ಅದು ಬೆಳಗ್ಗೆ 11:00 ರಿಂದ ಸಂಜೆ 4:00 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಸ್ವತ್ತಿನ ಮಾಲೀಕರಿಗೆ ಹೊಸದಾಗಿ ಖಾತೆ ನೊಂದಾಯಿಸಿಕೊಳ್ಳುವ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದರು.
ಖಾತಾ ಆಂದೋಲನ ಕಾರ್ಯಕ್ರಮದ ಮೂಲಕ ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತಿನ ಮಾಲೀಕರು ಸಂಬಂಧಪಟ್ಟ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳನ್ನು ಸಂಪರ್ಕಿಸಿ ಸ್ವತ್ತಿನ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು.ಖಾತೆ ನೊಂದಾವಣೆ ಕುರಿತ ಅರ್ಜಿಗಳನ್ನು ಪರಿಶೀಲಿಸಿ ಸ್ವತ್ತುಗಳ ವಿವರಗಳನ್ನು ನಿಯಮಾನುಸಾರ ಕಾಲಮಿತಿಯಲ್ಲಿ ನೊಂದಾಯಿಸಿಕೊಂಡು ಆಸ್ತಿತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ಖಾತಾ ಆಂದೋಲನ ಕಾರ್ಯದ ಮೇಲ್ವಿಚಾರಣೆಗೆ ವಲಯ ಉಪ ಆಯುಕ್ತರುಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿರುತ್ತದೆ.ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಹಾಗೂ ಕಛೇರಿ ವಿಳಾಸ ಪಡೆಯಲು ಪಾಲಿಕೆಯ ಜಾಲತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬುಹುದು.
ಬೆಂಗಳೂರಿನಲ್ಲಿ ಒಟ್ಟು 9 ಲಕ್ಷ ಆಸ್ತಿಗಳಿವೆ ಅದರಲ್ಲಿ ಆರು ಲಕ್ಷ ಆಸ್ತಿಗಳು ಬಿ ಖಾತಾ ಆಸ್ತಿಗಳಾಗಿವೆ,ಬೋಗಸ್ ಎ ಖಾತದ ಬಗ್ಗೆ ಮಾಹಿತಿ ಇದ್ರೆ ತಕ್ಷಣ ತನಿಖೆ ಮಾಡಿ ಸರಿಪಡಿಸಲಾಗುವುದು ಎಂದರು ಖಾತಾ ಆಂದೋಲನದಿಂದ 100 ಕೋಟಿ ತೆರಿಗೆ ಸಂಗ್ರಹಣೆಯ ನಿರೀಕ್ಷೆ ಹೊಂದಲಾಗಿದೆ ,ಖಾತಾ ಆಂದೋಲನದಲ್ಲಿ ಆಸ್ತಿದಾರರಿಗೆ ಖಾತಾ ಮಾಡಿಕೊಡಲು ಸಮಯ ನಿಗದಿಪಡಿಸಲಾಗುವುದು ಎಂದು ಹೇಳಿದರು.
ಕಂದಾಯ ಅ ಬೆಂಗಳೂರಿನಲ್ಲಿ ಒಟ್ಟು 9 ಲಕ್ಷ ಆಸ್ತಿಗಳಿವೆ ಅದರಲ್ಲಿ ಆರು ಲಕ್ಷ ಆಸ್ತಿಗಳು ಬಿ ಖಾತಾ ಆಸ್ತಿಗಳಾಗಿವೆ ಇದರಲ್ಲಿ ಬೋಗಸ್ ಎ ಖಾತದ ಬಗ್ಗೆ ಮಾಹಿತಿ ಇದ್ರೆ ತಕ್ಷಣ ತನಿಖೆ ಮಾಡಿ ಸರಿಪಡಿಸಲಾಗುವುದು ಎಂದರು.
ಖಾತಾ ಆಂದೋಲನದಿಂದ 100 ಕೋಟಿ ತೆರಿಗೆ ಸಂಗ್ರಹಣೆಯ ನಿರೀಕ್ಷೆ ಹೊಂದಲಾಗಿದೆ ಖಾತಾ ಆಂದೋಲನದಲ್ಲಿ ಆಸ್ತಿದಾರರಿಗೆ ಖಾತಾ ಮಾಡಿಕೊಡಲುಸಮಯ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ಮಾರ್ಚ್ 31ರ ವೇಳೆಗೆ 3100 ಕೋಟಿ ತೆರಿಗೆ ಪಾವತಿಯಾಗಿತ್ತು ಈ ಬಾರಿ ಫೆಬ್ರವರಿಯ¯್ಲÉೀ 3000 ಕೋಟಿ ತೆರಿಗೆ ಬಂದಿದೆ,ನÀಮ್ಮ ಟಾರ್ಗೆಟ್ 4000 ಕೋಟಿ ಇದೆ, ಖಂಡಿತವಾಗಿ ಗುರಿ ಸಾಸುವ ನಂಬಿಕೆಯಿದೆ, ಇದು ಬಿಬಿಎಂಪಿಯ ಸಾಧನೆಯಲ್ಲ, ಜನರ ಸಾಧನೆಯಾಗಿದೆ ಎಂದರು.
ಒಟ್ಟಾರೆ ಬೆಂಗಳೂರಿನಲ್ಲಿ ಹಲವು ಪ್ರದೇಶಗಳು ತೆರಿಗೆ ವ್ಯಾಪ್ತಿಯಲ್ಲಿ ಇರಲಿಲ್ಲ ಇದರಿಂದ ಆದಾಯ ಸೋರಿಕೆಯಾಗುತಿತ್ತು.ಈಗ ಎಚ್ಚರತ್ತಿರುವ ಪಾಲಿಕೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಆಸ್ತಿ ತನ್ನ ಅಡಿಗೆ ಸೇರಿಸಿಕೊಳ್ಳುತ್ತಿದೆ.
#Bengaluru, #BBMP, #Properties,