ಕಿಚ್ಚನಿಗಿಂದು 46ನೇ ಹುಟ್ಟುಹಬ್ಬ, ಅಭಿಮಾನಿಗಳೊಂದಿಗೆ ಸುದೀಪ್ ಸಂಭ್ರಮಾಚರಣೆ

Spread the love

Sudeeop--01

ಬೆಂಗಳೂರು,ಸೆ.2- ಅಭಿನಯ ಚಕ್ರವರ್ತಿ ಸುದೀಪ್ ಅವರು ತಮ್ಮ 46ನೇ ಹುಟ್ಟುಹಬ್ಬವನ್ನು ತಮ್ಮ ಕುಟುಂಬ ಮತ್ತು ಅಪಾರ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ರಾತ್ರಿಯಿಂದಲೇ ಜೆಪಿನಗರದಲ್ಲಿರುವ ಸುದೀಪ್ ಮನೆಯ ಮುಂದೆ ಜಮಾಯಿಸಿ ಸಂಭ್ರಮಿಸಿದರು. ಕೊಡುಗಿನಲ್ಲಿ ಅತಿಯಾದ ಮಳೆಯಿಂದ ಉಂಟಾಗಿರುವ ಭಾರೀ ಅತಿವೃಷ್ಟಿ ಹಿನ್ನೆಲೆಯಲ್ಲಿ ತಮ್ಮ ಹುಟ್ಟಹಬ್ಬವನ್ನು ಸರಳವಾಗಿ ಆಚರಿಸುವಂತೆ ಅಭಿಮಾನಿಗಳಿಗೆ ಸುದೀಪ್ ಮನವಿ ಮಾಡಿದ್ದರು.

ನನ್ನ ಹುಟ್ಟುಹಬ್ಬಕ್ಕೆ ಮಾಡುವ ಖರ್ಚನ್ನು ಕೊಡಗಿನ ಸಂತ್ರಸ್ತರಿಗೆ ನೀಡುವಂತೆ ಸುದೀಪ್ ತಿಳಿಸಿದ್ದರು. ಅದರಂತೆ ಅಭಿಮಾನಿಗಳು ಸರಳವಾಗಿ ತನ್ನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಹುಟ್ಟು ಹಬ್ಬದ ಅಂಗವಾಗಿ ಕೋಟಿಗೊಬ್ಬ -3, ಪೈಲ್ವಾನ್ ಚಿತ್ರದ ಟೀಸರ್‍ನ್ನು ಬಿಡುಗಡೆ ಮಾಡಲಾಯಿತು ಮತ್ತು ತೆಲುಗಿನ ಸೈರಾ ನರಸಿಂಹರೆಡ್ಡಿ ಚಿತ್ರದ ಟೀಸರ್‍ನ್ನು ಕೂಡ ಇದೇ ವೇಳೆ ಬಿಡುಗಡೆ ಮಾಡಲಾಯಿತು.  ಬಹುನಿರೀಕ್ಷಿತ ಚಿತ್ರ ದಿ ವಿಲನ್ ಟೀಸರ್ ಕೂಡ ಬಿಡುಗಡೆಯಾಗಿದ್ದು, ಸದ್ಯದಲ್ಲೇ ತೆರೆ ಕಾಣಲಿದೆ.

Sudeep 2

ನಟನೆ ಮಾತ್ರವಲ್ಲದೆ ಚಿತ್ರಗಳನ್ನು ನಿರ್ದೇಶಿಸಿ ತಾಂತ್ರಿಕ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವ ಸುದೀಪ್ ಅವರು ಹಲವಾರು ಹಿಟ್ ಚಿತ್ರಗಳನ್ನು ನೀಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.ಸ್ಪರ್ಶ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ಸುದೀಪ್ ನಂತರ ಹುಚ್ಚ, ಕಿಚ್ಚ, ರನ್ನ, ರಂಗ ಎಸ್ಸೆಸ್ಸೆಲ್ಸಿ, ಧಮ್, ನಲ್ಲ, ನಂದಿ, ಗೂಳಿ, ವೀರ ಮದಕರಿ, ವಿಷ್ಣುವರ್ಧನ, ಬಚ್ಚನ್, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮೈ ಆಟೋಗ್ರಾಫ್, ಮುಸ್ಸಂಜೆ ಮಾತು, ಮಾಣಿಕ್ಯ, ಮುಕುಂದ ಮುರಾರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.  ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ, ತಮಿಳು ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Sudeep 4 Sudeep 1

Facebook Comments

Sri Raghav

Admin