ನಿಜ ಜೀವನದಲ್ಲೂ ‘ವಿಲನ್’ ಆದರೇ ಸುದೀಪ್..?

Kichcha--01
ಬೆಂಗಳೂರು, ಆ.1- ಖ್ಯಾತ ಚಿತ್ರನಟ ಸುದೀಪ್ ಅವರು ನಿಜ ಜೀವನದಲ್ಲೂ ದ ವಿಲನ್ ಆಗಿದ್ದಾರೆ ಎಂದು ಕಾಫಿತೋಟದ ಮಾಲೀಕರೊಬ್ಬರು ದೂರು ನೀಡಿದ್ದಾರೆ. ಕಿಚ್ಚ ಕ್ರಿಯೇಷನ್ ಅಡಿ ನಿರ್ಮಾಣಗೊಂಡಿರುವ ವಾರಸ್ದಾರ ಧಾರಾವಾಹಿಯ ಚಿತ್ರೀಕರಣಕ್ಕೆ ಬಳಕೆ ಮಾಡಿಕೊಂಡ ಕಾಫಿ ತೋಟಕ್ಕೆ ಸಮರ್ಪಕವಾಗಿ ಹಣ ನೀಡದೆ ಸುದೀಪ್ ವಂಚಿಸಿದ್ದಾರೆ ಎಂದು ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಮಾಲೀಕ ದೀಪಕ್ ಮಯ್ಯೂರ್ ಪಟೇಲ್ ಎಂಬುವವರು ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದಾರೆ.

2016ರಲ್ಲಿ ವಾರಸ್ದಾರ ಧಾರಾವಾಹಿಯನ್ನು ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದಾಗ ಬೈಗೂರು ಗ್ರಾಮದಲ್ಲಿರುವ ನನ್ನ ಕಾಫಿ ತೋಟವನ್ನು ಬಳಕೆ ಮಾಡಿಕೊಂಡಿದ್ದರು. ನನ್ನ ತೋಟ ಬಳಕೆ ಮಾಡಿಕೊಳ್ಳುವ ಮುನ್ನ ಮುಂಗಡವಾಗಿ ನನಗೆ 5 ಲಕ್ಷ ಹಣ ನೀಡಿದ್ದರು. ಆದರೆ, ಶೂಟಿಂಗ್ ವೇಳೆ ಚಿತ್ರೀಕರಣ ತಂಡ ಮತ್ತು ನನ್ನ ನಡುವೆ ಕಿರಿಕ್ ಆಗಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಯಿತು. ಇಷ್ಟೆಲ್ಲ ಆದರೂ ಚಿತ್ರೀಕರಣ ತಂಡದವರು ನನಗೆ ನ್ಯಾಯಯುತವಾಗಿ ಬರಬೇಕಾದ ಹಣ ಪಾವತಿ ಮಾಡದೆ ವಂಚಿಸಿದ್ದಾರೆ. ಈ ಎಲ್ಲ ಸತ್ಯ ಕಿಚ್ಚ ಕ್ರಿಯೇಷನ್ ಮಾಲೀಕರಾದ ಸುದೀಪ್ ಅವರು ಈ ವಿಚಾರದ ಬಗ್ಗೆ ಚಕಾರವೆತ್ತದೆ ಇರುವುದು ಬೇಸರ ತರಿಸಿದೆ.

ನನಗಾದ ಅನ್ಯಾಯದ ಬಗ್ಗೆ ಸುದೀಪ್ ಅವರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿಗಳು ಹಾಗೂ ಚಲನಚಿತ್ರ ವಾಣಿಜ್ಯಮಂಡಳಿಯವರು ಈ ವಿಚಾರವನ್ನು ಕಿಚ್ಚ ಅವರ ಗಮನಕ್ಕೆ ತಂದು ನನಗೆ ಬರಬೇಕಾದ ಹಣ ದೊರಕಿಸಿಕೊಡುವಂತೆ ದೀಪಕ್ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Sri Raghav

Admin