Wednesday, May 31, 2023
Homeಇದೀಗ ಬಂದ ಸುದ್ದಿಕಿಚ್ಚನ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ..!

ಕಿಚ್ಚನ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ..!

- Advertisement -

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮನಸ್ಸಿಗೆ ಖುಷಿ ನೀಡುವಂತ ಸುದ್ದಿಯೊಂದು ಸಿಕ್ಕಿದೆ‌. ವಿಕ್ರಾಂತ್ ರೋಣ‌ ಸಿನಿಮಾ ಆದ್ಮೇಲೆ ಸುದೀಪ್ ಮತ್ಯಾವ ಸಿನಕಮಾವನ್ನು ಅನೌನ್ಸ್ ಮಾಡಿರಲಿಲ್ಲ. ಫ್ಯಾನ್ಸ್ ಕೂಡ ಕಾತುರದಿಂದ ಕಾಯುತ್ತಿದ್ದರು. ಸಿನಿಮಾ ಯಾವಾಗ ಅನೌನ್ಸ್ ಮಾಡುತ್ತಾರೆ ಎಂದು. ಸಣ್ಣಮಟ್ಟಿಗೆ ಸಮಾಧಾನವಾಗುವಂತ ವಿಡಿಯೋ ಝಲಕ್ ಒಂದು ಸಿಕ್ಕಿದೆ‌.

ಇತ್ತಿಚೆಗೆ ಸಿಸಿಎಲ್ ಕ್ರಿಕೆಟ್, ಚುನಾವಣೆ ಪ್ರಚಾರ ಅಂತೆಲ್ಲಾ ಕಿಚ್ಚ ಸುದೀಪ್ ಬ್ಯುಸಿ ಇದ್ದರು. 3 ಕತೆಗಳನ್ನು ಫೈನಲ್ ಮಾಡಿರುವುದಾಗಿ, ಶೀಘ್ರದಲ್ಲೇ ಒಂದು ಸಿನಿಮಾ ಘೋಷಣೆ ಮಾಡುತ್ತೇನೆ ಎಂದು ತಿಳಿಸಿದ್ದರು. ಇದೀಗ ತಮಿಳಿನ ಕಲೈಪುಲಿ ಎಸ್‌. ತನು ನಿರ್ಮಾಣದ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ಜಬರ್ದಸ್ತ್ ಬಿಜಿಎಂ ಜೊತೆಗೆ ಟೀಸರ್ ಶೂಟಿಂಗ್‌ಗಾಗಿ ಸುದೀಪ್ ಸೆಟ್‌ಗೆ ಬಂದಿರುವ ವಿಡಿಯೋ ಶೇರ್ ಮಾಡಲಾಗಿದೆ. ಕಿಚ್ಚನ ಲುಕ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ಈ ಸಿನಿಮಾ ವಿಚಾರವಾಗಿ ನಟ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ. “ತನು ಸರ್ ಹಾಗೂ ವಿ ಕ್ರಿಯೇಷನ್ಸ್ ಬಹಳ ಖುಷಿಯಾಗುತ್ತಿದೆ. ಟೀಸರ್ ಚಿತ್ರೀಕರಣದ ಸಮಯದಲ್ಲಿ ಸೆಟ್‌ನಲ್ಲಿ ಅದ್ಭುತ ಸಮಯವದು. ಇದಕ್ಕಾಗಿ ತಂಡಕ್ಕೆ ಧನ್ಯವಾದಗಳು. ಟೀಸರ್ ಫಸ್ಟ್ ಝಲಕ್ ನೋಡಲು ಕಾತರದಿಂದ ಕಾಯುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

#KichchaSudeep, #KalaippuliThanu, #VijayKarthikeyan,

- Advertisement -
RELATED ARTICLES
- Advertisment -

Most Popular