ಹಾಸನ, ಫೆ.8- ಮೂರು ದಿನಗಳ ಹಿಂದೆ ಅಪರಣಗೊಂಡಿದ್ದ ಯುವಕ ದುದ್ದ ಬಳಿಯ ಯೋಗಿಹಳ್ಳಿ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಹಾಸನದ ಹೊಯ್ಸಳ ನಗರದಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‍ಗೌಡ ಅಲಿಯಾಸ್ ಬಂಗಾರಿ(26) ಮೃತ ಯುವಕನಾಗಿದ್ದಾನೆ.
ಕಳೆದ ಐದು ತಿಂಗಳ ಹಿಂದೆ ವಿವಾಹವಾಗಿದ್ದ ಲಿಖಿತ್‍ಗೌಡನನ್ನು ಸರ್ವಿಸ್ ಸ್ಟೇಷನ್‍ಗೆ ಟ್ಯಾಂಕರ್ ಸರ್ವಿಸ್‍ಗೆ ಬರುತ್ತಿದ್ದ ಟ್ಯಾಂಕರ್ ಚಾಲಕ ಸಾಗರ್ ಈ ಕೊಲೆ ಮಾಡಿರಬಹುದೆಂಬ ಶಂಕೆ ಇದೆ.
ಲಿಖಿತ್‍ಗೌಡ ಹಾಗೂ ಸಾಗರ್ ನಡುವೆ ಸ್ನೇಹ ಬೆಳೆದಿತ್ತು ಲಿಖಿತ್‍ಗೌಡನಿಂದ 2.50 ಲಕ್ಷ ರೂ. ಸಾಲ ಪಡೆದಿದ್ದ ಸಾಗರ್ ಹಣ ವಾಪಾಸ್ ನೀಡದೇ ಸತಾಯಿಸುತ್ತಿದ್ದ ಇದರ ಬಗ್ಗೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ಥಳ ಮಂಜೂರು
ಇತ್ತೀಚೆಗೆ ಲಿಖಿತ್‍ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ, ಸಾಗರನ ಆ್ಯಕ್ಟಿವಾ ಹೋಂಡಾ ಬೈಕ್ ಜಪ್ತಿ ಮಾಡಿಕೊಂಡು ಬಂದಿದ್ದ ಇದು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಪುನಃ ಜಗಳ ನಡೆದಿತ್ತು ಎನ್ನಲಾಗಿದೆ.
ಫೆ.5ರಂದು ಸಂಜೆ 6.30 ಸುಮಾರಿನಲ್ಲಿ ಹಣ ಕೊಡುವುದಾಗಿ ಸಾಗರ್ ಹಾಗೂ ಸ್ನೇಹಿತರು ಓಮಿನಿ ಕಾರಿನಲ್ಲಿ ಲಿಖಿತ್‍ಗೌಡನನ್ನು ಕರೆದೊಯ್ದಿದ್ದರು. ಅಂದಿನಿಂದಲೂ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು.
ಪತಿ ಕಾಣದಿದ್ದಾಗ ಲಿಖಿತ್‍ಗೌಡ ಪತ್ನಿ ಹಾಗೂ ಪೋಷಕರು ಕೆ.ಆರ್ .ಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು.
ಬಡಾವಣೆ ಠಾಣೆ ಪೊಲೀಸರಿಗೆ ಅರಣ್ಯ ಪ್ರದೇಶದ ಬಳಿ ಯುವಕನ ಶವ ಪತ್ತೆಯಾಗಿದೆ. ಇದು ಲಿಖಿತ್ ಗೌಡ ಇರಬಹುದೆಂಬ ಅನುಮಾನದಿಂದ ಆತನ ಸಂಬಂಕರನ್ನು ಕರೆಸಿ ನೋಡಿದಾಗ ಅದು ಲಿಖಿತ್‍ಗೌಡ ಎಂದು ಗುರುತು ಹಚ್ಚಿದ್ದಾರೆ.
ಸರ್ಕಾರಿ ಖರ್ಚಿನಲ್ಲಿ ಹಿಂದುತ್ವದ ಶಂಖನಾದ ಊದಿದರೆ ಸುನಿಲ್ ಕುಮಾರ್?
ಫೆ.5 ರಂದೇ ಬಿ.ಎಂ.ರಸ್ತೆಯ ಬಾರ್‍ವೊಂದರಲ್ಲಿ ಮದ್ಯ ಖರೀದಿಸಲು ಸಾಗರ್ ಬಂದಿರುವುದು ಸಿಸಿ ಟಿವಿಯಲ್ಲಿ ಸರಿಯಾಗಿದ್ದು, ಈತನೇ ತನ್ನ ಸ್ನೇಹಿತರ ಜೊತೆ ಸೇರಿ ಈ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಹೆಚ್ಚಿನ ಮಾಹಿತಿ ಪೊಲೀಸರು ಕಲೆಹಾಕುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ.
kidnapped, Murder, Hassan,