ಕಿಡ್ನಿ ಸ್ಟೋನ್ ಬಗ್ಗೆ ಇರಲಿ ಎಚ್ಚರ..!

Spread the love

ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡ/ಮೂತ್ರ ಕಲ್ಲು ಎಂದರೆ ಇದು ಮೂತ್ರನಾಳದಲ್ಲಿನ ಒಂದು ಹರಳು ಕಣವಾಗಿದ್ದು, ಮೂತ್ರದಲ್ಲಿನ ಅಂಶ ಗಳಿಂದ ರೂಪುಗೊಳ್ಳುತ್ತದೆ. ಮೂತ್ರ ಕಲ್ಲು ಒಂದು ಮರಳಿನ ಕಣದಿಂದ ಒಂದು ಟೆನ್ನಿಸ್ ಬಾಲ್‍ತನಕ ಗಾತ್ರದಲ್ಲಿ ವ್ಯತ್ಯಾಸದಿಂದ ಕೂಡಿರುತ್ತದೆ.

ಗಾತ್ರವು ಏನೇ ಇರಲಿ ಅದು ಕಿಡ್ನಿ/ಯೂರಿನರಿ ಸ್ಟೋನ್‍ನಲ್ಲಿ ಗಣನೆಗೆ ಬರುವುದಕ್ಕಿಂತ ಹೆಚ್ಚಾಗಿ ತೀವ್ರ ನೋವು-ಯಾತನೆ ನೀಡುವ ಸಮಸ್ಯೆಗಳಲ್ಲಿ ಒಂದಾಗಿರುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದರೆ ಕಿಡ್ನಿ/ ಯೂರಿನರಿ ಸ್ಟೋನ್‍ಗಳು ಮೂತ್ರಪಿಂಡಗಳಿಗೆ ಶಾಶ್ವತ ಹಾನಿ ಉಂಟು ಮಾಡಬಲ್ಲದು.

ಕಿಡ್ನಿ ಸ್ಟೋನ್ ಅಥವಾ ಮೂತ್ರದ ಕಲ್ಲುಗಳು ಸಾಮಾನ್ಯವಾಗಿ ಅಪಾಯಕಾರಿಗಳಾಗಿರುತ್ತವೆ. ಮೂತ್ರದ ಕಲ್ಲುಗಳಿಗೆ ಸೂಕ್ತ ಚಿಕಿತ್ಸೆ ನೀಡದಿದ್ದರೆ, ಶಾಶ್ವತ ಮೂತ್ರಪಿಂಡ ಹಾನಿಗೆ ಕಾರಣವಾಗುತ್ತದೆ. ಮೂತ್ರಕಲ್ಲಿನ ಒಂದು ಹಠಾತ್ ನೋವಿನ ದಾಳಿಯು ರಾತ್ರಿ ಅಥವಾ ಮುಂಜಾನೆ ಕಂಡುಬರುತ್ತದೆ.

ನೋವು ಮೊದಲು ಸೊಂಟದಲ್ಲಿ ಕಾಣಿಸಿಕೊಂಡು ಹೊಟ್ಟೆಯ ಸುತ್ತ ಸುತ್ತುತ್ತಾ ತೊಡೆ ಸಂದಿವರೆಗೆ ಚಲಿಸುತ್ತದೆ. ತಲೆ ಸುತ್ತುವಿಕೆ ಮತ್ತು ವಾಂತಿ ಸಾಮಾನ್ಯ ಲಕ್ಷಣಗಳಾಗಿವೆ. ಮೂತ್ರಕಲ್ಲಿನ ಸಮಸ್ಯೆ ಹೊಂದಿ ರುವವರು ಕುಳಿತು ಕೊಳ್ಳಲು ಮತ್ತು ಮಲಗಲು ಒಮ್ಮೊಮ್ಮೆ ಕಷ್ಟವಾಗುತ್ತದೆ. ಕಿಡ್ನಿ ಸ್ಟೋನ್, ಆಪೆಂಡಿಕ್ಸ್, ಕರುಳು ಬೇನೆ, ಕೊಲೈಟಿಸ್ ಇತ್ಯಾದಿಯಂಥ ಇತರ ರೋಗದೊಂದಿಗೆ ಗೊಂದಲಕ್ಕೆ ಕಾರಣವಾಗುತ್ತದೆ.

ಅಡ್ಡ ಪರಿಣಾಮಗಳು ಎಕ್ಸಟ್ರಾ ಕಾಪೆರ್ಪೊರಿಯಲ್ ಸೌಂಡ್ ವೇವ್ ಲಿಥೋಟ್ರೆಪ್ಸಿ (ಇಎಸ್‍ಡಬ್ಲ್ಯುಎಲ್) ವಿಧಾನವು ಯಾವುದೇ ಅಡ್ಡ ಪರಿಣಾಮಗಳಿಲ್ಲದ ಒಂದು ಚಿಕಿತ್ಸೆಯಾಗಿದ್ದು, ಕಳೆದ ಎರಡು ದಶಕಗಳಿಂದ ಈ ಸಮಸ್ಯೆಗಳು ವರದಿಯಾಗಿಲ್ಲ.

ಆದಾಗ್ಯೂ ಮೂತ್ರದ ಮೂಲಕ ಕಲ್ಲುಗಳ ಪುಡಿಗಳು ವಿಸರ್ಜನೆಯಾಗುವಾಗ ಕೆಲವು ರೋಗಿಗಳಲ್ಲಿ ನೋವು, ಜ್ವರ ಮತ್ತು ತಲೆ ಸುತ್ತುವಿಕೆ, ವಾಂತಿ ಕಂಡುಬರಬಹುದು. ಇಂಥ ಲಕ್ಷಣ ಮತ್ತು ಚಿಹ್ನೆಗಳು ದೀರ್ಘಕಾಲ ಇರುವುದಿಲ್ಲ. ಲಘು ನೋವು ನಿವಾರಕ ಔಷಧಿಗಳೊಂದಿಗೆ ಈ ಸಮಸ್ಯೆ ಗಳಿಗೆ ಉಪಶಮನ ಪಡೆಯಬಹುದು.

ಇನ್ನೂ ಕೆಲವು ರೋಗಿಗಳಲ್ಲಿ ಮೂತ್ರ ವಿಸರ್ಜನೆಯಲ್ಲಿ ಸ್ವಲ್ಪ ರಕ್ತಸ್ರಾವವಾಗಬಹುದು. ಇದಕ್ಕೆ ಯಾವುದೇ ವಿಶೇಷ ಚಿಕಿತ್ಸೆಯ ಅಗತ್ಯವಿರುವುದಿಲ್ಲ. 24 ಗಂಟೆಯೊಳಗೆ ಇದು ತಾನಾಗಿಯೇ ನಿಲುಗಡೆಯಾಗುತ್ತದೆ.

ಕುಂಬಳಕಾಯಿ ಬೀಜಗಳು ದೇಹದಲ್ಲಿನ ವಿಷಾಂಶ ಕಡಿಮೆ ಮಾಡುವಲ್ಲಿ ಸಹಕಾರಿ. ಇದು ಲಿವರ್ ಮತ್ತು ಮೂತ್ರಪಿಂಡಗಳ ಕಾರ್ಯಗಳನ್ನು ಸಮರ್ಪಕಗೊಳಿಸುತ್ತದೆ. ದೇಹದಲ್ಲಿರುವ ಯೂರಿಕ್ ಆಮ್ಲ ಮತ್ತಿತರ ಇತರ ವಿಷ ವಸ್ತುಗಳನ್ನು ಇದು ಹೊರ ಹಾಕಲು ನೆರವಾಗುತ್ತದೆ.

ಇದರಿಂದಾಗಿ ಅಪಾಯಕಾರಿ ಕಿಡ್ನಿ ಸ್ಟೋನ್‍ಗಳು ಅಥವಾ ಮೂತ್ರಪಿಂಡ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಗಟ್ಟುತ್ತದೆ. ಸಂಧಿವಾತ ನಿವಾರಣೆಯಲ್ಲೂ ಪ್ರಯೋಜನಕಾರಿ. ದೇಹವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯ ವೃದ್ಧಿಯಾಗುತ್ತದೆ.

ಅಂದರೆ ಶರೀರದ ಮೆಟಬಾಲಿಸಂ ಅರ್ಥಾತ್ ಚಯಾಪಚಯ ಕ್ರಿಯೆ ಸುಗಮವಾಗಿ ನಡೆಯಬೇಕು. ಇದಕ್ಕೆ ಜೀವಸತ್ವಗಳು, ಪೆಪೊೀಷಕಾಂಶಗಳು ಮತ್ತು ಖನಿಜಗಳು ಅಗತ್ಯವಾಗಿರುತ್ತವೆ.

ಚಯಾಪಚಯ ಕ್ರಿಯೆ ಪರಿವರ್ತನೆಗೊಳ್ಳಲು ಅಮೈನೋ ಆಮ್ಲ ಮತ್ತು ಕಿಣ್ವಗಳು ಮುಖ್ಯ. ಇಂಥ ಪೆಪೊ್ರಟೀನ್‍ಗಳು ಕುಂಬಳಕಾಯಿ ಬೀಜಗಳಲ್ಲಿ ಇರುವುದರಿಂದ ದೇಹದ ಕಾರ್ಯ ಸಮರ್ಪಕವಾಗಿ ನಡೆಯಲು ನೆರವಾಗುತ್ತದೆ. ಪ್ರತಿದಿನ ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಪ್ರಯೋಜನ ಉಂಟು.