ಪತ್ನಿಯನ್ನು ಕೊಂದು ಮನೆಗೆ ಬೀಗ ಹಾಕಿ ಪತಿ ಪರಾರಿ

Social Share

ಬೆಂಗಳೂರು, ಫೆ.7- ಪತ್ನಿಯನ್ನು ಮನೆಯೊಳಗೆ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪತಿ ಪರಾರಿಯಾಗಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲ್ಕತ್ತಾ ಮೂಲದ ಮೊನಿಷಾ(24) ಕೊಲೆಯಾಗಿರುವ ಮಹಿಳೆ. ಈಕೆಯ ಪತಿ ಶೇಖ ಮುದ್ದೀನ್ ನಾಪತ್ತೆಯಾಗಿದ್ದಾನೆ.

ಮೊನಿಷಾ ಹಾಗೂ ಶೇಖ್ ಮುದ್ದೀನ್ ಮೂರ್ನಾಲ್ಕು ವರ್ಷಗಳ ಹಿಂದೆ ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದು ವರ್ತೂರಿನ ಪಂಚಮುಖಿ ದೇವಸ್ಥಾನ ರಸ್ತೆಯಲ್ಲಿ ಚಿಕ್ಕ ಮನೆ ಮಾಡಿಕೊಂಡು ವಾಸವಾಗಿದ್ದರು.

ಪೊಲೀಸ್ ಆ್ಯಪ್ ಅಪ್‍ಡೆಟ್ ಮಾಡಿಕೊಳ್ಳಲು ಸಲಹೆ

ಮೊನಿಷಾ ಗೃಹಿಣಿಯಾಗಿದ್ದು, ಈಕೆಯ ಪತಿ ಶೇಖ್ ಮುದ್ದೀನ್ ಟೈಲ್ಸ್ ಕೆಲಸ ಮಾಡಿಕೊಂಡಿದ್ದಾನೆ. ಕಳೆದೆರಡು ದಿನಗಳಿಂದ ಇವರ ಮನೆ ಬೀಗ ಹಾಕಿತ್ತು. ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಅನುಮಾನಗೊಂಡು ಇಂದು ಬೆಳಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಹೊಡೆದು ನೋಡಿದಾಗ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಕಂಡು ಬಂದಿದೆ. ಈಕೆಯ ಪತಿ ನಾಪತ್ತೆಯಾಗಿದ್ದಾನೆ.

ಪ್ರವಾಹಕ್ಕೆ ಬಂದಾಗ ಬಾರದ ಪ್ರಧಾನಿ ಪ್ರಚಾರಕ್ಕೆ ಮಾತ್ರ ಹಾಜರ್ : ಜೆಡಿಎಸ್ ಟೀಕೆ

ಈ ಬಗ್ಗೆ ವರ್ತೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶೇಖ್ ಮುದ್ದೀನ್‍ಗಾಗಿ ಶೋಧ ಕೈಗೊಂಡಿದ್ದಾರೆ.

killed, wife, Husband, escap,

Articles You Might Like

Share This Article