ಇದೇ ಮೊದಲ ಬಾರಿಗೆ ಹೊರಜಗತ್ತಿಗೆ ಕಾಣಿಸಿಕೊಂಡ ಕಿಮ್ ಪುತ್ರಿ

Social Share

ಸಿಯೋಲï,ನ.19- ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರು ಜಗತ್ತಿಗೆ ಇದೆ ಮೊದಲ ಬಾರಿಗೆ ತನ್ನ ಪುತ್ರಿಯ ದರ್ಶನ ಮಾಡಿಸಿದ್ದಾರೆ. ಖಂಡಾಂತರ ಕ್ಷಿಪಣಿ ಉಡಾವಣಾ ಸ್ಥಳಕ್ಕೆ ಕಿಮ್ ಅವರು ತನ್ನ ಪುತ್ರಿಯೊಂದಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವ ದೃಶ್ಯಾವಳಿಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ.

ತನ್ನ ಪುತ್ರಿಯನ್ನು ಇದುವರೆಗೂ ಜಗತ್ತಿಗೆ ಪರಿಚಯಿಸದ ಕಿಮ್ ಅವರು ಈಗ ತಮ್ಮ ಮಗಳ ಜೊತೆ ಕಾಣಿಸಿಕೊಂಡಿರುವುದು ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಕಿಮ್ ಪುತ್ರಿ ಬಿಳಿ ಪಫಿ ಕೋಟ್‍ನಲ್ಲಿ ತಮ್ಮ ತಂದೆಯೊಂದಿಗೆ ಕೈ ಹಿಡಿದುಕೊಂಡು ಬೃಹತ್ ಕ್ಷಿಪಣಿಯನ್ನು ನೋಡುತ್ತಿರುವ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಉತ್ತರಾಖಾಂಡ್‍ : ಕಂದಕಕ್ಕೆ ಕಾರು ಉರುಳಿ ಬಿದ್ದು 12 ಸಾವು

ಕಿಮ್‍ಗೆ ಮೂವರು ಮಕ್ಕಳು, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದಾನೆ ಎಂದು ಜನ ನಂಬಿದ್ದಾರೆ. ಆದರೆ, ಇದುವರೆಗೂ ಕಿಮ್ ಮಕ್ಕಳು ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

2013 ರಲ್ಲಿ ನಿವೃತ್ತ ಅಮೇರಿಕನ್ ಬಾಸ್ಕೆಟ್‍ಬಾಲ್ ತಾರೆ ಡೆನ್ನಿಸ್ ರಾಡ್‍ಮನ್ ಅವರು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಿಮ್‍ಗೆ ಜು ಏ ಎಂಬ ಮಗು ಮಗಳು ಇದ್ದಾರೆ ಅವರ ಕುಟುಂಬದೊಂದಿಗೆ ನಾನು ಸಮಯ ಕಳೆದಿದ್ದೆ ಎಂದಿದ್ದರು.

ಇನ್ಸ್‌ಪೆಕ್ಟರ್ ಹತ್ಯೆ ಮಾಡಿದ್ದ 30 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಜು ಎಗೆ ಸುಮಾರು 12-13 ವರ್ಷ ವಯಸ್ಸಾಗಿರುತ್ತದೆ ಎಂದು ಅಂದಾಜಿಸಲಾಗಿದೆ, ಅಂದರೆ ಸುಮಾರು ನಾಲ್ಕರಿಂದ ಐದು ವರ್ಷಗಳಲ್ಲಿ ಅವರು ವಿಶ್ವವಿದ್ಯಾನಿಲಯಕ್ಕೆ ಹಾಜರಾಗಲು ಅಥವಾ ಮಿಲಿಟರಿ ಸೇವೆಗೆ ಸೇರಲು ಇಲ್ಲವೆ ಕಿಮ್ ಉತ್ತರಾಧಿಕಾರಿಯಾಗಲು ಆಕೆ ತಯಾರಿ ನಡೆಸುತ್ತಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಿಮ್ ಮಗಳು ಮಾತ್ರವಲ್ಲದೆ ಆತನ ಪತ್ನಿ ರಿ ಸೋಲ್ ಜು ಕೂಡ ಕಾಣಿಸಿಕೊಂಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.

ಈಜಲು ಸಮುದ್ರಕ್ಕಿಳಿಡಿದ್ದ ಇಬ್ಬರು ಮಕ್ಕಳು ನೀರುಪಾಲು

Kim Jong Un, Reveals, Daughter, World, 1st Time, Missile, Test,

Articles You Might Like

Share This Article