ಜಗತ್ತಿನ ಸೂಪರ್ ಪವರ್ ಪರಮಾಣು ರಾಷ್ಟ್ರವಾಗುತ್ತಾ ಉತ್ತರ ಕೊರಿಯಾ..?

Social Share

ಲಂಡನ್,ಡಿ.2- ಜಾಗತಿಕ ರಾಷ್ಟ್ರಗಳ ಒತ್ತಡವನ್ನು ಮೀರಿ ಉತ್ತರ ಕೊರಿಯಾ ಜಗತ್ತಿನ ಪರಮಾಣು ಶಕ್ತಿಯ ಸೂಪರ್ ಪವರ್ ರಾಷ್ಟ್ರವಾಗುತ್ತ ಹೆಜ್ಜೆ ಹಾಕಿದೆ. ಇದು ವಿಶ್ವದ ಹಲವು ರಾಷ್ಟ್ರಗಳನ್ನು ನಿದ್ದೆಗೆಡುವಂತೆ ಮಾಡಿದ್ದು, ಭವಿಷ್ಯದ ಆತಂಕಗಳ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.

ಪ್ರಸ್ತುತ ಅಂದಾಜಿನ ಪ್ರಕಾರ ಉತ್ತರ ಕೊರಿಯಾದ ಬಳಿ 45ರಿಂದ 55 ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬೇಕಾದಷ್ಟು ಸಲಕರಣೆಗಳಿವೆ. ಉತ್ತರ ಕೊರಿಯ ಮೂರು ದಶಕಗಳಿಂದ ಆರಂಭಿಸಿರುವ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಸೂಪರ್ ಪವರ್ ರಾಷ್ಟ್ರವಾಗುತ್ತಿದೆ.

1945ರಲ್ಲಿ ಜಪಾನ್‍ನ ಹಿರೋಶಿಮ ನಗರವನ್ನು ಸರ್ವನಾಶ ಮಾಡಿದ ಅಣುಬಾಂಬ್‍ನ ತೂಕ 15 ಕಿಲೋ ಟನ್‍ಗಳಷ್ಟು. ಉತ್ತರ ಕೊರಿಯಾದ ಬಳಿ ಬಹುಶಃ ಪ್ರಸ್ತುತ 10ರಿಂದ 20 ಕಿಲೋ ಟನ್ ಅಣುಬಾಂಬ್‍ಗಳಿರಬಹುದು ಎಂದು ಊಹಿಸಲಾಗಿದೆ. ಆದರೆ ಇದಕ್ಕಿಂತಲೂ 10 ಪಟ್ಟು ಹೆಚ್ಚು ಸಾಮಥ್ರ್ಯವನ್ನು ಕಿಮ್‍ಜಾನ್ ಹುನ್ ನೇತೃತ್ವದ ಉತ್ತರ ಕೊರಿಯಾ ಹೊಂದಿದೆ ಎಂದು ಹೇಳಲಾಗುತ್ತಿದೆ.

ಘೋಷಣೆ ಮಾಡಿರುವ ಅಭ್ಯರ್ಥಿಗಳ ಬದಲಾವಣೆ ಇಲ್ಲ : ಹೆಚ್‌ಡಿಕೆ

ಮುಂದಿನ ದಶಕದ ವೇಳೆಗೆ ಅಮೆರಿಕ ಮತ್ತು ರಷ್ಯಾ ದೇಶಗಳು ಹೆಚ್ಚು ಪರಮಾಣು ಶಕ್ತಿಯನ್ನು ಹೊಂದಿದೆ ಆದರೆ ಅವರಿಗೆ ಸರಿಸಮಾನವಾಗಿ ಉತ್ತರ ಕೊರಿಂi ಪೈಪೋಟಿ ನೀಡಲು ಮುಂದಾಗಿದೆ. ಇಸ್ರೇಲ್ 90, ಭಾರತ 160, ಪಾಕಿಸ್ತಾನ 165, ಇಂಗ್ಲೆಂಡ್ 225, ಫ್ರಾನ್ಸ್ 300, ಚೀನಾ 350, ಪರಮಾಣು ಸಿಡಿತಲೆಗಳನ್ನು ಹೊಂದುವ ಲೆಕ್ಕಾಚಾರಗಳು ಕೇಳಿಬಂದಿವೆ.

ಕಲ್ಲಿದ್ದಲು ಗಣಿ ಹೂಡಿಕೆಗೆ ನಾಳೆ ಬೆಂಗಳೂರಿನಲ್ಲಿ ಸಮಾವೇಶ

ಕಿಮ್‍ಜಾನ್ ಸರ್ಕಾರ ಜಗತ್ತಿಗೆ ಪದೇ ಪದೇ ಭರವಸೆಗಳನ್ನು ನೀಡುತ್ತಲೇ ಇದೆಯಾದರೂ ಈಡೇರಿಸುತ್ತಿಲ್ಲ. ಅಣ್ವಸ್ತ್ರ ರಹಿತ ಒಪ್ಪಂದದ ವಿಷಯದಲ್ಲಿ ಅಮೆರಿಕದ ಎಲ್ಲ ಅಧ್ಯಕ್ಷರನ್ನು ಮೂರ್ಖರನ್ನಾಗಿಸಿಯೇ ಬರಲಾಗುತ್ತಿದೆ.

ಇತ್ತೀಚೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಮತ್ತೊಂದು ಪ್ರಯತ್ನ ನಡೆಸಿ ಕಿಮ್‍ಜಾನ್‍ಗೆ ಅಣ್ವಸ್ತ್ರಗಳನ್ನು ತ್ಯಜಿಸುವಂತೆ ಸಲಹೆ ನೀಡಿದರು. ಇದಕ್ಕೆ ಬದಲಾಗಿ ವಿಶ್ವದ ಹಲವು ರಾಷ್ಟ್ರಗಳು ಉತ್ತರ ಕೊರಿಯಾ ಮೇಲೆ ಹೇರಿರುವ 9 ಅಂಕದ ನಿರ್ಬಂಧಗಳನ್ನು ತೆರವು ಮಾಡುವ ಭರವಸೆ ನೀಡಲಾಗಿತ್ತು.

ಅತ್ತಿಗೆ ಮೇಲಿನ ವ್ಯಾಮೋಹಕ್ಕೆ ಷಡ್ಕನನ್ನು ಕೊಂದು ಹೂತು ಹಾಕಿದ ಆರೋಪಿ

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಕಿಮ್ ಕೊನೆಗೆ ಯಾವುದೇ ಭರವಸೆ ಈಡೇರಿಸದೆ ಅಮೆರಿಕ ಅಧ್ಯಕ್ಷರನ್ನು ಮತ್ತೊಮ್ಮೆ ಪೇಚಿಗೆ ಸಿಲುಕಿಸಿದ್ದರು.

Kim Jong Un, North Korea, nuclear, superpower,

Articles You Might Like

Share This Article