Saturday, September 23, 2023
Homeಇದೀಗ ಬಂದ ಸುದ್ದಿಮುಸ್ಲಿಂ ಲೀಗ್ ಜಾತ್ಯತೀತ ಎಂದ ರಾಹುಲ್‌ಗೆ ತಿರುಗೇಟು ಕೊಟ್ಟ ರಿಜಿಜು

ಮುಸ್ಲಿಂ ಲೀಗ್ ಜಾತ್ಯತೀತ ಎಂದ ರಾಹುಲ್‌ಗೆ ತಿರುಗೇಟು ಕೊಟ್ಟ ರಿಜಿಜು

- Advertisement -

ನವದೆಹಲಿ,ಜೂ.2- ಇಂಡಿಯನ್ ಮುಸ್ಲೀಂ ಲೀಗ್ ಪಕ್ಷ ಸಂಪೂರ್ಣ ಜಾತ್ಯತೀತ ಪಕ್ಷ ಎಂಬ ರಾಹುಲ್‍ಗಾಂಧಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ ಜವಾಬ್ದಾರರಾಗಿರುವ ಮೊಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್ ಹೇಗೆ ಜಾತ್ಯತೀತ ಪಕ್ಷವಾಗಿದೆ ಎಂದು ಪ್ರಶ್ನಿಸಿದ್ದಾರೆ.

ಜಿನ್ನಾರ ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷವೇ? ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ ಕಾರಣವಾದ ಪಕ್ಷ ಜಾತ್ಯತೀತ ಪಕ್ಷವೇ? ಭಾರತದಲ್ಲಿ ಇನ್ನೂ ಕೆಲವರು ಮುಸ್ಲಿಂ ಲೀಗ್ ಅನ್ನು ಬೆಂಬಲಿಸುವ ವ್ಯಕ್ತಿಯನ್ನು ಸೆಕ್ಯುಲರ್ ಎಂದು ಪರಿಗಣಿಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದು ರಿಜಿಜು ಅವರು ಟ್ವಿಟ್ ಮಾಡಿದ್ದಾರೆ.

- Advertisement -

ಕಾಂಗ್ರೆಸ್‌ಗೆ ಸಚಿನ್ ಪೈಲಟ್ ಗುಡ್ ಬೈ?

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‍ನ ಮಿತ್ರಪಕ್ಷವಾಗಿದೆ. ಸಂಸತ್ತಿನಿಂದ ಅನರ್ಹಗೊಳ್ಳುವ ಮೊದಲು ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಯನಾಡ್ ಅನ್ನು ಪ್ರತಿನಿಧಿಸಿದ್ದರು.

ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಪ್ರೆಸ್ ಕ್ಲಬ್‍ನಲ್ಲಿ ಸಂವಾದದ ವೇಳೆ ಮುಸ್ಲಿಂ ಲೀಗ್‍ನೊಂದಿಗೆ ಕಾಂಗ್ರೆಸ್ ಮೈತ್ರಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯತೀತ ಪಕ್ಷವಾಗಿದೆ, ಮುಸ್ಲಿಂ ಲೀಗ್‍ನಲ್ಲಿ ಜಾತ್ಯತೀತವಲ್ಲದ ಯಾವುದೂ ಇಲ್ಲ ಎಂದಿದ್ದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟಬುತ್ತಿ: ರಾಹುಲ್

ಮುಸ್ಲಿಂ ಲೀಗ್ ಅನ್ನು ಜಾತ್ಯತೀತ ಪಕ್ಷ ಎಂದು ಕರೆದಿರುವ ವಯನಾಡಿನಲ್ಲಿ ಸ್ವೀಕಾರಾರ್ಹವಾಗಿ ಉಳಿಯಲು ಕಾಂಗ್ರೆಸ್ ನಾಯಕರ ಬಲವಂತದ ಹೇಳಿಕೆಗೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬಿಜೆಪಿ ಟೀಕಿಸಿದೆ.

ರಾಹುಲ್ ಗಾಂಧಿಯವರ ಪ್ರಕಾರ ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ ಕಾರಣವಾದ ಜಿನ್ನಾರ ಮುಸ್ಲಿಂ ಲೀಗ್ ಒಂದು ‘ಜಾತ್ಯತೀತ’ ಪಕ್ಷವಾಗಿದೆ. ರಾಹುಲ್ ಗಾಂಧಿ ಅವರು ಈ ವಿಚಾರದಲ್ಲಿ ಅಸಭ್ಯವಾಗಿ ಮತ್ತು ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

KirenRijiju, #RahulGandhi, #MuslimLeague, #Secular, #Remark,

- Advertisement -
RELATED ARTICLES
- Advertisment -

Most Popular