ಕಿಸಾನ್ ಸಮ್ಮಾನ್ ಹಣ ಡ್ರಾ ಮಾಡಿಕೊಳ್ಳಲು ಬ್ಯಾಂಕ್ ಮುಂದೆ ಜನಸಾಗರ

Spread the love

ಯಾದಗಿರಿಃ ಪ್ರಧಾನಮಂತ್ರಿ ಮೋದಿಯವರು ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯ ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಜಿಲ್ಲೆಯ ಶಹಾಪುರ ತಾಲೂಕಿನ‌ ರೈತರು‌ ನಗರದ ಡಿಸಿಸಿ ಬ್ಯಾಂಕ್ ಮುಂದೆ ಕೊರೊನಾ ನಿಯಮ‌ ಉಲ್ಲಂಘಿಸಿ ಸೇರಿ ಬಿಟ್ಟಿದ್ದಾರೆ.

ಮೇ ಪೂರ್ತಿ ಮನೆಯಲ್ಲೆ ಇರಿ, ಲಾಕ್ ಡೌನ್ ವಿಸ್ತರಣೆ ಸಾಧ್ಯತೆ
ಮೇ.18‌ ರಿಂದ 23 ರವರೆಗೆ ಯಾದಗಿರಿ‌ ಜೆಲ್ಲಾದ್ಯಂತ ಸ್ವಯಂಘೋಷಿತ ಬಂದ್ ಗೆ ಉಸ್ತುವಾರಿ ಸಚಿವ ಆರ್.ಶಂಕರ್ ಮನವಿ
ಬ್ಯಾಂಕ್‌ ಸಿಬ್ಬಂದಿ ಹೇಳಿದರೂ ಕೇಳದ ಜನ, ಹಣ ಡ್ರಾಕ್ಕಾಗಿ‌ ಮುಗಿ ಬಿದ್ದಿದ್ದಾರೆ. ಹೀಗಾಗಿ ಬ್ಯಾಂಕ್ ನಲ್ಲಿ‌ ಕೆಲಸ‌ ಮಾಡುವ ಸಿಬ್ಬಂದಿಯಲ್ಲಿ ಕೊರೊನಾಂತಕ ತಂದಿದೆ.

ಅನಿವಾರ್ಯವಾಗಿ ಬ್ಯಾಂಕ್‌ನ‌ ಗೇಟ್ ಹಾಕಿ ಜನರನ್ನು‌ ಒಬ್ಬೊಬ್ಬರನ್ನಾಗಿ‌ ಒಳಗಡೆ ಬಿಡುವ ಕ್ರಮ ತೆಗೆದುಕೊಂಡಿದ್ದು, ರೈತರು ಕೆಳುತ್ತಿಲ್ಲ, ಸಮರ್ಪಕವಾಗಿ ‌ಮಾಸ್ಕ್ ಇಲ್ಲ. ಸಾಮಾಜಿಕ ಅಂತರವಂತು‌ ಇಲ್ಲವೇ ಇಲ್ಲ. ಹಣಕ್ಕಾಗಿ ನೂಕುನುಗ್ಗಲು ನಡೆಸಿರುವ ರೈತರಲ್ಲಿ‌ ಕೊರೊನಾ ಹರಡುವ ಭಯವೆ ಇಲ್ಲದಂತಾಗಿದೆ ಎಂದು ಸಿಬ್ಬಂದಿ‌‌ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯ, ದೇಶ ಕೊರೊನಾ‌ ರಭಸಕ್ಕೆ ತತ್ತರಿಸಿದ್ದರೂ ಗ್ರಾಮೀಣ ಭಾಗದಲ್ಲೂ ಸಾವು ನೋವುಂಡರು ರೈತರು ಕೊರೊನಾ ಬಗ್ಗೆ ಎಚ್ಚರಿಕೆವಹಿಸುತ್ತಿಲ್ಲ. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ರೈತರು‌ ಬ್ಯಾಂಕ್ ಮುಂದೆ‌ ಗುಂಪಾಗಿ ಜಮಾವಣೆಗೊಂಡಿದ್ದಾರೆ.

ಇದು ಕೊರೊನಾ ಸ್ಪೋಟಕ್ಕೆ ಬಹುದೊಡ್ಡ ಅವಕಾಶ‌ ಎನ್ನಬಹುದು. ಕೂಡಲೇ ಪೋಲಿಸರು ಇತ್ತ ಗಮನ ಹರಿಸಿ ರೈತರನ್ನು ಚದುರಿಸಿ ನಿಯಮ‌ ಪಾಲನೆಗೆ ಕ್ರಮಕೈಗೊಳ್ಳಬೇಕೆಂದು ಜನರು ಮನವಿ ಮಾಡಿದ್ದಾರೆ.

ಕಿಸಾನ್ ಸಮ್ಮಾನ ಯೋಜನೆಯಡಿ ರೈತರ ಖಾತೆಗೆ ಹಣ ಜಮಾವಣೆಗೊಂಡಿದೆ. ಆ ಹಣ ತೆಗೆದುಕೊಳ್ಳಲು ರೈತರು‌ ನಮ್ಮ ಬ್ಯಾಂಕ್‌ ಮುಂದೆ ಜಮಾವಣೆಗೊಂಡಿದ್ದಾರೆ. ಸಿಬ್ಬಂದಿಯಿಂದ ನಿಯಂತ್ರಿಸಲು ಆಗುತ್ತಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇನೆ.

ಇಷ್ಟರಲ್ಲಿಯೇ ಬರಬಹುದು. ಕೊರೊನಾ‌ ನಿಯಮ ಪಾಲನೆ ಅಗತ್ಯ, ನಮ್ಮ ಸಿಬ್ಬಂದಿ ರೈತ ‌ಜನಸ್ತೋಮ ನೋಡಿ ಆತಂಕಗೊಂಡಿದ್ದಾರೆ. ಕೊರೊನಾ‌ ನಿಯಮ ಪಾಲನೆಯಿಂದ ಎಲ್ಲರೂ ಸೇಫ್ ಆಗಿರಬಹುದು.ಎಲ್ಲಾ ಖಾತೆದಾರರಿಗೆ ಹಣ ನೀಡಲಾಗುವದು. ಅಂತರ ಕಾಪಾಡಿ, ಮಾಸ್ಕ್ ಧರಿಸಿ ಎಂದರೂ ಜನ ಕೇಳುತ್ತಿಲ್ಲ.

ನಿಂಗಣ್ಣಗೌಡ. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಹಾಪುರ.

Sri Raghav

Admin