ಕಾಂಗ್ರೆಸ್‍ನಿಂದ ಕಿಶೋರ್ ಉಪಾಧ್ಯಾಯ ಉಚ್ಚಾಟನೆ

Social Share

ಉತ್ತರಾಖಂಡ.ಜ.27-ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‍ನ ರಾಜ್ಯ ಘಟಕದ ಮಾಜಿ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ನಿಮ್ಮನ್ನು ಆರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಉತ್ತರಾಖಂಡ ಪ್ರದೇಶ ಕಾಂಗ್ರೇಸ್ ತಿಳಿಸಿದೆ.
ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಬುಧವಾರ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಉಪಾಧ್ಯಾಯ ಹೆಸರು ಇರಲಿಲ್ಲ ನಂತರ ಕಾಂಗ್ರೆಸ್‍ನ ಲ್ಲಿ ಉಪಾಧ್ಯಾಯ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ಹಬ್ಬಿದ್ದವು.
ಏತನ್ಮಧ್ಯೆ ಮಾಜಿ ಮುಖ್ಯಮಂತ್ರಿ ಹರೀಶ್ ಸಿಂಗ್ ರಾವತ್ ಅವರನ್ನು ಲಾಲ್ಕುವಾದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಹರೀಶ್ ಸಿಂಗ್ ರಾವತ್ ಮತ್ತು ಇತರ ನಾಲ್ವರು ನಾಯಕರ ಸ್ಥಾನವನ್ನು ಬದಲಾಯಿಸಿದೆ.
ಈಗ ಕಿಶೋರ್ ಉಪಾಧ್ಯಾಯ ಅವರು ಕಾಂಗ್ರೇಸ್‍ಗೆ ಸಡ್ಡು ಹೊಡೆದು ಭಾರತೀಯ ಜನತಾ ಪಕ್ಷದ ಸೇರಿ ತೆಹ್ರಿ ವಿಧಾನಸಭಾ ಕ್ಷೇತ್ರದಿಂದ ಸ್ರ್ಪಧಿಸಬಹುದು ಎಂದು ಹೇಳಲಾಗುತ್ತಿದೆ.

Articles You Might Like

Share This Article