ಜೋಹಾನ್ಸ್ಬರ್ಗ್, ಜ.3- ಬೆನ್ನುನೋವಿನಿಂದ ಬಳಲುತ್ತಿರುವ ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ನಿರ್ಣಾಯಕ ಟೆಸ್ಟ್ನಿಂದ ಹೊರಗುಳಿದಿದ್ದಾರೆ.
3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ವಿರಾಟ್ ಪಡೆ ಗೆದ್ದುಕೊಂಡು 1-0 ಯಿಂದ ಸರಣಿ ಮುನ್ನಡೆ ಸಾಧಿಸಿದ್ದು ಜೋಹಾನ್ಸ್ಬರ್ಗ್ ಟೆಸ್ಟ್ ಗೆಲ್ಲುವ ಮೂಲಕ ಟೆಸ್ಟ್ ವಶಪಡಿಸಿಕೊಳ್ಳುವತ್ತ ಭಾರತ ಚಿತ್ತ ಹರಿಸಿತ್ತಾದರೂ ಕೊಹ್ಲಿ ಹೊರಗುಳಿದಿದ್ದಾರೆ.
Toss Update – KL Rahul has won the toss and elects to bat first in the 2nd Test.
Captain Virat Kohli misses out with an upper back spasm.#SAvIND pic.twitter.com/2YarVIea4H— BCCI (@BCCI) January 3, 2022
ವಿರಾಟ್ ಕೊಹ್ಲಿ ಹೊರಗುಳಿದಿ ರುವುದರಿಂದ ಉಪನಾಯಕ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಅವರು ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಅಲೌಂಡರ್ ಹನುಮವಿಹಾರಿ ಅವರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ಕೆ.ಎಲ್.ರಾಹುಲ್ ಅವರು ಬ್ಯಾಟಿಂಗ್ ಮಾಡುವ ನಿರ್ಣಯ ಕೈಗೊಂಡಿದ್ದರೆ, ಕನ್ನಡಿಗರಾದ ಮಯಾಂಕ್ ಹಾಗೂ ರಾಹುಲ್ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ್ದಾರೆ.