Saturday, September 23, 2023
Homeಇದೀಗ ಬಂದ ಸುದ್ದಿಕೆ.ಎಲ್.ರಾಹುಲ್ ಏಷ್ಯಾಕಪ್ ಟೂರ್ನಿಗೆ ಲಭ್ಯರಾಗುವುದು ಅನುಮಾನ : ಕೈಫ್

ಕೆ.ಎಲ್.ರಾಹುಲ್ ಏಷ್ಯಾಕಪ್ ಟೂರ್ನಿಗೆ ಲಭ್ಯರಾಗುವುದು ಅನುಮಾನ : ಕೈಫ್

- Advertisement -

ನವದೆಹಲಿ, ಆ. 30- ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ಅವರು ಏಷ್ಯಾಕಪ್ ಟೂರ್ನಿಯ ಆರಂಭಿಕ 2 ಪಂದ್ಯಗಳಿಂದ ಹೊರಗುಳಿದಿದ್ದು ಈ ಕುರಿತು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಪ್ರಸ್ತಾಪಿಸಿದ್ದಾರೆ. ಐಪಿಎಲ್ ಟೂರ್ನಿಯ ವೇಳೆ ಫೀಲ್ಡಿಂಗ್ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಕೆ.ಎಲ್.ರಾಹುಲ್ ಅವರು 2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಸೇರಿದಂತೆ ಹಲವು ಮಹತ್ತರ ಟೂರ್ನಿಗಳಿಂದ ಹೊರಗುಳಿದಿದ್ದರು.

ಬೆಂಗಳೂರಿನ ಎನ್‍ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ತರಬೇತಿ ನಡೆಸಿದ್ದ ಕೆ.ಎಲ್.ರಾಹುಲ್ ಅವರು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದರೂ ಈ ಹಿನ್ನೆಲೆಯಲ್ಲಿ ಅವರನ್ನು ಏಷ್ಯಾಕಪ್ ಟೂರ್ನಿಗೆ ಕೆ.ಎಲ್.ರಾಹುಲ್ ಅವರನ್ನು ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಹೊಸದಾಗಿ ಕಾಣಿಸಿಕೊಂಡಿರುವ ಗಾಯದ ಸಮಸ್ಯೆಯಿಂದ ಅವರು ಏಷ್ಯಾಕಪ್ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಿಂದ ದೂರ ಉಳಿದಿದ್ದಾರೆ ಎಂದು ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

- Advertisement -

ವಿಕ್ರಮ್ ಲ್ಯಾಂಡರ್ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್

ಕೆ.ಎಲ್.ರಾಹುಲ್ ಅವರ ಗಾಯದ ಸಮಸ್ಯೆಯೂ ಅವರು ಏಷ್ಯಾಕಪ್ ಟೂರ್ನಿಯಿಂದ ಆರಂಭಿಕ 2 ಪಂದ್ಯಗಳಿಂದ ಮಾತ್ರವಲ್ಲ ಇಡೀ ಟೂರ್ನಿಗೆ ಅಲಭ್ಯರಾಗಲಿದ್ದು, ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಏಕದಿನ ಸರಣಿ ಮೂಲಕ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಮೊಹಮ್ಮದ್ ಕೇಫ್ ಹೇಳಿದ್ದಾರೆ.

ಅವರಿಗೆ ಗೇರ್ ಬದಲಾಯಿಸುವುದು ಹೇಗೆ ಎಂಬುದು ತುಂಬಾ ಚೆನ್ನಾಗಿ ತಿಳಿದಿದೆ, ದೊಡ್ಡ ಹೊಡೆತಗಳನ್ನು ಆಡಲು ಸಾಧ್ಯವಾಗುತ್ತದೆ ಮತ್ತು ಇನಿಂಗ್ಸ್ ಅನ್ನು ಹೇಗೆ ಸ್ಥಿರಗೊಳಿಸುವುದು ಎಂದು ತಿಳಿದಿದೆ. ನೀವು ಇಶಾನ್ ಕಿಶನ್ ಆಡಿದರೂ ನಿಮಗೆ ಬದಲಿ ಆಟಗಾರ ಸಿಗುವುದಿಲ್ಲ. ವಿಕೆಟ್ ಕೀಪಿಂಗ್ ಜೊತೆಗೆ ರಾಹುಲ್ ಫಿನಿಶಿಂಗ್ ಟಚ್ ಕೂಡ ನೀಡುತ್ತಾರೆ ಎಂದು ಕೈಫ್ ಹೇಳಿದರು.

#KLRahul, #miss, #firsttwo, #AsiaCup, #matches,

- Advertisement -
RELATED ARTICLES
- Advertisment -

Most Popular