ರಾಜಣ್ಣ ಅಕ್ರಮ ಬಿಚ್ಚಿಡುವೆ : ಸಚಿವ ಮಾಧುಸ್ವಾಮಿ ಹೊಸ ಬಾಂಬ್

Social Share

ತುಮಕೂರು,ಆ.23- ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಅಕ್ರಮಗಳನ್ನು ದಾಖಲೆ ಸಮೇತ ಬಿಚ್ಚಿಡುವುದಾಗಿ ಸಚಿವ ಮಾಧುಸ್ವಾಮಿ ಬಾಂಬ್ ಸಿಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇತ್ತಿಚೆಗೆ ಮಾಧುಸ್ವಾಮಿ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಕೆಎನ್‍ಆರ್ ಕಾಂಗ್ರೆಸ್‍ಗೆ ಮಾಧುಸ್ವಾಮಿ ಬರುವುದಾಗಿ ಹೇಳಿದ್ದರು. ತಿಪಟೂರಿನಿಂದ ಸ್ರ್ಪಧಿಸಲು ಟಿಕೆಟ್ ಕೊಡಿಸುವಂತೆ ಕೇಳಿದ್ದರು ಎನ್ನುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು.

ಇದೀಗ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಇನ್ನೆರಡು ದಿನದಲ್ಲಿ ಅಕ್ರಮ ಬಯಲಿಗೆ ತರುವುದಾಗಿ ಹೇಳಿದ್ದು, ರಾಜಣ್ಣ ಅವರ ಅಕ್ರಮಗಳನ್ನು ಶೀಘ್ರವೇ ಬಯಲು ಮಾಡುವೆ. ಅವರ ಬೆದರಿಕೆಗೆ ಹೆದರುವುದಿಲ್ಲ ಎಂದಿದ್ದಾರೆ.

ಡಿಸಿಸಿ ಬ್ಯಾಂಕ್‍ನಲ್ಲಿ ಅಕ್ರಮ ನಡೆದಿದ್ದು, ದಾಖಲೆ ಬಿಡುಗಡೆ ಮಾಡುತ್ತೇನೆ. ರಾಜಣ್ಣ ಪ್ರತಿನಿಧಿಸುತ್ತಿದ್ದ ಮಧುಗಿರಿ ತಾಲ್ಲೂಕಿನಲ್ಲಿ 18 ಸಾವಿರ ಕುಟುಂಬಗಳಿಗೆ ಸಾಲ ನೀಡಿದ್ದಾರೆ. ಜಿಲ್ಲಾಯಲ್ಲಿ ಬ್ಯಾಂಕ್ ನೀಡಿರುವ ಸಾಲದಲ್ಲಿ ಹೆಚ್ಚಿನ ಪಾಲು ಮಧುಗಿರಿ ತಾಲ್ಲೂಕಿಗೆ ಸಿಕ್ಕಿದೆ. ಇತರೆ ತಾಲ್ಲೂಕುಗಳನ್ನು ಕಡೆಗಣಿಸಿದ್ದಾರೆ. ಅಗತ್ಯ ದಾಖಲೆ ಪಡೆದುಕೊಳ್ಳದೆ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಿಸಲಾಗಿದೆ ಎಂದು ದೂರಿದ್ದಾರೆ.

ಮಧುಗಿರಿ ತಾಲ್ಲೂಕಿನಲ್ಲಿ ಸರಾಸರಿ ಪ್ರತಿ ವ್ಯಕ್ತಿಗೆ 80 ಸಾವಿರ ಸಾಲ ನೀಡಿದ್ದರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 36 ಸಾವಿರ ಸಾಲ ನೀಡಲಾಗಿದೆ. ಇದೆಲ್ಲವನ್ನೂ ತನಿಖೆಗೆ ಒಳಪಡಿಸಬೇಕಿದೆ ಎಂದು ತಿಳಿಸಿದರು.

ಕೃಷಿ ಪತ್ತಿನ ಸಹಕಾರ ಸಂಘಗಳ ಹಣದಲ್ಲಿ ಡಿಸಿಸಿ ಬ್ಯಾಂಕ್ ರೈತರಿಗೆ ಸಾಲ ನೀಡುತ್ತಿದೆ. ಸಹಕಾರ ಸಂಘಗಳ ಹೆಚ್ಚುವರಿ ಷೇರು ಮೊತ್ತವನ್ನು ಡಿಸಿಸಿ ಬ್ಯಾಂಕ್‍ನಲ್ಲಿ ಠೇವಣಿ ಮಾಡಲಾಗುತ್ತದೆ. ಈ ಹಣದಿಂದ ಸಾಲ ನೀಡಿ ಬಡ್ಡಿ ಪಡೆದುಕೊಳ್ಳಲಾಗುತ್ತದೆ.

ಈ ಹಣಕ್ಕೆ ಸಹಕಾರ ಸಂಘಗಳಿಗೆ ಯಾವುದೇ ಹಣ ನೀಡುವುದಿಲ್ಲ. ಸರ್ಕಾರದಿಂದ ಸಿಗುವ ಬಡ್ಡಿ ಮನ್ನಾ ಹಾಗೂ ಇತರೆ ಅನುಕೂಲಗಳನ್ನು ಡಿಸಿಸಿ ಬ್ಯಾಂಕ್ ಪಡೆದುಕೊಳ್ಳುತ್ತಿದೆ. ಇದರಿಂದ ಸಹಕಾರ ಸಂಘಗಳಿಗೆ ಆದಾಯ ಇಲ್ಲದೆ ನಷ್ಟಕ್ಕೆ ಸಿಲುಕುತ್ತವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‍ನಲ್ಲಿ ಇಟ್ಟಿರುವ ಠೇವಣಿ ವಾಪಸ್ ಪಡೆದರೆ ಸಹಕಾರ ಸಂಘಗಳು ತಮ್ಮ ಸ್ವಸಾಮಥ್ರ್ಯದ ಮೇಲೆ ಕೃಷಿ ಸಾಲ ನೀಡಬಹುದಾಗಿದೆ. ಇನ್ನು ಮುಂದೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಲ ತಂದು, ನೇರವಾಗಿ ರೈತರಿಗೆ ವಿತರಿಸುವ ಅಧಿಕಾರವನ್ನು ಸಹಕಾರ ಸಂಘಗಳಿಗೆ ನೀಡುವಂತೆ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರಿಗೆ ಸಲಹೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

Articles You Might Like

Share This Article