ಚೀನಾದಲ್ಲಿ ಚಾಕು ದಾಳಿ: 8 ಶಾಲಾ ಮಕ್ಕಳ ಬಲಿ

Spread the love

ಬೀಜಿಂಗ್, ಸೆ.3-ಶಾಲಾ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಹಂತಕರು ನಡೆಸುತ್ತಿರುವ ಚಾಕು ದಾಳಿಯಿಂದ ಚೀನಾ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ.
ಜೈಲಿನಿಂದ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಪ್ರಾಥಮಿಕ ಶಾಲೆಯ ಮಕ್ಕಳ ಗುಂಪಿನ ಮೇಲೆ ದಾಳಿ ನಡೆಸಿ 8 ಚಿಣ್ಣರನ್ನು ಕೊಂದಿರುವ ಭೀಕರ ಘಟನೆ ಚೀನಾದ ಹೆಬ್ಯು ಪ್ರಾಂತ್ಯದಲ್ಲಿ ನಡೆದಿದೆ.

ಎಂಷಿ ಕೌಂಟಿಯಾ ಬಯೋಂಗ್‍ಪಿಂಗ್ ಪಟ್ಟಣದ ಚಯಾಂಗ್ ಪಾಂಗ್ ಪ್ರೈಮರಿ ಶಾಲೆಯ ಆವರಣದಲ್ಲಿ ನಡೆದ ಈ ಘಟನೆಯಿಂದ ಪೋಷಕರು, ಮಕ್ಕಳು ಮತ್ತು ಶಿಕ್ಷಕ ಸಮುದಾಯ ಬೆಚ್ಚಿ ಬಿದ್ದಿದೆ.

ಈ ಸಂಬಂಧ ಸ್ಥಳೀಯ ನಿವಾಸಿ 41 ವರ್ಷದ ವ್ಯಕ್ತಿಯನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ. 8 ವರ್ಷಗಳ ಹಿಂದೆ ಈತ ತನ್ನ ಪ್ರೇಯಸಿಯ ಕಣ್ಣುಗಳನ್ನು ಕಿತ್ತು ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಳೆದ ವಾರವಷ್ಟೇ ಈತ ಕಾರಾಗೃಹದಿಂದ ಬಿಡುಗಡೆಯಾಗಿದ್ದ.

ಕೆಲವು ತಿಂಗಳ ಹಿಂದಷ್ಟೇ ಚೀನಾದ ಹುನಯ್ ಪ್ರಾಂತ್ಯದಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ದಾಳಿ ನಡೆಸಿ ನಾಲ್ವರು ಶಾಲಾ ಮಕ್ಕಳನ್ನು ನಿರ್ದಯವಾಗಿ ಕೊಂದಿದ್ದ.