ಕೊಡಗಿನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ

Social Share

ಬೆಂಗಳೂರು,ನ.8- ಕೊರೊನಾ, ಓಮಿಕ್ರಾನ್ ಸೋಂಕಿನಿಂದ ತತ್ತರಿಸಿದ್ದ ರಾಜ್ಯದ ಆರೋಗ್ಯ ಇಲಾಖೆಗೆ ಈಗ ಆಫ್ರಿಕನ್ ಹಂದಿ ಜ್ವರದ ಆತಂಕ ಎದುರಾಗಿದೆ. ಕೊಡಗಿನಲ್ಲಿ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡು ಜನರು ಆತಂಕದಲ್ಲಿದ್ದಾರೆ.

ಮೊದಲೇ ಕೊರೊನಾದಿಂದ ಎರಡು ವರ್ಷ ತತ್ತರಿಸಿದ್ದ ರಾಜ್ಯದ ಜನತೆಗೆ ಇದೀಗ ಆಫ್ರಿಕನ್ ಹಂದಿ ಜ್ವರ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಜ್ವರ ಮನುಷ್ಯನಿಗೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮಾನ್ಯ ಹಂದಿ ಜ್ವರಕ್ಕಿಂತಲೂ ಇದರ ತೀವ್ರತೆ ಹೆಚ್ಚಾಗಿದ್ದು, ಹಂದಿಯಿಂದ ಮನುಷ್ಯರಿಗೂ ಬರುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೇಲ್ನೋಟಕ್ಕೆ ಜ್ವರದ ಲಕ್ಷಣಗಳಂತೆ ಕಾಣಿಸುತ್ತದೆ. ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ.
ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿಯಂತೆ ಎಲ್ಲಾ ಕಡೆ ಕಟ್ಟುನಿಟ್ಟಿನ ನಿಗಾವಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ.ರಂದೀಪ್ ತಿಳಿಸಿದ್ದಾರೆ.

ಮೊಬೈಲ್‍ನಲ್ಲೇ ಕಾಲ ಕಳೆಯುತ್ತಿದ್ದ ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

ಹಂದಿ ಸಾಕಾಣಿಕೆ ಕೇಂದ್ರಗಳ ಬಳಿ ಕಟ್ಟೆಚ್ಚರ ವಹಿಸಲಾಗಿದ್ದು, ರೋಗ ಕಂಡು ಬಂದ ಒಂದು ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ಪ್ರದೇಶ ಎಂದು, 10 ಕಿ.ಮೀ. ವ್ಯಾಪ್ತಿಯನ್ನು ಜಾಗೃತ ವಲಯ ಎಂದು ಘೋಷಣೆ ಮಾಡಲಾಗುವುದು. ಈಗ ಕೊಡಗು, ಮಂಗಳೂರಿನಲ್ಲಿ ರೋಗ ಕಂಡು ಬಂದಿರುವುದರಿಂದ ಬೇರೆ ಕಡೆ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದರು.

ನ.15ರೊಳಗೆ ರಸ್ತೆ ಗುಂಡಿ ಮುಚ್ಚಲು ಖಡಕ್ ಆದೇಶ

ಲಕ್ಷಣಗಳು: ಜ್ವರ, ನೆಗಡಿ, ವೈರಲ್ ಫೀವರ್‍ನಂತೆ ಜ್ವರ ಇರಲಿದೆ. ಮೈ-ಕೈ ನೋವು, ಆಯಾಸ ಹೆಚ್ಚಾಗುವುದು.
ಇಂತಹ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ವಹಿಸದೆ ಕೂಡಲೇ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

Articles You Might Like

Share This Article