ಕಳಂಕಿತ ಕೋಡಿಹಳ್ಳಿ ಹೊರ ಹಾಕಿ : ತೀವ್ರ ವಾಗ್ವಾದ

Social Share

ಬೆಂಗಳೂರು, ಅ.15- ಭ್ರಷ್ಟಾಚಾರದ ಆರೋಪ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಭೆಗೆ ಆಹ್ವಾನಿಸಿದ್ದಕ್ಕೆ ರೈತ ಮುಖಂಡರು ಸಚಿವರ ಎದುರೇ ಸಭೆಯಿಂದ ಹೊರ ಹಾಕಲು ತೀವ್ರ ವಾಗ್ವಾದ ನಡೆಯಿತು.

ಕಬ್ಬು ಬೆಲೆ ನಿಗದಿ ಹಾಗೂ ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಲು ವಿಧಾನಸೌಧದಲ್ಲಿ ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ರೈತ ಮುಖಂಡರ ಜೊತೆ ಸಭೆ ಕರೆದಿದ್ದರು.

ಸಭೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೆ ಅವರಾಗಿಯೇ ಸಭೆಯಲ್ಲಿ ಆಸೀನರಾಗಿದ್ದು ಕೆಲವು ರೈತರ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ಪಾಂಡವಪುರ ರೈತ ಸಂಘಟನೆಯ ಮುಖಂಡ ವಿಜಯ್ಕುಮಾರ್ ಅವರು ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಕೆಲವು ಗಂಭೀರ ಆರೋಪಗಳಿವೆ. ಅವರನ್ನು ಸಭೆಗೆ ಆಹ್ವಾನಿಸಿದ್ದು ಸರಿಯಲ್ಲ ಎಂದು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಕೆಲ ರೈತ ಮುಖಂಡರು ಕೂಡ ದನಿಗೂಡಿಸಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಭೆಯಿಂದ ಕಳುಹಿಸಬೇಕೆಂದು ಪಟ್ಟು ಹಿಡಿದರು. ಆಗ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಆರೋಪ- ಪ್ರತ್ಯಾರೋಪ ನಡೆಯಿತು.

ಕೋಡಿಹಳ್ಳಿ ಚಂದ್ರಶೇಖರ್ ಹೋರಾಟ ನಡೆಸಲ ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಅಂಥವರು ಸಭೆಗೆ ಬರುವುದು ಶೋಭೆಯಲ್ಲ. ಅಲ್ಲದೆ ತಮ್ಮ ಜೊತೆ 4 ಜನರನ್ನು ಕರೆತಂದಿದ್ದಾರೆ. ದಯವಿಟ್ಟು ಅವರನ್ನು ಹೊರಗೆ ಕಳುಹಿಸಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸಿಡಿಮಿಡಿಗೊಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು, ನನ್ನ ಮೇಲಿನ ಆರೋಪಗಳಿದ್ದರೆ ತನಿಖೆಯಾಗಲಿ.

ಅದು ಸಾಬೀತಾದರೆ ಶಿಕ್ಷೆಗೆ ಒಳಪಡುತ್ತೇನೆ. ಇಲ್ಲಿಯ ವಿಷಯಾಂತರವಾಗುವುದು ಬೇಡ, ಮೊದಲು ಕಠಿಣ ಸಮಸ್ಯೆಗಳು ಇತ್ಯರ್ಥವಾಗಲಿದೆ ಎಂದು ಸಲಹೆ ಮಾಡಿದರು. ಆಗಲೂ ಕೂಡ ಆರೋಪ- ಪ್ರತ್ಯಾರೋಪಗಳು ನಡೆದು ಗೊಂದಲದ ವಾತಾವರಣ ನಡೆಯಿತು. ಬಳಿಕ ಸಚಿವರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.

Articles You Might Like

Share This Article