ಕೋಡಿಹಳ್ಳಿ-ಕುರುಬೂರು ಬೆಂಬಲಿಗರ ನಡುವೆ ಜಟಾಪಟಿ

Spread the love

ಬೆಂಗಳೂರು,ಮೇ28-ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಬೆಂಬಲಿಗರು ಕೈ ಕೈ ಮಿಲಾಯಿಸಿಕೊಂಡ ಘಟನೆ ಪ್ರೆಸ್‍ಕ್ಲಬ್ ಆವರಣದಲ್ಲಿ ನಡೆಯಿತು.

ಕೋಡಿಹಳ್ಳಿ ಚಂದ್ರಶೇಖರ್ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಪ್ರೆಸ್‍ಕ್ಲಬ್‍ನಲ್ಲಿ ಶಾಂತಕುಮಾರ್ ಅವರು ನಡೆಸುತ್ತಿದ್ದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಆಗಮಿಸಿದ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲಿಗರು ಅಡ್ಡಿಪಡಿಸಿದಲ್ಲದೆ ಗಲಾಟೆ ಮಾಡಿದ್ದಾರೆ.

ಕುರುಬೂರು ಶಾಂತಕುಮಾರ್ ಅವರ ಬೆಂಬಲಿಗರು ಕೋಡಿಹಳ್ಳಿ ಚಂದ್ರಶೇಖರ್ ಕಳ್ಳ ಕಳ್ಳ ಎಂದು ಕೂಗಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ನೂರಾರು ರೈತ ಮುಖಂಡರು ಪಾಲ್ಗೊಂಡು ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಮಾಡಿ ಧಿಕ್ಕಾರ ಕೂಗಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಖಂಡರು ಹರಸಾಹಸ ಪಡುವಂತಾಯಿತು. ಕೋಡಿಹಳ್ಳಿ ಬೆಂಬಲಿಗರ ಮೇಲೆ ಆಯಿಲ್ ಎಸೆದು ಆಕ್ರೋಶ ವ್ಯಕ್ತಪಡಿ ಸಿದ್ದು, ಎರಡೂ ಕಡೆ ರೈತ ಮುಖಂಡರ ಕೂಗಾಟ ಜೋರಾಗಿತ್ತು.

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತನಿಖೆಯಾಗಲಿ
ಬೆಂಗಳೂರು, ಮೇ 28- ರೈತ ಚಳವಳಿ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲಿನ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಲಿ, ಸತ್ಯಾಸತ್ಯತೆ ಜನತೆಗೆ ತಿಳಿಯಲಿ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ರೈತ ಹೋರಾಟದ ಶಕ್ತಿಯನ್ನು ಸಹಿಸಲಾಗದೆ ದುರ್ಬಲ ಮಾಡಲು ಕಾಣದ ಕೈಗಳ ಪಿತೂರಿಯಿಂದ ಚುನಾವಣಾ ವರ್ಷದ ರಾಜಕೀಯ ಪಿತೂರಿಯಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಮೂಲಕ ದೊಡ್ಡ ಸುದ್ದಿಯಾಗುತ್ತಿದೆ. ಯಾರೇ ಆಗಲಿ ಹಸಿರುಶಾಲು ಹಾಕಿ ರೈತ ಚಳವಳಿಯ ಮುಖವಾಡ ಧರಿಸಿ ರೈತರಿಗೆ ದ್ರೋಹ ಬಗೆಯುವ ಕಾರ್ಯ ಸರಿಯಲ್ಲ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಒಳನಾಡು ಮೀನುಗಾರರ ಒಕ್ಕೂಟ ಪರವಾಗಿ ಮಾತನಾಡಿದ ಅವರು, ಒಳನಾಡು ಪ್ರದೇಶದ ಸುಮಾರು 28000 ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಮೀನು ಮರಿ ಸಾಕುವ ಮೀನುಗಾರರ ಸಹಕಾರ ಸಂಘಗಳ ಸದಸ್ಯ ಜನರನ್ನು ದೂರವಿಟ್ಟು, ಬಹಿರಂಗ ಹರಾಜು ಮೂಲಕ ಬಲಾಢ್ಯರಿಗೆ ಏತ ನೀರಾವರಿ ಕೆರೆಗಳನ್ನು ಮೀನು ಸಾಕಾಣಿಕೆಗಾಗಿ ಬಹಿರಂಗ ಹರಾಜು ಮೂಲಕ ಹಂಚಲು ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ ಸ್ಥಳೀಯ ಮೀನುಮರಿ ಸಾಕಾಣಿಕೆ ಸಹಕಾರ ಸಂಘಗಳಿಗೆ 2014ರ ನಿಯಮದಂತೆ ಸ್ಥಳೀಯ ಸಂಘಗಳಿಗೆ ಆಧ್ಯತೆ ನೀಡುವ ಕಾರ್ಯ ಮುಂದುವರಿಸಲು ರಾಜ್ಯದ ಒಂದುವರೆ ಲಕ್ಷ ಮೀನುಗಾರರಿಗೆ ರಕ್ಷಣೆಗಾಗಿ ಮೀನುಗಾರಿಕೆ ಸಚಿವರು ಮುಂದಾಗಬೇಕು ಎಂದರು.

ಪ್ರಸಕ್ತ ಸಾಲಿನ ಕಬ್ಬಿನ ಎಫ್‍ಅರ್‍ಪಿ ದರವನ್ನು ಕನಿಷ್ಠ ಟನ್‍ಗೆ 3500 ನಿಗದಿ ಮಾಡಿ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ರಾಜ್ಯದಲ್ಲಿ ಕಬ್ಬು ಪ್ರದೇಶ ಇಳುವರಿ ಏರಿಕೆಯಾಗಿರುವ ಕಾರಣ ಇಂತಹ ಕ್ರಮ ಅತ್ಯವಶ್ಯಕ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘಟನೆ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜï, ಕನಕಪುರ ಶಿವಕುಮಾರ್, ಮೀನು ಕೃಷಿಕರ ಮಹಾಮಂಡಲದ ಪರಮೇಶ್, ರಮಣ, ಲಕ್ಷ್ಮೀನಾರಾಯಣ, ಬಾಬು,ಯೋಗಿ ಮುಂತಾದವರಿದ್ದರು.

Facebook Comments