ಹುಷಾರ್, ರೆಸಾರ್ಟ್ ರಾಜಕೀಯ ಮಾಡಿದರೆ ಪೊರಕೆ ತೊಗಂಡ್ ಹೊಡೀತಾರೆ..!

Kodihalli--01

ಹಾಸನ. ಜ31 : ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣಿಗಳು ರೆಸಾರ್ಟ್ ರಾಜಕಾರಣಕ್ಕೆ ಮುಂದಾದರೆ ರೈತ ಮಹಿಳೆಯರು ರೆಸಾರ್ಟ್ ಗೆ ನುಗ್ಗಿ ಪೊರಕೆ ಸೇವೆ ಮಾಡಲಿದ್ದಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ರೆಸಾರ್ಟ್ ರಾಜಕಾರಣದ ವಿರುದ್ಧ ಗುಡುಗಿದರು ರೆಸಾರ್ಟ್ ನಲ್ಲಿ ಕೂಗಾಡಿದಲ್ಲದೆ ಜನನಾಯಕರಾದ ಶಾಸಕರು ಬಡಿದಾಡಿಕೊಂಡು ದೇಶದಲ್ಲಿ ರಾಜ್ಯ ರಾಜಕಾರಣದ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ.

ಅವರ ಬಡಿದಾಟದಿಂದ ರಾಷ್ಟ್ರಮಟ್ಟದಲ್ಲಿ ಇವರ ಹೇಸಿಗೆ ರಾಜಕಾರಣವನ್ನು ತೋರಿಸಿದ್ದಾರೆ ಇದು ಕೇವಲ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಸಮಸ್ಯೆ ಅಲ್ಲ ಇದು ನಾಡಿನ ಜನತೆಗೆ ಅವಮಾನಿಸಿದಂತೆ ಎಂದು ಕಿಡಿಕಾರಿದರು.

ಮುಂದಿನ ದಿನದಲ್ಲಿ ಇಂತಹ ಹೀನ ರಾಜಕೀಯ ನಿಯಂತ್ರಿಸಲು ಜನರೆ ಮುಂದಾಗಬೇಕು. ಇದು ಮತ್ತೆ ಮುಂದುವರೆದರೆ ರೈತರಷ್ಟೇ ಅಲ್ಲದೆ ಸಾರ್ವಜನಿಕರು ಕೂಡಾ ಒಟ್ಟಾಗಿ ರೇಸಾರ್ಟ್ ಗೆ ನುಗ್ಗಿ ಗೂಸಾ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪದೇ ಪದೇ ರಾಜಿನಾಮೆ ನೀಡುವಂತಹ ಮಾತುಗಳನ್ನಾಡಬಾರದು.

ಈ ರೀತಿ ಮಾತನಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ನಾಡಿನ ದುರ್ಬಲತೆಯನ್ನ ಪ್ರದರ್ಶನ ಮಾಡಿದಂತಾಗುತ್ತದೆ ಸಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಇದ್ದರೆ ಸಮನ್ವಯ ಸಭೆಯಲ್ಲಿ ಕುಳಿತು ಬಗೆಹರಿಸಿಕೊಳ್ಳಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಸಮ್ಮಿಶ್ರ ಸರ್ಕಾರಕ್ಕೆ ಸಲಹೆ ನೀಡಿದರು‌. ಕೇಂದ್ರ ಸರ್ಕಾರದ ಕೊನೆಯ ಬಜೆಟ್ ರೈತರ ಪರ ಬರಲಿದೆ ಎಂದು ನಂಬಿಕೆ ಇದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು

Sri Raghav

Admin