ಕೊಹಿನೂರ್ ವಜ್ರ ಭಾರತಕ್ಕೆ ವಾಪಸ್ ತರಲು ಮಧ್ಯಸ್ಥಿಕೆ ವಹಿಸುವಂತೆ ರಾಷ್ಟಪತಿಗೆ ಒತ್ತಾಯ

Social Share

ಭುವನೇಶ್ವರ, ಸೆ 13 -ಬ್ರಿಟನ್ ರಾಣಿ ಬಳಿಯಿದ್ದ ಕೊಹಿನೂರ್ ವಜ್ರವು ಶ್ರೀ ಜಗನ್ನಾಥ ದೇವರಿಗೆ ಸೇರಿದ್ದಾಗಿದ್ದು ಇದನ್ನು ಭಾರತಕ್ಕೆ ವಾಪಸ್ ತರಲು ರಾಷ್ಟಪತಿ ದ್ರೌಪದಿ ಮುರ್ಮು ಅವರ ಮಧ್ಯಸ್ಥಿಕೆ ವಹಿಸಬೇಕೆಂದು ಒಡಿಶಾದ ಸಾಮಾಜಿಕ-ಸಾಂಸ್ಕøತಿಕ ಸಂಘಟನೆ ಒತ್ತಾಯಿಸಿದೆ.

ರಾಣಿ ಎಲಿಜಬೆತ್ 11 ರ ಮರಣದ ನಂತರ, ಆಕೆಯ ಮಗ ಪ್ರಿನ್ಸ್ ಚಾಲ್ಸರ್ ಬ್ರಿಟನ್ ರಾಜ ಸಿಂಹಾಸನ ಅಲಂಕರಿಸಿದ್ದು ಈಗ 105-ಕ್ಯಾರೆಟ್ ವಜ್ರ ಇರುವ ಕಿರೀಟ ಅವರ ಪತ್ನಿಯಾದ ರಾಣಿ ಕಾನ್ರ್ವಾಲ್ ಕ್ಯಾಮಿಲ್ಲಾ ಹೋಗುತ್ತದೆ.

ಪಂಜಾಬ್ ಮಹಾರಾಜರಾಗಿದ್ದ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಪುರಿ ಭಗವಂತನಿಗೆ ವಜ್ರವನ್ನು ದಾನ ಮಾಡಿದ್ದರು ನಂತರ ರಣಜಿತ್ ಸಿಂಗ್ 1839 ರಲ್ಲಿ ನಿಧನರಾದರು, ಅವರ ಮಗ ದುಲೀಪ್ ಸಿಂಗ್ ಅಧಿಕಾರ ವಹಿಸಿಕೊಂಡು 10 ವರ್ಷಗಳ ನಂತರ, ಬ್ರಿಟಿಷರು ಕೊಹಿನೂರ್ ವಜ್ರವನ್ನು ಕಿತ್ತುಕೊಂಡು ಬ್ರಿಟನ್‍ಗೆ ಸಾಗಿಸಿದರು ಎಂದು ಶ್ರೀ ಜಗನ್ನಾಥ ಸೇನೆಯ ಸಂಚಾಲಕ ಪಟ್ನಾಯಕ್ ಹೇಳಿದ್ದಾರೆ.

12ನೇ ಶತಮಾನದ ಪುರಿ ಜದನ್ನಾಥ ದೇಗುಲಕ್ಕೆ ಮತ್ತೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಅವರು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ.

ರಾಜ ಮನೆತನಕ್ಕೂ ಈ ವಜ್ರ ದೇವರಿಗೆ ಸೇರಿದ್ದು ಎಂದು ತಿಳಿದಿದೆ ಈ ನಿಟ್ಟಿನಲ್ಲಿ ರಾಣಿಗೆ ಅಕ್ಟೋಬರ್ 19, 2016 ರಂದು ಪತ್ರವನ್ನು ಕಳುಹಿಸಿದ ನಂತರ ಬಕಿಂಗ್‍ಹ್ಯಾಮ್ ಅರಮನೆಯಿಂದ ಸಂವಹನವನ್ನು ಸ್ವೀಕರಿಸಿದರು, ಯುನೈಟೆಡ್ ಕಿಂಗ್ಡಮ್ ಸರ್ಕಾರಕ್ಕೆ ನೇರವಾಗಿ ಮನವಿ ಮಾಡುವಂತೆ ಕೇಳಿಕೊಂಡರು ಅವರ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ

ಪಟ್ನಾಯಕ್ ಅವರು ಆ ಪತ್ರದ ಪ್ರತಿಯನ್ನು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರಕ್ಕೆ ಲಗತ್ತಿಸಲಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ಮಾಡಲಾಗಿದೆ ಎಂದರು. ಆರು ವರ್ಷಗಳ ಕಾಲ ಈ ವಿಷಯದ ಬಗ್ಗೆ ಏಕೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಲಾಗಿ, ಇಂಗ್ಲೆಂಡ್‍ಗೆ ಭೇಟಿ ನೀಡಲು ವೀಸಾ ನಿರಾಕರಿಸಲಾಗಿದೆ, ಇದರಿಂದಾಗಿ ಬ್ರಿಟನ್ ಸರ್ಕಾರದೊಂದಿಗೆ ವಿಷಯವನ್ನು ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ಪಟ್ನಾಯಕ್‍ ಹೇಳಿದರು.

ಮಹಾರಾಜ ರಂಜಿತ್ ಸಿಂಗ್ ಅವರ ಮರಣದ ಮೊದಲು ಉಯಿಲಿನಲ್ಲಿ ಜಗನ್ನಾಥ ದೇವರಿಗೆ ಕೊಹಿನೂರ್ ವಜ್ರ ದಾನ ಮಾಡಿದ್ದು ಉಲ್ಲೇಖವಾದ ದಾಖಲೆಯನ್ನು ಬ್ರಿಟಿಷ್ ಸೇನೆ ಅಧಿಕಾರಿಯೊಬ್ಬರು ಪ್ರಮಾಣೀಕರಿಸಿದ್ದಾರೆ, ಅದರ ಪುರಾವೆ ದೆಹಲಿಯ ರಾಷ್ರೀಯ ದಾಖಲೆ ವಿಭಾಗದಲ್ಲಿ ಲಭ್ಯವಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ.

ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಸಂಸದ ಭೂಪಿಂದರ್ ಸಿಂಗ್ 2016 ರಲ್ಲಿ ರಾಜ್ಯಸಭೆಯಲ್ಲಿ ವಜ್ರವನ್ನು ಮರಳಿ ತರುವ ವಿಷಯವನ್ನು ಪ್ರಸ್ತಾಪಿಸಿದ್ದರು. ಕೊಹಿನೂರ್ ವಜ್ರವನ್ನು ಲಾಹೋರ್ ಮಹಾರಾಜರು ಶರಣಾಗತಿ ವೇಳೆ ಆಗಿನ ಇಂಗ್ಲೆಂಡ್‍ರಾಣಿಗೆ ನೀಡಿದ್ದರು ಮತ್ತು ಸುಮಾರು 170 ವರ್ಷಗಳ ಹಿಂದೆ ಬ್ರಿಟಿಷರಿಗೆ ಹಸ್ತಾಂತರಿಸಲಾಗಿಲ್ಲ ಎಂದು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಕೆಲವು ವರ್ಷಗಳ ಹಿಂದೆ ಆರ್‍ಟಿಐಐ ಪ್ರಶ್ನೆಗೆ ಉತ್ತರಿಸಿದೆ.

200 ಮಿಲಿಯನ್ ಕೋಟಿಗೂ ಹೆಚ್ಚು ಬೆಲೆಯ ಅಂದಾಜಿನ ವಜ್ರವನ್ನು ಬ್ರಿಟಿಷ್ ಆಡಳಿತಗಾರರು ಕದ್ದಿಲ್ಲ ಅಥವಾ ಬಲವಂತವಾಗಿ ತೆಗೆದುಕೊಂಡಿಲ್ಲ, ಆದರೆ ಪಂಜಾಬ್ ಹಿಂದಿನ ಆಡಳಿತಗಾರರು ಈಸ್ಟ ಇಂಡಿಯಾ ಕಂಪನಿಗೆ ನೀಡಿದ್ದರು ಎಂಬುದು ಸುಪ್ರೀಂ ಕೋರ್ಟ್‍ನಲ್ಲಿ ಭಾರತ ಸರ್ಕಾರದ ತಿಳಿಸಿತ್ತು.

ವಿಶ್ವದ ಅತ್ಯಮೂಲ್ಯ ರತ್ನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಕೊಹಿನೂರ್ 14 ನೇ ಶತಮಾನದಲ್ಲಿ ದಕ್ಷಿಣ ಭಾರತದ ಕೊಲ್ಲೂರು ಗಣಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯ ಸಮಯದಲ್ಲಿ ಭಾರತದಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ.ಇದೆಲ್ಲದರ ನಡುವೆ ಮತ್ತೆ ವಿಷಯ ಚರ್ಚೆಗೆ ಬಂದಿದೆ.

Articles You Might Like

Share This Article