ಧೋನಿ ಈಗಲೂ ನನಗೆ ಮಾರ್ಗದರ್ಶಕ ; ಕೊಹ್ಲಿ

Social Share

ನವದೆಹಲಿ,ಫೆ.25- ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ ಮತ್ತೊಮ್ಮೆ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಗುಣಗಾನ ಮಾಡಿದ್ದಾರೆ. ಕ್ರಿಕೆಟ್‍ನಲ್ಲಿ ನಾನು ಮಾಡಿರುವ ಸಾಧನೆಗೆ ನನ್ನ ಬಾಲ್ಯದ ತರಬೇತುದಾರ, ಕುಟುಂಬ ಹಾಗೂ ಪತ್ನಿ ಅನುಷ್ಕಾ ಎಷ್ಟು ಮುಖ್ಯವೋ ಅದೇ ರೀತಿ ಧೋನಿ ಕೂಡ ಬಹು ಮುಖ್ಯ ವ್ಯಕ್ತಿ ಎಂದು ಕೋಹ್ಲಿ ಬಣ್ಣಿಸಿದ್ದಾರೆ.

15 ವರ್ಷಗಳ ವೃತ್ತಿಜೀವನದಲ್ಲಿ ಭಾರತಕ್ಕಾಗಿ 106 ಟೆಸ್ಟ್ , 271 ಏಕದಿನ ಮತ್ತು 115 ಟಿ20 ಪಂದ್ಯಗಳನ್ನಾಡಿ 25000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿರುವ ಕೋಹ್ಲಿ ಅವರು, ಪಾಡ್‍ಕಾಸ್ಟ್ ಸೀಸನ್ 2ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಮಾದಕ ವ್ಯಸನದಿಂದ ದೂರವಿರುವಂತೆ ಕಾಂಗ್ರೆಸ್ ಸದಸ್ಯರಿಗೆ ಸೂಚನೆ

ಬಾಲ್ಯದಲ್ಲಿ ನನ್ನು ಕುಟುಂಬ, ಪ್ರಾಕ್ಟಿಸ್ ಸಂದರ್ಭದಲ್ಲಿ ನನ್ನ ತರಬೇತುದಾರ ನೀಡಿದ ಮಾರ್ಗದರ್ಶನದಂತೆ ಧೋನಿ ಅವರು ಕ್ರಿಕೆಟ್ ಮೈದಾನದಲ್ಲಿ ನನ್ನ ಮಾರ್ಗದರ್ಶಕರಾಗಿದ್ದರು ಎಂದು ಕೋಹ್ಲಿ ಹೇಳಿಕೊಂಡಿದ್ದಾರೆ.
2008ರಿಂದ 2019 ರವರೆಗೆ ಧೋನಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ನನಗೆ ಲಭಿಸಿದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಅವರು ಸ್ಮರಿಸಿಕೊಂಡಿದ್ದಾರೆ.

2022ರಲ್ಲಿ ಕೊಂಚ ಸುಧಾರಿಸಿದೆ ನಿರುದ್ಯೋಗ ಸಮಸ್ಯೆ

ಮಾನಸಿಕವಾಗಿ ಸದೃಢರಾಗಿರುವುದು, ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಧೋನಿ ಅವರಿಂದ ಕಲಿತಿದ್ದೇನೆ ಅವರು ಯಾವಾಗಲೂ ನಮಗೆ ದಾರಿ ತೋರಿಸುವ ಮಾರ್ಗದರ್ಶಕರಾಗಿದ್ದಾರೆ ಎಂದು ಕೋಹ್ಲಿ ಹೇಳಿದ್ದಾರೆ.

Kohli, opens, relationship, Dhoni,

Articles You Might Like

Share This Article