ಬೆಂಗಳೂರು,ಸೆ.16- ಕೋಲಾರ ಜಿಲ್ಲೆಯಲ್ಲಿ ಶಿಥಿಲೀಕರಣ ಮತ್ತು ಉಗ್ರಾಣ ಸ್ಥಾಪನೆಗೆ ಅನುದಾನ ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ. ಸದಸ್ಯ ಗೋವಿಂದರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕರ್ನಾಟಕ ಉಗ್ರಾಣ ನಿಗಮ 17.22 ಲಕ್ಷ ಮೆಟ್ರಿಕ್ ಟನ್ ಸ್ವಂತ ಸಂಗ್ರಹಣ ಸಾಮಥ್ರ್ಯದ 157 ವೈಜ್ಞಾನಿಕ ಉಗ್ರಾಣಗಳನ್ನು ಹೊಂದಿವೆ.
ಕೃಷಿ ಇಲಾಖೆ 4,54,650 ಮೆಟ್ರಿಕ್ ಟನ್ ಸಾಮಥ್ರ್ಯದ 1030 ಉಗ್ರಾಣಗಳನ್ನು ಹೊಂದಿವೆ. ಜೊತೆಗೆ 2500 ಮೆಟ್ರಿಕ್ ಟನ್ ಸಾಮಥ್ರ್ಯದ 13 ಶಿಥಿಲೀಕರಣ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇವುಗಳಿಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ಕಾಮಗಾರಿ ಆರಂಭವಾಗಲಿದೆ.
1,241 ಲಕ್ಷ ರೂ.ಗಳನ್ನು ಇದಕ್ಕಾಗಿ ಖರ್ಚು ಮಾಡಲಾಗುತ್ತದೆ ಎಂದು ತಿಳಿಸಿದರು.ರಾಜ್ಯದಲ್ಲಿ 2009ರಿಂದ 18ರವರೆಗೆ ಜಾರಿಯಲ್ಲಿದ್ದ ಭೂ ಚೇತನ ಯೋಜನೆಯ ಮೊದಲ ಮತ್ತು 2ನೇ ಹಂತದ ಕಾಲಾವ ಮುಗಿದಿದೆ. ಕೇಂದ್ರ ಸರ್ಕಾರದ ಈ ಯೋಜನೆ ಅವ ಮುಗಿದಿದೆ ಎಂದರು.
ಕಳೆದ 5 ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆಯ ದರ ಏರಿಳಿಕೆಯಾಗಿದೆ. ಒಟ್ಟು ಜಿಡಿಪಿ 2017-18ರಲ್ಲಿ ಶೇ.6.5ರಷ್ಟಿದ್ದರೆ, 2018-19ರಲ್ಲಿ 6.2ರಷ್ಟಿತ್ತು. 2019-20ರಲ್ಲಿ 7.3ರಷ್ಟಿತ್ತು. 2020-21ರಲ್ಲಿ -1ರಷ್ಟಿತ್ತು. 2021-22ರಲ್ಲಿ ಶೇ.8ರಷ್ಟಾಗಿದೆ. ಸರಾಸರಿ ಜಿಡಿಪಿ ಶೇ.5.40ರಷ್ಟು ಎಂದು ವಿವರಿಸಿದರು.
ಕೃಷಿ ಇಲಾಖೆ ಜಿಡಿಪಿ 2017-18ರಲ್ಲಿ ಶೇ.27ರಷ್ಟಿದ್ದದು ಏರಿಳಿತಗಳಿಂದಾಗಿ ಕಳೆದ ವರ್ಷಕ್ಕೆ 2.2ರಷ್ಟಾಗಿದೆ. ಒಟ್ಟಾರೆ ಶೇ.10.14ರಷ್ಟಿದೆ. ಕೈಗಾರಿಕೆ ಜಿಡಿಪಿ ಶೇ.1.58ರಷ್ಟಿದೆ. ಸೇವಾ ವಲಯ ಶೇ.6.38ರಷ್ಟಿದೆ ಎಂದು ವಿವರಣೆ ನೀಡಿದರು.