ಕೊಳ್ಳೇಗಾಲ : ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ

ಕೊಳ್ಳೇಗಾಲ,ಸೆ.22– ತಾಲೂಕಿನ ಸತ್ತೇಗಾಲ ಹ್ಯಾಂಡ್‌ ಪೋಸ್ಟ್‌ನ ಹೋಟೆಲ್‌ ಒಂದರ ಬಳಿ ಕಾರಿನಲ್ಲಿ ವ್ಯಕ್ತಿಯೊಬ್ಬ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕಳೆದ ಮೂರು ನಾಲ್ಕು ದಿನಗಳಿಂದ ಹೋಟೆಲ್‌ ಮುಂದೆ ಕಾರು ನಿಂತಿರುವುದನ್ನು ಗಮನಿಸಿದ ಸಾರ್ವಜನಿಕರು ಯಾರೋ ಪ್ರವಾಸಿಗರು ಕಾರನ್ನು ಇಲ್ಲಿ ನಿಲ್ಲಿಸಿ ಹೋಗಿರಬಹುದು ಎಂದುಕೊಂಡಿದ್ದರು. ಆದರೆ ನಿನ್ನೆ ಸಂಜೆ ಕಾರಿನಲ್ಲಿ ಕೆಟ್ಟ ವಾಸನೆ ಬರುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿ ಕಾರಿನ ಬಳಿ ನೋಡಿದ್ದಾರೆ. ಕಾರಿನೊಳಗೆ ಹಿಂಬದಿಯ ಸೀಟಿನಲ್ಲಿ ವ್ಯಕ್ತಿ ಮಲಗಿರುವುದು ಕಂಡಿದೆ. ದುರ್ವಾಸನೆ ಬರುತ್ತಿರುವುದರಿಂದ ವ್ಯಕ್ತಿ ಮೃತಪಟ್ಟಿರಬಹುದು … Continue reading ಕೊಳ್ಳೇಗಾಲ : ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ