565 ಕೋಟಿ ರೂ. ಚಿಟ್ ಫಂಡ್ ಅಕ್ರಮ ಪ್ರಕರಣ : ಸಿಬಿಐನಿಂದ ನಾಲ್ವರ ಬಂಧನ

Social Share

ಕೋಲ್ಕತ್ತಾ, ಸೆ.28 – ಸುಮಾರು 565 ಕೋಟಿ ರೂ. ಚಿಟ್ ಫಂಡ್ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಕೋಲ್ಕತ್ತಾದಲ್ಲಿ ಇಂದು ದಾಳಿ ನಡೆಸಿ ಕಂಪನಿ ವ್ಯವಹಾರಗಳ ಮಾಜಿ ಉಪ ರಿಜಿಸ್ಟ್ರಾರ್ ಮತ್ತು ಇತರೆ ಮೂವರನ್ನು ಬಂಧಿಸಿದೆ.
ಖಾಸಗಿ ಕಂಪನಿಗಳ ಸಂಸ್ಥಾಪಕ ನಿರ್ದೇಶಕರು ಮತ್ತು ಇಬ್ಬರು ಪ್ರಾದೇಶಿಕ ವ್ಯವಸ್ಥಾಪಕರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನಿನಿಟಿ ರಿಯಲ್ಕಾನ್ ಲಿಮಿಟೆಡ್ ಹೆಸರಿನಲ್ಲಿ ಒಡಿಶಾದಲ್ಲಿ ಜನರನ್ನು ಆಕರ್ಷಿಸಿ, ಹೆಚ್ಚಿನ ಆದಾಯ ನೀಡುವ ಭರವಸೆ ನೀಡಿ 565 ಕೋಟಿ ರೂ.ಠೇವಣಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಅದು ಪಶ್ಚಿಮ ಬಂಗಾಳಕ್ಕೂ ಹಬ್ಬಿ ಜನರನ್ನು ಮರಳು ಮಾಡಲಾಗಿತ್ತು. ನಂತರ ಅಕ್ರಮ ತಿಳಿಯುತ್ತಿದ್ದಂತೆ ಜನರು ಪ್ರತಿಭಟನೆ ನಡೆಸಿ, ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ : BIG NEWS: ದೇಶದ್ರೋಹಿ PFI ಸಂಘಟನೆ ಬ್ಯಾನ್, ಕೇಂದ್ರ ಸರ್ಕಾರ ಖಡಕ್ ನಿರ್ಧಾರ

ಬಹು ಕೋಟಿ ಹಗರಣ ಕುರಿತು ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಲಾಗಿತ್ತು. ನಂತರ ವಿಚಾರಣೆ ನಡೆಸಿ 2014ರಲ್ಲಿ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ತನಿಖೆ ಕೈಗೊಂಡಾಗ ಇದು ಅಂತಾರಾಜ್ಯ ವಂಚನೆ ಪ್ರಕರಣ ಎಂದು ತಿಳಿದು ಬಂದಿತ್ತು. ಅಕ್ರಮ ನಡೆಸಲು ಕೋಲ್ಕತ್ತಾದಲ್ಲಿಯೂ ಕಂಪನಿ ಶಾಖೆ ತೆರೆದಿದ್ದನ್ನು ಪತ್ತೆ ಹಚ್ಚಿದಾಗ ಅದರಲ್ಲಿ ಕಂಪನಿ ವ್ಯವಹಾರಗಳ ಉಪ ರಿಜಿಸ್ಟ್ರಾರ್ ಪಾತ್ರ ಕಂಡು ಬಂದಿತ್ತು.

ಪ್ರಸ್ತುತ ಕೋಲ್ಕತ್ತಾದಲ್ಲಿ ಕಂಪನಿಗಳ ಉಪ ರಿಜಿಸ್ಟ್ರಾರ್ ಆಗಿದ್ದ ಸುಭಾ ಕುಮಾರ್ ಬ್ಯಾನರ್ಜಿ, ಕಂಪನಿಯ ಸಂಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಶ್ರೀನಿವಾಸನ್ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ. ಮೆಚ್ಯೂರಿಟಿ ಮೊತ್ತವನ್ನು ಹೂಡಿಕೆ ಮಾಡಿದ್ದ ಜನರಿಗೆ ಮರು ಪಾವತಿಸದೆ ಇವರು ಬಳಸಿಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಆಗಿನ ಕಂಪನಿಗಳ ಡೆಪ್ಯುಟಿ ರಿಜಿಸ್ಟ್ರಾರ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರಣಬ್ ಮುಖರ್ಜಿ ಅಕ್ರಮ ಠೇವಣಿ ಸಂಗ್ರಹ ವ್ಯವಹಾರವನ್ನು ಸುಗಮಗೊಳಿಸಿದ್ದರು ಎಂದು ಸಿಬಿಐ ಆರೋಪ ಹೊರಿಸಿದೆ.

Articles You Might Like

Share This Article